ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟಕ್ಕೆ ತಾವು ಸೇರುವುದಿಲ್ಲ ಎಂದು ಮಾಜಿ ಸಿಎಂ ಮತ್ತು ಯಡಿಯೂರಪ್ಪ ಸಂಪುಟದಲ್ಲಿ ಬೃಹತ್ ಕೈಗಾರಿಕೆ ಸಚಿವರಾಗಿದ್ದ ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಜಾರಿಯಲ್ಲಿದ್ದು, 2-3 ದಿನಗಳಲ್ಲಿ ಪೂರ್ಣವಾಗುವ ನಿರೀಕ್ಷೆಯಿದೆ. ನಾನು ರಾಜ್ಯ ಮಾಜಿ ಮುಖ್ಯಮಂತ್ರಿಯಾಗಿ, ಹಿರಿಯ ನಾಯಕನಾಗಿ ಸಚಿವ ಸಂಪುಟದಲ್ಲಿ ಸೇರದಿರಲು ನಿರ್ಧರಿಸಿದ್ದೇನೆ. ಮಾಜಿ ಸಿಎಂ ಎಂಬ ನೈತಿಕ ಕಾರಣದಿಂದ ಸಂಪುಟ ಸೇರದಿರಲು ನಿರ್ಧರಿಸಿದ್ದೇನೆ. ಯಡಿಯೂರಪ್ಪ ಸರಕಾರದಲ್ಲಿ ಸಚಿವನಾಗಿದ್ದೆ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಚಿವನಾಗಿದ್ದೆ. ಕಳೆದ ಬಾರಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವನಾಗಿದ್ದೆ. ಇದಕ್ಕೆ ಕಾರಣ ಯಡಿಯೂರಪ್ಪ ಹಿರಿಯ ನಾಯಕರಾಗಿದ್ದಾರೆ. ಆದರೆ, ಈ ಬಾರಿ ಸಚಿವ ಸಂಪುಟ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಿಎಂ ಎಂಬ ಕಾರಣಕ್ಕಾಗಿ ಸಚಿವ ಸಂಪುಟ ಸೇರದಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಈ ಕುರಿತು ಮಾಹಿತಿ ನೀಡಿದ್ದೇನೆ. ಸಿಎಂ ಗೆ ಕೂಡ ಈ ಕುರಿತು ಮಾಹಿತಿ ನೀಡಲಿದ್ದೇನೆ. ಈ ವಿ।ಯವನ್ನು ರಾಷ್ಟ್ರೀಯ ನಾಯಕರಿಗೆ ತಿಳಿಸಲು ಪ್ರಯತ್ನ ಮಾಡುತ್ತಿದ್ದೇನೆ. ಯಡಿಯೂರಪ್ಪ ಅವರಿಗೂ ಈ ಬಗ್ಗೆ ತಿಳಿಸಿದ್ದೇನೆ. ಈಗಾಗಲೇ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ಇದಕ್ಕಾಗಿ ಇನ್ನೂ ಹೆಚ್ಚಿನ ಸಮಯ ನೀಡುತ್ತೇನೆ. ಪಕ್ಷ ಇನ್ನೂ ಜವಾಬ್ದಾರಿ ನೀಡಿದರೆ ಅದನ್ನು ಮಾಡಲು ಸಿದ್ಧನಿದ್ದೇನೆ. ಪಕ್ಷಕ್ಕಾಗಿ ಹೆಚ್ಚು ಸಮಯ ನೀಡುತ್ತೇನೆ. ಜನಪರ ಕೆಲಸ ಮುಂದುವರೆಸುತ್ತೇನೆ ಎಂದು ಅವರು ತಿಳಿಸಿದರು.
ಸ್ಪೀಕರ್ ಹುದ್ದೆ ಈಗ ಖಾಲಿ ಇಲ್ಲ. ರಾಜ್ಯಪಾಲನಾಗಲು ಸಿದ್ಧನಿಲ್ಲ. ಈ ಕುರಿತು ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ನಾನು ರಾಜಕೀಯ ವ್ಯಕ್ತಿ. ರಾಜಕೀಯದಲ್ಲಿರಬೇಕು. ಶಾಸಕನಾಗಿ ಮಾಡುತ್ತಿರುವ ಕೆಲಸವನ್ನು ಮುಂದುವರೆಸುತ್ತೇನೆ ಎಂದು ತಿಳಿಸಿದ ಜಗದೀಶ ಶೆಟ್ಟರ, ಬೊಮ್ಮಾಯಿ ಅವರನ್ನು ಈಗಾಗಲೇ ಸಿಎೞ ಆಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಕುರಿತು ತಾವು ಮಾತನಾಡುವುದಿಲ್ಲ. ಬೇಸರದಿಂದ ನಾನು ಈ ನಿರ್ಧಾರ ಕೈಗೊಂಡಿಲ್ಲ. ಕಳೆದ 30-40 ವರ್ಷಗಳಿಂದ ಪಕ್ಷದಲ್ಲಿದ್ದುಕೊಂಡು ಕೆಲಸ ಮಾಡಿಕೊಂಡು ಬಂದಿದ್ದೇನೆ. ನಮ್ಮ ಕುಟುಂಬ ಜನಸಂಘದ ಕಾಲದಿಂದಲೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಂದಿದೆ. ಈಗ ಯಾವುದೇ ಸಂದರ್ಭದಲ್ಲಿ ಪಕ್ಷದ ಸಂಘಟನೆ, ಸರಕಾರದ ವ್ಯವಸ್ಥೆಯಲ್ಲಿ ಬೇಜಾರು ಮಾಡಿಕೊಳ್ಳುವ ಪ್ರವೃತ್ತಿ ನನ್ನದಲ್ಲ ಎಂದು ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಸಂಪುಟ ಸೇರದಿರಲು ನಿಜವಾದ ಕಾರಣವೇನು ಗೊತ್ತಾ?
ತಾವು ಸಚಿವ ಸಂಪುಟ ಸೇರದಿರಲು ಪ್ರಮುಖ ಕಾರಣಗಳನ್ನು ಜಗದೀಶ ಶೆಟ್ಟರ ಸ್ಪಷ್ಟಪಡಿಸಿದ್ದಾರೆ. ಆದರೆ, ಇದೆಲ್ಲಕ್ಕಿಂತ ಮಿಗೀಲಾದ ಮತ್ತೋಂದು ಕಾರಣವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಸವರಾಜ ಬೊಮ್ಮಾಯಿ ಮೂಲ ಬಿಜೆಪಿಗರಲ್ಲ. ಅಲ್ಲದೇ, 1994ರಲ್ಲಿ ತಮ್ಮ ವಿರುದ್ಧ ಜನತಾ ದಳದಿಂದ ಸ್ಪರ್ಧಿಸಿದ್ದ ಇದೇ ಬಸವರಾಜ ಬೊಮ್ಮಾಯಿ ಅವರನ್ನು ಜಗದೀಶ ಶೆಟ್ಟರ ಸೋಲಿಸಿದ್ದರು. ಹೀಗಾಗಿ, ತಮ್ಮ ವಿರುದ್ಧ ಸೋತಿದ್ದ ಮುಖಂಡನ ಸಚಿವ ಸಂಪುಟದಲ್ಲಿ ಸಚಿವರಾದರೆ, ತಮ್ಮ ವರ್ಚಸ್ಸಿಗೆ ಹಾನಿಯಾಗಲಿದೆ. ಅಲ್ಲದೇ, ಕೇವಲ ಅಧಿಕಾರಕ್ಕಾಗಿ ಈ ಮಟ್ಟಕ್ಕೂ ಹೋಗುತ್ತಾರೆ ಎನ್ನುವ ಅಪವಾದದಿಂದ ದೂರವಿರಲು ಜಗದೀಶ ಶೆಟ್ಟರ ಈ ಮುಂದಾಲೋಚನೆ ಮಾಡಿದ್ದಾರೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಅಲ್ಲದೇ, ಬಸವರಾಜ ಬೊಮ್ಮಾಯಿ ಅದು ಸರಿಯಾದ ನಿರ್ಧಾರವೂ ಆಗಿದೆ.