ವಿಜಯಪುರ: ವಿಜಯಪುರ ಜಿಲ್ಲೆಯ ಭೀಮಾ ತೀರಷ ಚಡಚಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನೂತನ ಎಸ್ಪಿ ಎಚ್. ಡಿ. ಆನಂದ ಕುಮಾರ, ಚಡಚಣ ಪೊಲೀಸರು 20 ಬೈಕ್ ಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜೀರಂಕಲಗಿ ಗ್ರಾಮದ 21 ವರ್ಷದ ರೇವಣಸಿದ್ದ ಗುರಪ್ಪಾ ಬಿರಾದಾರ ಮತ್ತು ಇಂಡಿ ತಾಲೂಕಿನ ಕೂಡಗಿ ಗ್ರಾಮದ 30 ವರ್ಷದ ಸುರೇಶ ರಾವುತರಾಯ ಬಿರಾದಾರ ಎಂಬುವರರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ರೂ. 9.30 ಲಕ್ಷ ಮೌಲ್ಯದ 20 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳು ವಿಜಯಪುರ ಜಿಲ್ಲೆಯ ಚಡಚಣ, ಝಳಕಿ, ಇಂಡಿ, ವಿಜಯಪುರ ಮತ್ತು ಮಹಾರಾಷ್ಟ್ರ ರಾಜ್ಯದ ಕರಾಡ, ಜತ್ ಗಳಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿಕೊಂಡು ಬರುತ್ತಿದ್ದರು. ನಂತರ ಅವುಗಳ ನಂಬರ ಪ್ಲೇಟ್‌ಗಳನ್ನು ಬದಲಾಯಿಸಿ ಕೆಲವು ಮೋಟರ್ ಸೈಕಲ್‌ಗಳನ್ನು ಅಲ್ಲಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಅಲ್ಲದೇ, ಅಲ್ಲಲ್ಲಿ ಇನ್ನೂ ಕೆಲವು ಬೈಕ್ ಗಳನ್ನು ಆರೋಪಿಗಳು ತಂತಮ್ಮ ಮನೆಗಳ ಬಳಿ ಇಟ್ಟುಕೊಂಡಿದ್ದರು. ಆ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ಚಡಚಣ ಸಿಪಿಐ ಎಸ್. ಎಂ.ಪಾಟೀಲ, ಡಿ ಸಿ ಆರ್ ಬಿ ಸಿಪಿಐ ಸುನೀಲ ಕಾಂಬ್ಳೆ, ಚಡಚಣ ಪಿ ಎಸ್ ಐ ಎಂ. ಎ. ಸತಿಗೌಡರ ಪಾಲ್ಗೊಂಡಿದ್ದರು ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದಕುಮಾರ ತಿಳಿಸಿದ್ದಾರೆ.
ಜೋಡಿ ಕೊಲೆ ಆರೋಪಿ ಬಂಧನ
ಇದೇ ವೇಳೆ ವಿಜಯಪುರ ಜಿಲ್ಲೆಯನ್ನು ಬೆಚ್ಚಿ ಬಿಳಿಸಿದ್ದ ಸಲಾದಹಳ್ಳಿ ಜೋಡಿ ಕೊಲೆ ಪ್ರಕರಣದ ಆರೋಪಿತರನ್ನು ಬಂಧಿಸಲಾಗಿದೆ. ಕಲಕೇರಿ ಪೊಲೀಸ್ ಠಾಣೆ ಜೋಡಿ ಕೊಲೆ ಪ್ರಕರಣದಕ್ಕೆ ಸಂಬಂಧಿಸಿದಂತೆ 21 ವರ್ಷದ ಬಸವರಾಜ ಮಡಿವಾಳಪ್ಪ ಬಡಿಗೇರ ಉರ್ಪ್ ಮಾದರ ಮತ್ತು 15 ವರ್ಷದ ದಾವಲಬಿ ಬಂದಿಗಿಸಾಬ ತಂಬದ ಎಂಬುವರ ಜೋಡಿ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಜೋಡಿ ಕೊಲೆಯಲ್ಲಿ ಪ್ರಮುಖ ಆರೋಪಿ ಬಂದಗೀಸಾಬ ಕಾಶೀಮಸಾಬ ತಂಬದ 5ನೇ ಆರೋಪಿಯಾಗಿದ್ದಾನೆ ಈ ಕುರಿತು ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ತನಿಖೆ ನಡೆಸಿ 5ನೇ ಆರೋಪಿಯನ್ನು ಒಂದನೇ ಆರೋಪಿಯನ್ನಾಗಿ ಮಾಡಿದ್ದಾರೆ. ಎಲ್ಲ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಚ್. ಡಿ. ಆನಂದಕುಮಾರ ತಿಳಿಸಿದ್ದಾರೆ.
ಈ ಎರಡೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ಎಚ್. ಡಿ. ಆನಂದಕುಮಾರ ಇದೇ ಸಂದರ್ಭದಲ್ಲಿ ನಗದು ಬಹುಮಾನ ಘೋಷಿಸಿದರು.
ಈ ಸಂದರ್ಭದಲ್ಲಿ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ಸಿಪಿಐ ಸುನೀಲ ಕಾಂಬಳೆ, ಪಿಎಸ್ಐ ಶಂಕರಗೌಡ ಪಾಟೀಲ, ಸೋಮೇಶ ಗೆಜ್ಜಿ ಮುಂತಾದವರು ಉಪಸ್ಥಿತರಿದ್ದರು.