ವಿಜಯಪುರ: ಭೂತನಾಳ ಕೆರೆ ವ್ಯಾಪ್ತಿಯ ಉದ್ಯಾನವನ ಹಾಗೂ ವಾಟರ್ ಫ್ರಂಟ್ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯಪುರ ನಗರದ ಭೂತನಾಳ ಕೆರೆ ಪಕ್ಕದಲ್ಲಿರುವ ಉದ್ಯಾನವನ ಹಾಗೂ ವಾಟರ್ ಫ್ರಂಟ್ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಉದ್ಯಾನವನ ಹಾಗೂ ವಾಟರ್ ಫ್ರಂಟ್ ಈ ಕಾಮಗಾರಿಗಳನ್ನು ಆಧ್ಯತೆ ಮೇಲೆ ಪೂರ್ಣಗೊಳಿಸುವಂತೆ ಮಹಾನಗರ ಪಾಲಿಕೆಯ ಎಂಜಿನಿಯರ್ ಗೆ ಸೂಚನೆ ನೀಡಿದರು.
ರೂ. 9 ಕೋ. ಅಂದಾಜು ಮೊತ್ತದಲ್ಲಿ ಈ ಕಾಮಗಾರಿಯಲ್ಲಿ ಪಾದಚಾರಿ ರಸ್ತೆ, ಲ್ಯಾಂಡ್ ಸ್ಟೆಪ್ಪಿಂಗ್, ಕಾರಂಜಿ, ಫುಡ್ ಕೋರ್ಟ್, ಶೌಚಾಲಯ, ಟಿಕೆಟ್ ಕೌಂಟರ್, ಚಿಕ್ಕ ಮಕ್ಕಳ ಉದ್ಯಾನವನ ಮತ್ತು ಇತರೆ ಘಟಕಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ಅಂದಾಜು ರೂ. 4 ಕೋ. ವೆಚ್ಚದಲ್ಲಿ ವಾಕ್ ವೇ, ಸೋಲಾರ್ ವೇ, ಪಾರ್ಕಿಂಗ್, ಬ್ಯಾರಿಕೇಡ್ ಗಳಿಗೆ ಟೆಂಡರ್ ಕರೆಯುವುದಾಗಿ ಸಹಾಯಕ ಎಂಜಿನಿಯರ್ ಕೋಲ್ಹಾರ ಅವರು ಜಿಲ್ಲಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಲರಾಮ ಲಮಾಣಿ ಮತ್ತು ಮಹಾನಗರ ಪಾಲಿಕೆಯ ಎಂಜಿನಿಯರ್ ಗಳು ಉಪಸ್ಥಿತರಿದ್ದರು.