ಇಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಜನ್ಮದಿನ- ಕೊರೊನಾ ಮಹಾಮಾರಿಯ ನೋವಿನ ಹಿನ್ನೆಲೆ ಆಚರಣೆ ಬೇಡ ಎಂದ ಜನನಾಯಕ


ವಿಜಯಪುರ: ಇಂದು ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಅಪ್ಪು ಪಟ್ಟಣಶೆಟ್ಟಿ ಜನ್ಮದಿನ. ಆದರೆ, ತಮ್ಮ ಜನ್ಮದಿನ ಆಚರಣೆ ಬೇಡ. ಅಭಿಮಾನಿಗಳು ಮತ್ತು ಬೆಂಬಲಿಗರು ತಾವಿರುವ ಸ್ಥಳದಿಂದಲೇ ಶುಭ ಹಾರೈಸಿದರೆ ಸಾಕು ಎಂದು ಅಪ್ಪು ಪಟ್ಟಣಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಮನವಿ ಮಾಡಿದ್ದಾರೆ.

ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಅಪ್ಪು ಪಟ್ಟಣಶೆಟ್ಟಿ



ಅಪ್ಪು ಪಟ್ಟಣಶೆಟ್ಟಿ ಹಾಕಿರುವ ಪೋಸ್ಟ್ ನಲ್ಲಿ, ನನ್ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕಾತುರದಿಂದ ಕಾಯುತ್ತಿರುವ ಅಭಿಮಾನಿ ಬಂಧು ಬಳಗಕ್ಕೆ ನನ್ನ ಕೋಟಿ ನಮನಗಳು. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಋಣಿಯಾಗಿರುವೆ. ಆದರೆ ಜಗತ್ತು ಇನ್ನೂ ಕೋವಿಡ್-19 ಮಹಾಮಾರಿಯ 3ನೇ ಅಲೆಯ ಭಯದಲ್ಲಿ ಬದುಕು ಸಾಗಿಸುತ್ತಿದ್ದು, ಕೋವಿಡ್-19ರ 2ನೇ ಅಲೆಯಲ್ಲಿ ಹಿರಿಯರು ಹಾಗೂ ಆತ್ಮೀಯರ ಅಗಲಿಕೆಯ ನೋವಿನಲ್ಲೇ ನಾನಿನ್ನೂ ಇದ್ದೇನೆ. ಇಂತಹ ಸಂದರ್ಭದಲ್ಲಿ ಸಂಭ್ರಮದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ. ಕಾರಣ ನನ್ನ ಹುಟ್ಟುಹಬ್ಬದ ದಿನದಂದು ನಾಳೆ ದಿನಾಂಕ 27-7-2021 ರಂದು ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ ತಾವಿರುವ ಸ್ಥಳದಿಂದಲೇ ಶುಭಹಾರೈಸಿದರೆ ಸಾಕು.
ನಾನು ಧನ್ಯನಾಗುತ್ತೇನೆ.
ತಮ್ಮ ಪ್ರೀತಿಯ ಶುಭಹಾರೈಕೆಗಳು ನನ್ನ ಬದುಕಿಗೆ ಶ್ರೀರಕ್ಷೆಯಾಗಲಿ.

ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಜನ್ಮದಿನದ ಆಚರಣೆ ಬೇಡ. ಯಾವುದೇ ಕಾರ್ಯಕ್ರಮಗಳನ್ನೂ ನಡೆಸಬೇಡಿ. ಕೇವಲ ಮನಃಪೂರಕವಾಗಿ ಶುಭ ಹಾರೈಸಿದರೆ ಸಾಕು ಎಂದು ಹೇಳುವ ಮೂಲಕ ಸರಳತೆ ಮೆರೆದಿದ್ದಾರೆ.

Leave a Reply

ಹೊಸ ಪೋಸ್ಟ್‌