ವಿಜಯಪುರ: ಬಸವಣ್ಣನವರ ಕಾಯಕಕ್ಕೆ ಹಡಪದ ಅಪ್ಪಣ್ಣನವರು ಆಧಾರ ಸ್ತಂಭವಾಗಿದ್ದರು, ಆಪ್ತ ಕಾರ್ಯದರ್ಶಿಯಾಗಿ ಅಚ್ಚುಮೆಚ್ಚಿನ ಶರಣರಾಗಿದ್ದರು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ ಅಧ್ಯಕ್ಷ ಜಗದೀಶ ಸಾಲಳ್ಳಿ ಹೇಳಿದರು.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ಬಸವ ಪ್ರಿಯ ಹಡಪದ ಅಪ್ಪಣ್ಣ ಸಮಾಜ ಸೇವಾ ಅಭಿವೃದ್ಧಿ ಸಂಘ ಯಲ್ಲಮದೇವಿ ದೇವಸ್ಥಾನ ಸಭಾಂಗಣದಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಅಪ್ಪಣ್ಣನವರು ಸದಾಕಾಲ ಬಸವಣ್ಣನವರೊಂದಿಗೆ ಇರುತ್ತಿದ್ದರು. ಬಸವಣ್ಣನವರನ್ನು ಭೇಟಿ ಮಾಡಲು ಬರುವವರು ಮೊದಲು ಅಪ್ಪಣ್ಣನವರ ಅನುಮತಿ ಪಡೆಯಬೇಕಿತ್ತು ಎಂದು ಹೇಳಿದರು.
ಮಾಜಿ ಸಚಿವರಾದ ಸಂಗಣ್ಣ ಕೆ. ಬೆಳ್ಳುಬ್ಬಿ ಮಾತನಾಡಿ ಶರಣರು ಸಮಸಮಾಜ ಕಟ್ಟಲು ಶ್ರಮಿಸಿದ್ದಾರೆ. ಯಾವುದೇ ಉದ್ಯೋಗವೂ ಕೀಳು ಮಟ್ಟದ್ದಲ್ಲ. ಪ್ರತಿಯೊಂದು ವೃತ್ತಿಗೂ ಅದರದೇ ಆದ ಮಹತ್ವವಿದೆ. ಎಲ್ಲ ವೃತ್ತಿಗಳೂ ಸೇರಿದಾಗ ಮಾತ್ರ ಸಮಗ್ರ ಸಮಾಜ ನಿರ್ಮಾಣ ಸಾಧ್ಯ, ಶರಣರು ನುಡಿದಂತೆ ನಡೆದು ಬದುಕಿದರು ಎಂದು ಹೇಳಿದರು.
ಮಸೂತಿ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿದರು. ರೋಣಿಹಾಳದ ರಾಜಶೇಖರಯ್ಯ ರು ಹಿರೇಮಠ, ಗದಗ ಪಂಚಾಕ್ಷರಿ ಗವಾಯಿಗಳ ಆಶ್ರಯದ ಗಾನಯೋಗಿ ಮಲ್ಲಿಕಾರ್ಜುನ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಗ್ರಾ. ಪಂ. ಅಧ್ಯಕ್ಷ ಉಮೇಶ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು.
ಯಡಿಯೂರು ಸಿದ್ಧಲಿಂಗೇಶ್ವರ ವಿ. ವ. ಸಂಘದ ಅಧ್ಯಕ್ಷ ಜಿ. ಆರ್. ನ್ಯಾಮಗೌಡ್ರ, ಕಾರ್ಯದರ್ಶಿ ಓ. ಎಸ್. ಪಾಟೀಲ, ಮಲ್ಲು ದೇಸಾಯಿ ಬೀಳಗಿ, ಬಸಗೊಂಡ ಜಗದಾಳ, ರಮೇಶ ಮಮದಾಪುರ, ರಮೇಶ ಗಾಯಕವಾಡ, ರೋಣಿಹಾಳ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ ಪಾರಗೊಂಡ, ಶಿಕ್ಷಕರಾದ ಡಿ. ಎಸd. ಲಮಾಣಿ, ದುಂಡಪ್ಪ ಹಡಪದ, ಚೋಳಪ್ಪ ಹಡಪದ, ಪುಂಡಲೀಕ ಹಡಪದ, ಜಿ.ಆಯ್ ಗೊಡ್ಯಾಳ, ಜಿ. ಆಯ್. ಗೊಡ್ಯಾಳ, ಮಾನಪ್ಪ ಬಡಿಗೇರ, ಮಹಾಂತಯ್ಯ ಮಠಪತಿ ಮುಂತಾದವರು ಉಪಸ್ಥಿತರಿದ್ದರು.