ಮೀನು ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ- ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್

ವಿಜಯಪುರ ನಗರದ ಹೋಟೆಲ್ ಟೌನ್ ಪ್ಯಾಲೇಸ್ ನಲ್ಲಿ ಮೀನುಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಬಯೋಪ್ಲಾಕ್ ಭಾರತ, ನವದೆಹಲಿಯ ಬಯೋಪ್ಲಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ನಡೆದ ಜೀವಂತ ಹಾವು ಭತ್ತಿ ಮೀನಿನ(ಸ್ನೇಕ್ ಹೆಡ್ ಫಿಶ್) ಕೋಯ್ಲು ಮತ್ತು ಮಾರುಕಟ್ಟೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಣಿಜನ್ಯ ಪ್ರೋಟಿನ್ ಬೇಡಿಕೆ ಪ್ರತಿವರ್ಷ ಹೆಚ್ಚಾಗುತ್ತಿದೆ. ಇದರಿಂದ ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವ ಮತ್ತು ಗುಣಮಟ್ಟದ ಪ್ರೋಟಿನ್ ಒದಗಿಸುವುದು ದೊಡ್ಡ ಸವಾಲಾಗಿದೆ ಎಂದು ತಿಳಿಸಿದರು.

ಭೂತನಾಳ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ. ಎಸ್. ವಿಜಯಕುಮಾರ, ಮೀನುಗಾರಿಕೆ ಇಲಾಖೆ ಉಪನಿರ್ದೆಶಕ ಶ್ರೀಶೈಲ ಗಂಗನಹಳ್ಳಿ ಮಾತನಾಡಿರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಬೆಳಗಾವಿಯ ಹಿರಿಯ ಉಪ ನಿರ್ದೇಶಕ ಶ್ರೀಪಾದ ಕುಲಕರ್ಣಿ, ಭರತ್ ಜೋಶಿ, ನವದೆಹಲಿ ಬಯೋಪ್ಲಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕ್ಯಾಪ್ಟನ್ ಮತ್ತು ಕಾರ್ಯಕ್ರಮದ ಪ್ರಾಯೋಜಕ ಪಿ. ಸಿ. ದಾಸ್, ರಮೇಶ ಎಚ್. ಮೇತ್ರಿ, ಸಿದ್ದು ಎಂ. ಹೆಗಡಹಾಳ, ರಾಜ್‌ ಅಹ್ಮದ್ ಎಂ. ಹುಲ್ಲೂರ, ಎಂ. ಡಿ. ಮೇತ್ರಿ, ರಶ್ಮಿ, ಮತ್ತು ಮೀನು ಕೃಷಿಕರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌