ವಿಜಯಪುರ: ಮಾಜಿ ಸಿಎಂ ಪುತ್ರ ಈಗ ಹಾಲಿ ಸಿಎಂ. ಮಾಜಿ ಸಿಎಂ ದಿ. ಎಸ್. ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಈಗ ರಾಜ್ಯದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ.
ಬಸವರಾಜ ಬೊಮ್ಮಾಯಿ ವಿವಾದಾತೀತ ನಾಯಕ. ಹಂಗಾಮಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಪಕ್ಕಾ ಶಿಷ್ಯ. ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯಿತ ಸಮುದಾಯದ ಲೀಡರ್. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಬಿಜೆಪಿ 2023ರ ಚುನಾವಣೆಯತ್ತ ದೃಷ್ಠಿ ನೆಟ್ಟು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ.
ಮಾಜಿ ಸಿಎಂ ದಿ. ಎಸ್. ಆರ್. ಬೊಮ್ಮಾಯಿ ಜನತಾ ಪರಿವಾರದಿಂದ ಸಿಎಂ ಆಗಿದ್ದರೆ, ಅವರ ಪುತ್ರ ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಸಿಎಂ ಆಗಿದ್ದಾರೆ. ತಂದೆಯ ಕಾಲದಿಂದ ಈಗ ಸಿಎಂ ಆಗುವವರೆಗೂ ಬಸವರಾಜ ಬೊಮ್ಮಾಯಿ ರಾಜ್ಯ ಮತ್ತು ದೇಶದ ಪ್ರಮುಖ ರಾಜಕೀಯ ನಾಯಕರೊಂದಿಗೆ ಹೊಂದಿದ್ದ ಸಂಬಂಧಗಳ ಕುರಿತ ಚಿತ್ರಗಳು ಇಲ್ಲಿವೆ.