ಇಂಡಿಯ ಖ್ಯಾತ ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರೀಗ ಕಾನೂನು ರತ್ನಾಕರ ಬಿರುದಾಂಕಿತ

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿಯ ಖ್ಯಾತ ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರಿಗೆ ಕಾನೂನು ರತ್ನಾಕರ ಎಂದು ಅಭಿಮಾನಿಗಳು ಮತ್ತು ಹಿತೈಷಿಗಳು ಬಿರುದು ನೀಡಿ ಗೌರವಿಸಿದ್ದಾರೆ.

ಇಂಡಿಯಲ್ಲಿ ಹಾಸನ ಜಿಲ್ಲೆಯ ಕುರುವಂಶದ ಶಾನುಭೋಗ ದಾನಪ್ಪ ದತ್ತಿ ಸಂಘಟನೆ ಮತ್ತು ಇಂಡಿ ತಾಲೂಕು
ಬ್ರಾಹ್ಮಣರ ಸಮಾಜ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೀರಿಟ ಧಾರಣೆ ಮಾಡಿ ಕಾನೂನು ರತ್ನಾಕರ ಬಿರುದಾಂಕಿತ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪಕ್ಷಾತೀತವಾಗಿ ಪಾಲ್ಗೋಂಡ ಜನಪ್ರತಿನಿಧಿಗಳು, ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರ ಗುಣಗಾನ ಮಾಡಿದರು. ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಮಾತನಾಡಿ, ಭಾರತ ವಿಭಿನ್ನವಾದ ಸಂಸ್ಕತಿ ಹೊಂದಿದೆ. ಒಳ್ಳೆಯವರನ್ನು, ಪ್ರಾಮಾಣಿಕರನ್ನು, ಹಿರಿಯರನ್ನು ಗೌರವಿಸುವ, ಪ್ರೀತಿಸುವ ಸನ್ಮಾನಿಸುವ ಬಳುವಳಿ ನಮ್ಮದು. ಅದಕ್ಕೆ ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರು ಭಾಜನರಾಗಿದ್ದಾರೆ ಎಂದು ಹೇಳಿದರು.

ಕುಲಕರ್ಣಿಯವರು ಕಳೆದ ಐದು ದಶಕಗಳಿಂದ ನ್ಯಾಯವಾದಿಯಾಗಿ ಹಣಕ್ಕೆ ಆಶೆ ಪಡದೇ ಮುಖ್ಯ ಮತ್ತು ಮಹತ್ವದ ಘಟ್ಟದಲ್ಲಿ ಕಕ್ಷಿದಾರರ ಹಿತ ಬಯಸಿ ಒಳ್ಳೆಯ ಕಾರ್ಯ ಮಾಡಿ, ತನ್ನ ಅಮೂಲ್ಯವಾದ ಸೇವೆಯಿಂದ ಸಮಾಜ ಗೌರವಿಸುವ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಮಾತನಾಡಿ, ಬಿ ಎಲ್ ಡಿ ಈ ಸಂಸ್ಥೆಗೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ನ್ಯಾಯಾಧೀಶ ಹುದ್ದೆ ಒಲಿದು ಬಂದರೂ ಬಂದರೂ ಅಂತಹ ಅವಕಾಶ ಬಿಟ್ಟು ತಾಲೂಕಿನ ಜನರಿಗೆ, ರೈತರ ಮತ್ತು ಬಡವರ ಪರ ನ್ಯಾಯ ಕೊಡಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.

ಇಂಡಿ ಬಿಜೆಪಿ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಮಾತನಾಡಿ, ನೇರ ನುಡಿಗಾರಿಕೆ, ತೀಕ್ಷ್ಣ ಬುದ್ಧಿವಂತಿಕೆ ಹಾಗೂ ಸ್ಪಷ್ಟ ಕಾನೂನು ಸಲಹೆಗಳನ್ನು ನೀಡುವುದರಲ್ಲಿ ಡಿ. ಎಸ್. ಕುಲಕರ್ಣಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.

ಶಾನುಭೋಗ ದಾನಪ್ಪ ದತ್ತಿ ಕಾರ್ಯದರ್ಶಿ ಕೆ. ಪಿ. ವೇಂಕಟೇಶಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಕಾನೂನು ರತ್ನಾಕರ ಬಿರುದಾಂಕಿತ ನ್ಯಾಯವಾದಿ ಗುರುನಾಥರಾವ ಶಂಕರರಾವ ಕುಲಕರ್ಣಿ ಅವರ ಪತ್ನಿ ಪದ್ಮಾವತಿ ಕುಲಕರ್ಣಿ, ಸವದತ್ತಿ ಚಿದಂಬರ ಪೀಠದ ಸಾನಿಧ್ಯ ವಹಿಸಿದ್ಧ ಪ್ರಸನ್ನಬಾಬು ಸುಂದರೇಶ, ರಾಘವೇಂದ್ರ ಕುಲಕರ್ಣಿ ಈ ಸಂದರ್ಭದಲ್ಲಿ ಮಾತನಾಡಿದರು.

ಇಂಡಿ ಪಟ್ಟಣದ ಮತ್ತು ತಾಲೂಕಿನ ನಾನಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಮತ್ತು ಬಂಧು ಬಳಗದವರು ಜಿ.ಎಸ್.ಕುಲಕರ್ಣಿಯವರನ್ನು ಸನ್ಮಾನಿಸಿದರು.

ಈ ಸಮಾರಂಭದಲ್ಲಿ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಮಾಣಿಕಲಾಲ ದೋಶಿ, ಪ್ರಭಾಕರ ಬಗಲಿ, ಆರ್. ವಿ. ದೇಶಪಾಂಡೆ, ಸಿದ್ದಪ್ಪ ತಾಂಬೆ, ಅಜೀತ ಧನಶೆಟ್ಟಿ, ಶೀತಲ ಧನಶೆಟ್ಟಿ, ಡಾ. ಎಂ. ಜೆ. ಪಾಟೀಲ, ಡಾ. ರಾಜೇಶ ಕೋಳೆಕರ, ಆಲಮೇಲದ ಶಿವಕುಮಾರ ಗುಂದಗಿ, ನಂದಿ ಹಾಲು ಒಕ್ಕೂಟದ ಅಧ್ಯಕ್ಷ ಸಂಬಾಜಿರಾವ ಮಿಸಾಳೆ, ನೀಲಕಂಠಗೌಡ ಪಾಟೀಲ, ಜಗದೀಶ ಕ್ಷತ್ರಿ, ಅಜೀತ ಜೋಶಿ, ಅನಂತ ಕೋಟಿ, ರಾಜು ಕುಲಕರ್ಣಿ, ಬಿ. ಎಂ. ಕೋರಿ,
ಡಿ. ಆರ್. ಶಹಾ, ತಾಹೀರಬಾಷಾ ಶೇಖ, ಕಾಸುಗೌಡ ಬಿರಾದಾರ, ನ್ಯಾಯವಾದಿಗಳಾದ ಬಿ. ಬಿ. ಕೊಟ್ಟಲಗಿ,
ಎಸ್. ಎಲ್. ನಿಂಬರಗಿಮಠ ಸೇರಿದಂತೆ ಕುಲಕರ್ಣಿ ಕುಟುಂಬ ಸದಸ್ಯರು ಮತ್ತು ಇತತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌