ಇಂಡಿಯ ಖ್ಯಾತ ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರೀಗ ಕಾನೂನು ರತ್ನಾಕರ ಬಿರುದಾಂಕಿತ

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿಯ ಖ್ಯಾತ ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರಿಗೆ ಕಾನೂನು ರತ್ನಾಕರ ಎಂದು ಅಭಿಮಾನಿಗಳು ಮತ್ತು ಹಿತೈಷಿಗಳು ಬಿರುದು ನೀಡಿ ಗೌರವಿಸಿದ್ದಾರೆ. ಇಂಡಿಯಲ್ಲಿ ಹಾಸನ ಜಿಲ್ಲೆಯ ಕುರುವಂಶದ ಶಾನುಭೋಗ ದಾನಪ್ಪ ದತ್ತಿ ಸಂಘಟನೆ ಮತ್ತು ಇಂಡಿ ತಾಲೂಕುಬ್ರಾಹ್ಮಣರ ಸಮಾಜ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೀರಿಟ ಧಾರಣೆ ಮಾಡಿ ಕಾನೂನು ರತ್ನಾಕರ ಬಿರುದಾಂಕಿತ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷಾತೀತವಾಗಿ ಪಾಲ್ಗೋಂಡ ಜನಪ್ರತಿನಿಧಿಗಳು, ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರ ಗುಣಗಾನ ಮಾಡಿದರು. ಇಂಡಿ […]

ರಾಜ್ಯದಲ್ಲಿ ಜನಮನ್ನಣೆ ಇಲ್ಲದ ಸರಕಾರದಿಂದ ಜನಪರ ಕಾರ್ಯಕ್ರಮ ಅಸಾಧ್ಯ- ಎಚ್. ಸಿ. ಮಹಾದೇವಪ್ಪ

ವಿಜಯಪುರ: ರಾಜ್ಯದಲ್ಲಿ ಜನಮನ್ನಣೆ ಇಲ್ಲದ ಸರಕಾರ ಅಸ್ತಿತ್ವದಲ್ಲಿದ್ದುದರಿಂದ ಜನಪರ ಕಾರ್ಯಕ್ರಮಗಳನ್ನು ನೀಡಲು ಅಸಾಧ್ಯವಾಗಿದೆ ಎಂದು ಮಾಜಿ ಸಚಿವ ಎಚ್. ಸಿ. ಮಹಾದೇವಪ್ಪ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಲ್ಲ ನಾಯಕರಿಗೆ ಸಿಎಂ ಆಗಬೇಕು ಎನ್ನುವ ಬಯಕೆಯಿದೆ. ಮುಖ್ಯಮಂತ್ರಿ ಸ್ಥಾನ ಎಂದರೆ ಅದೇನು ಸಂತೆಯಲ್ಲಿ ಸಿಗುವ ಬದನೆಕಾಯಿನಾ? ಎಂದು ಸದ್ಯದ ರಾಜ್ಯದ ಬೆಳವಣಿಗೆ ಕುರಿತು ತೀಕ್ಷವಾಗಿ ಪ್ರತಿಕ್ರಿಯೆ ‌ನೀಡಿದರು. ಸಿಎಂ ಸ್ಥಾನ ಸಂವಿಧಾತ್ಮಕ ಹುದ್ದೆ. ಅದಕ್ಕೆ ಅದರದೇ ಆದ ಕಾನೂನು ಚೌಕಟ್ಟು, ಘನತೆ ಇದೆ. ಆ […]

ಮೀನು ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ- ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್

ವಿಜಯಪುರ ನಗರದ ಹೋಟೆಲ್ ಟೌನ್ ಪ್ಯಾಲೇಸ್ ನಲ್ಲಿ ಮೀನುಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಬಯೋಪ್ಲಾಕ್ ಭಾರತ, ನವದೆಹಲಿಯ ಬಯೋಪ್ಲಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ನಡೆದ ಜೀವಂತ ಹಾವು ಭತ್ತಿ ಮೀನಿನ(ಸ್ನೇಕ್ ಹೆಡ್ ಫಿಶ್) ಕೋಯ್ಲು ಮತ್ತು ಮಾರುಕಟ್ಟೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಾಣಿಜನ್ಯ ಪ್ರೋಟಿನ್ ಬೇಡಿಕೆ ಪ್ರತಿವರ್ಷ ಹೆಚ್ಚಾಗುತ್ತಿದೆ. ಇದರಿಂದ ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವ ಮತ್ತು ಗುಣಮಟ್ಟದ ಪ್ರೋಟಿನ್ ಒದಗಿಸುವುದು ದೊಡ್ಡ ಸವಾಲಾಗಿದೆ ಎಂದು ತಿಳಿಸಿದರು. ಭೂತನಾಳ ಮೀನುಗಾರಿಕೆ ಸಂಶೋಧನಾ ಮತ್ತು […]