ಕೃಣಾಲ ಪಾಂಡ್ಯಗೆ ಕೊರೊನಾ ಪಾಸಿಟಿವ್- ಭಾರತ- ಶ್ರೀಲಂಕಾ ಟಿ-20 ನಾಳೆಗೆ ಮುಂದೂಡಿಕೆ

ವಿಜಯಪುರ: ಭಾರತ ಮತ್ತು ಶ್ರೀಲಂಕಾ ಮಧ್ಯೆ ಇಂದು ರಾತ್ರಿ ನಡೆಯಬೇಕಿದ್ದ ಟಿ-20 ಕ್ರಿಕೆಟ್ ಪಂದ್ಯಾವಳಿಯನ್ನು ನಾಳೆಗೆ ಮುಂದೂಡಲಾಗಿದೆ.

ಈ ಕುರಿತು ಬಿಸಿಸಿಐ ಟ್ವೀಟರ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಭಾರತೀಯ ಕ್ರಿಕೆಟ್ ತಂಡದ ಆಲರೌಂಡರ್ ಕೃಣಾಲ ಪಾಂಡ್ಯ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆಗೆ ಆರಂಭವಾಗಬೇಕಿದ್ದ ಟಿ- 20 ಕ್ರಿಕೆಟ್ ಪಂದ್ಯವನ್ನು ನಾಳೆಗೆ ಜು. 28ಕ್ಕೆ ಮುಂದೂಡಲಾಗಿದೆ.

ಕೊರೊನಾ ಸೋಂಕು ಹೆಚ್ಚಾಗುವುದನ್ನು ತಡೆಯಲು ಇಂದು ಭಾರತ ಮತ್ತು ಶ್ರೀಲಂಕಾ ಎರಡೂ ತಂಡಗಳ ಆಟಗಾರರನ್ನು ಕೊರೊನಾ ಆರ್ ಟಿ ಪಿ ಸಿ ಆರ್ ಪಿ ಸಿ ಆರ್ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.

Leave a Reply

ಹೊಸ ಪೋಸ್ಟ್‌