ವಿಜಯಪುರ ನೂತನ ಎಸ್ಪಿ ಎಚ್. ಡಿ. ಆನಂದ ಕುಮಾರ ಅಧಿಕಾರ ಸ್ವೀಕಾರ- ಶುಕ್ರವಾರ ರಾತ್ರಿಯೇ ಕರ್ತವ್ಯಕ್ಕೆ ಹಾಜರಾದ ಕನ್ನಡಿಗ ಎಸ್ಪಿ

ವಿಜಯಪುರ: ವಿಜಯಪುರ ನೂತನ ಎಸ್ಪಿಯಾಗಿ ಎಚ್. ಡಿ. ಆನಂದ ಕುಮಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಈವರೆಗೆ ಆಂತರಿಕ ಭದ್ರತೆ ವಿಭಾಗದ ಎಸ್ಪಿಯಾಗಿದ್ದ ಎಚ್. ಡಿ. ಆನಂದ ಕುಮಾರ ಅವರನ್ನು ಸರಕಾರ ಇತ್ತೀಚೆಗೆ ವಿಜಯಪುರ ಎಸ್ಪಿಯಾಗಿ ವರ್ಗಾವಣೆ ಮಾಡ ವರ್ಗಾವಣೆ ಮಾಡಿತ್ತು. ಆದರೆ, ಮೂವಮೆಂಟ್ ಆರ್ಡರ್ ಬಾರದ ಹಿನ್ನೆಲೆಯಲ್ಲಿ ಈವರೆಗೆ ನೂತನ ಎಸ್ಪಿ ವಿಜಯಪುರಕ್ಕೆ ವರದಿ ಮಾಡಿಕೊಳ್ಳುವುದು ವಿಳಂಬವಾಗಿತ್ತು.

ವಿಜಯಪುರ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಎಚ್. ಡಿ. ಆನಂದಕುಮಾರ

ಶುಕ್ರವಾರ ರಾತ್ರಿ ಮೂವಮೆಂಟ್ ಆರ್ಡರ್ ಬಂದ ಹಿನ್ನಲೆಯಲ್ಲಿ ಡಿಜಿ ಆದೇಶದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಆಂತರಿಕ ಭದ್ರತೆ ವಿಭಾಗದಿಂದ ರಿಲೀವ್ ಆದ ಎಚ್. ಡಿ. ಆನಂದ ಕುಮಾರ ಶನಿವಾರ ರಾತ್ರಿ 10 ಗಂಟೆಗೆ ವಿಜಯಪುರಕ್ಕೆ ಆಗಮಿಸಿದರು. ನೂತನ ಎಸ್ಪಿ ಅವರನ್ನು ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಸ್ವಾಗತಿಸಿದರು.

ನಂತರ ವರದಿ ಮಾಡಿಕೊಂಡ ಎಸ್ಪಿ ಹಿರಿಯ ಪೊಲೀಸ್ ಅಧಿಕಾರಿಗಳ ಮೊದಲ ಸಭೆ ನಡೆಸಿದರು.

ಎಚ್. ಡಿ. ಆನಂದ ಕುಮಾರ 2012ನೇ ವರ್ಷದ ಐಪಿಎಸ್ ಅಧಿಕಾರಿಯಾಗಿದ್ದು, ಈಗಾಗಲೇ ಚಾಮರಾಜನಗರ ಎಸ್ಪಿಯಾಗಿ, ಬೆಂಗಳೂರಿನಲ್ಲಿ ನಾನಾ ವಿಭಾಗಗಳಲ್ಲಿಯೂ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ.

ವಿಜಯಪುರ ನೂತನ ಎಸ್ಪಿ ಎಚ್. ಡಿ. ಆನಂದ ಕುಮಾರ

ಎಚ್. ಡಿ. ಆನಂದ ಕುಮಾರ ಅವರಿಗೂ ವಿಜಯಪುರಕ್ಕೂ ಹಳೆಯ ನಂಟಿದೆ. ಈ ಹಿಂದೆ ವಿಜಯಪುರ ನಗರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಆರೋಪ ಪ್ರಕರಣವನ್ನು ಸರಕಾರ ಸಿಐಡಿಗೆ ವಹಿಸಿದಾಗ ಇದೇ ಆನಂದ ಕುಮಾರ ವಿಜಯಪುರಕ್ಕೆ ಆಗಮಿಸಿ ಪ್ರಕರಣದ ತನಿಖೆ ನಡೆಸಿದ್ದರು.

ಅಷ್ಟೇ ಅಲ್ಲ, ಭೀಮಾ ತೀರದ ಧರ್ಮರಾಜ ಚಡಚಣ ನಕಲಿ ಎನಕೌಂಟರ್ ಮತ್ತು ಆತನ ಸಹೋದರ ಗಂಗಾಧರ ಚಡಚಣ ನಿಗೂಢ ಕೊಲೆ ಆರೋಪ ಪ್ರಕರಣವನ್ನು ಸಿಐಡಿ ಗೆ ವಹಿಸಿದಾಗ ಇದೇ ಎಚ್. ಡಿ. ಆನಂದ ಕುಮಾರ ವಿಜಯಪುರಕ್ಕೆ ಆಗಮಿಸಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.

ಇನ್ನು ಮುಂದೆ ಎಚ್. ಡಿ. ಆನಂದ ಕುಮಾರ ವಿಜಯಪುರ ನೂತನ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಅಂದ ಹಾಗೆ ಎಚ್. ಡಿ. ಆನಂದ ಕುಮಾರ ಮೂಲತಃ ಕರ್ನಾಟಕದವರಾಗಿದ್ದು, ಕನ್ನಡಿಗರಾಗಿರುವುದು ವಿಜಯಪುರ ಜಿಲ್ಲೆಯ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳಲು ಮತ್ತಷ್ಟು ಅನುಕೂಲವಾಗಲಿದೆ.

Leave a Reply

ಹೊಸ ಪೋಸ್ಟ್‌