ಹುಬ್ಬಳ್ಳಿ: ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಬಗ್ಗೆ ತಮಗೆ ಸಂಪೂರ್ಣ ಅರಿವಿದ್ದು, ಈ ವಿಚಾರದಲ್ಲಿ ಮಹಾರಾಷ್ಟ್ರದ ಜೊತೆ ಸೇರಿ ಕಾನೂನು ಹೋರಾಟ ನಡೆಸುವುದಾಗಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬ್ರಿಜೇಶ ಕುಮಾರ ವಿಶ್ರಾ ನೇತೃತ್ವದ ಕೃಷ್ಣಾ ನ್ಯಾಯಾದೀಕರಣ ಆಲಮಟ್ಟಿ ಜಲಾಷಯದ ಎತ್ತರವನ್ನು 524.256 ಮೀಟರ್ ಗೆ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಯುಕೆಪಿ ಮೂರನೇ ಹಂತದ
ಆರ್ ಆಂಡ್ ಆರ್ ರೂಪಿಸಬೇಕಾಗಿದೆ. ಈ ಕುರಿತು ಅಧಿಸೂಚನೆ ಹೊರಡಿಸುವ ಹಂತದಲ್ಲಿ ಆಂಧ್ರ ಪ್ರದೇಶ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಪ್ರಕರಣ ಕೋರ್ಟ್ ನಲ್ಲಿ ಇರುವುದರಿಂದ ವಿಳಂಭವಾಗುತ್ತಿದೆ. ಒಂದೆರಡು ತಿಂಗಳಲ್ಲಿ ಪ್ರಕರಣ ವಿಚಾರಣೆ ಬರಲಿದೆ. ಮಹಾರಾಷ್ಟ್ರ ನಾವು ಸೇರಿ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ನನಗೆ ವಿಶ್ವಾಸ ಇದೆ. ಈ ವಿಷಯದಲ್ಲಿ ತೀರ್ಪು ನಮ್ಮ ಪರವಾಗಿ ಬರಲಿದೆ. ತೀರ್ಪು ಬಂದ ಕ್ಷಣದಿಂದಲೇ, ಕೆಲಸ ಆರಂಭಿಸಲಾಗುವುದು ನೂತನ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.