ಓಲಂಪಿಕ್ಸ್ ಕ್ರೀಡಾಪಟುಗಳಿಗೆ ಶುಭ ಹೇಳಲು ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಸೈಕ್ಲಿಂಗ್ ಜಾಥಾ- ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರು: ಟೋಕಿಯೋ ಓಲಂಪಿಕ್ಸ್ ನಲ್ಲಿ ಪಾಲ್ಗೋಂಡಿರುವ ಭಾರತೀಯ ಕ್ರೀಡಾಪಟುಗಳಿಗೆ ಚಿಯರ್ ಅಪ್ ಹೇಳಲು ಬೆಂಗಳೂರಿನಲ್ಲಿ ಚಿಯರ್ ಫಾರ್ ಇಂಡಿಯಾ-ಬಿ ಲೈಕ್ ಆ್ಯನ್ ಓಲಂಪಿಕ್ ಸೈಕ್ಲಿಂಗ್ ರೈಡ್ ಘೋಷ ವಾಕ್ಯದಡಿ ಆಯೋಜಿಸಿದ ಸೈಕಲ್ ಜಾಥಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಜಾಥಾ ಆಯೋಜಿಸಿದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಅಲ್ಲದೇ, ಈ ಜಾಥಾದಲ್ಲಿ ಪಾಲ್ಗೋಂಡ ಮಾಜಿ ಸಿಎಂ ಡಿ. ವಿ. ಸದಾನಂದಗೌಡ, ಸಂಸದ ಪಿ. ಸಿ. ಮೋಹನ ಮತ್ತು ಮಾಜಿ ಸಚಿವ ಡಾ. ಕೆ. ಸುಧಾಕರ ಅವರನ್ನುಅಭಿನಂದಿಸಿದರು.

ಬಳಿಕ ಮಾತನಾಡಿದ ಅವರು, ಅಲ್ಲಿ ಸೇರಿದ್ದ ಸೈಕ್ಲಿಷ್ಟ್ ಗಳನ್ನು ನ್ಯಾಚುರಲ್ ಸೈಕ್ಲಿಷ್ಟ್ ಗಳು ಎಂದು ಕರೆಯುವ ಮೂಲಕ ಸ್ಪೂರ್ತಿ ತುಂಬಿದರು. ಮನುಷ್ಯ ಗೆಲುುಗಳನ್ನು ಬಹಳ ಸರಳವಾಗಿ ರೂಢಿ ಮಾಡಿಕೊಳ್ಳುತ್ತಾನೆ. ಅವುಗಳಲ್ಲಿ ಸೈಕಲ್ ಕೂಡ ಒಂದು. ಸೈಕಲ್ ಮನುಷ್ಯನ ದೇಹದ ಆಕಾರಕ್ಕೆ ಅತ್ಯಂತ ಸೂಕ್ತವಾದ ಚಲನೆ ವಸ್ತು. ಸೈಂಟಿಫಿಕ್ ಮೊಬೈಲ್ ವೆಹಿಕಲ್. ನಮ್ಮ ಕಾಲು, ನಮ್ಮ ಕೈ, ನಮ್ಮ ದೇಹ ಸಂಪೂರ್ಣವಾಗಿ ಕಂಫರ್ಟ್ ಆಗಿ ಕುಳಿತುಕೊಳ್ಳುವುದಿದ್ದರೆ ಅದು ಸೈಕಲ್ ಮೇಲೆ. ಇದರ ಹಿಂದೆ ವಿಜ್ಞಾನವಿದೆ. ಇಂಥ ಚಲನ ವಸ್ತುವನ್ನು ತಾವು ಸಹಜವಾಗಿ ರೂಢಿ ಮಾಡಿಕೊಂಡಿದ್ದೀರಿ. ಈ ಹಿನ್ನೆಲೆಯಲ್ಲಿ ನ್ಯಾಚುರಲ್ ಸೈಕ್ಲಿಷ್ಠ್ ಗಳು ಎಂದು ಹೇಳುತ್ತಿದ್ದೇನೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಜನರ ನಿಜವಾದ ಪ್ರಧಾನ ಮಂತ್ರಿಯಾಗಿದ್ದಾರೆ. ಪ್ರತಿಯೊಂದನ್ನು ಕೂಡ ಮೈಕ್ರೋ ಲೇವೆಲ್ ನಲ್ಲಿ ತಾವೇ ಆದರ್ಶವಾಗಿ ಅದನ್ನು ಜಾರಿ ಮಾಡುತ್ತಾರೆ. ಸ್ವಚ್ಛ ಭಾರತದಿಂದ ಹಿಡಿದು ಚಿಯರ್ ಫಾರ್ ಇಂಡಿಯಾ ವರೆಗೂ ಭಾರತ ಮತ್ತು ಭಾರತೀಯರಿಗಾಗಿ ಮಾಡಿರುವ ಕಾರ್ಯಕ್ರಮ. ಇಂಥ ಸೂಕ್ಷ್ಮ ಪ್ರಧಾನಿ ಈವರೆಗೆ ನಮಗೆ ಸಿಕ್ಕಿರಲಿಲ್ಲ. ಯುವಕರಿಕೆ ಸ್ಪೂರ್ತಿಯನ್ನು ತುಂಬುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

ಈ ಮುಂಚೆ ಕ್ರೀಡಾ ಇಲಾಖೆಯಿದ್ದರೂ ಒಂದು ಸಣ್ಣ ಘೋಷವಾಕ್ಯ ಕೂಡ ಇರಲಿಲ್ಲ. ಖೇಲೋ ಇಂಡಿಯಾ ಘೋಷಣೆ ಮಾಡಿದರು. ಈ ಘೋಷಣೆಯಿಂದ ಎಷ್ಟು ಜನ ನಾನಾ ಕ್ರೀಡೆಗಳ ಕಡೆಗೆ ಸ್ಪೂರ್ತಿಗೊಂಡಿದ್ದಾರೆ ಎಂಬುದು ಗೊತ್ತಿದೆ. ಆದ್ದರಿಂದ ಓಲಂಪಿಕ್ಸ್ ನಲ್ಲಿಯೂ ಕೂಡ ಅದೇ ರೀತಿ ಸ್ಪೂರ್ತಿ ತುಂಬಲು ಜೀತೋ ಇಂಡಿಯಾ ಕರೆ ನೀಡಿದ್ದಾರೆ ಎಂದು ತಿಳಿಸಿದರು.

ಸಿಎಂ ಆದ ಬಳಿಕ ನಾನು ಯುವಕರಿಂದ ನನ್ನ ಸಾರ್ವಜನಿಕ ಕಾರ್ಯಕ್ರಮ ಪ್ರಾರಂಭಿಸುತ್ತಿರುವುದು ಬರುವ ದಿನಗಳಲ್ಲಿ ನಮ್ಮ ಎಲ್ಲ ಕಾರ್ಯಕ್ರಮಗಳಲ್ಲಿ ಯುವಕರಿಗೆ ಪ್ರಾಶಸ್ತ ನೀಡುತ್ತೇನೆ ಎಂಬುದಕ್ಕೆ ಸಾಕ್ಷಿಯಾಗಿದೆ. ಯುವಕರು ದೇಶದ ಭವಿಷ್ಯ. ಕರ್ನಾಟಕದ ಭವಿಷ್ಯ. ನಾನು ಸಂಪೂರ್ಣವಾಗಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. 56 ಸಾವಿರ ಜನ ಇಂದು ದೇಶದಲ್ಲಿ ಸೈಕ್ಲಿಂಗ್ ಮಾಡುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.

ಯುವಕರಲ್ಲಿ ಶಕ್ತಿ ಇರುತ್ತದೆ. ಶಿಸ್ತು ಬೇಕು. ಶಿಸ್ತು ಬಂದರೆ ಕ್ಯಾರೆಕ್ಟರ್ ನಿರ್ಮಾಣವಾಗುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ನಗರ. ನಾವು ಇನ್ನು ಮುಂದೆ ಬೆಂಗಳೂರು ಬಗ್ಗೆ ಜಾಗತಿಕ ಮತ್ತು ಸ್ಥಳೀಯವಾಗಿ ಯೋಚನೆ ಮಾಡಿ ಜೊತೆ ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತೇವೆ. ಸೈಕ್ಲಿಂಗ್ ಅದರಲ್ಲಿ ಮಹತ್ವದ ಆಟ. ಶಿವರಾಮ ಬಡಾವಣೆಯಲ್ಲಿ ಸೈಕ್ಲಿಂಗ್ ಟ್ರ್ಯಾಕ್ ಮಾಡಲು ಪಿ. ಸಿ. ಮೋಹನ ಹೇಳಿದ್ದಾರೆ. ಇದನ್ನು ನಾವು ಮಾಡುತ್ತೇವೆ. ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಸೈಕ್ಲಿಂಗ್ ಟ್ರ್ಯಾಕ್ ಮಾಡಲಾಗುವುದು ಎಂದು ಅವರು ತಿಳಿಸಿದರು.

ವಿಧಾನಸೌಧ ಮತ್ತು ಹೈಕೋರ್ಟ್ ಎದುರಿಗೆ ಸೈಕ್ಲಿಂಗ್ ಪ್ರಾರಂಭ ಮಾಡಿದ್ದೇವೆ. ಎರಡೂ ಕಟ್ಟಡಗಳು ಸದಾ ಪ್ರೇರಣೆ ನೀಡುವಂತಿವೆ. ಓಲಂಪಿಕ್ಸ್ ಕ್ರೀಡಾಪಟುಗಲಿಗೆ ಶುಭಾಷಯ ಕೋರಲು ನಾವು ವಿಧಾನ ಸೌಧ, ಹೈಕೋರ್ಟ್ ಮುಂಭಾಗದಿಂದ ಇದನ್ನು ಪ್ರಾರಂಭ ಮಾಡಿದ್ದೇವೆ. ಓಲಂಪಿಯನ್ಸ್ ಗೆ ನಾವು ಆಲ್ ದಿ ಬೆಸ್ಟ್ ಹೇಳೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಬೆಂಗಳೂರು ಉತ್ತರ ಸಂಸದ ಮತ್ತು ಮಾಜಿ ಸಿಎಂ ಡಿ. ವಿ. ಸದಾನಂದಗೌಡ, ಬೆಂಗಳೂರು ಕೇಂದ್ರ ಸಂಸದ ಪಿ. ಸಿ. ಮೋಹನ, ಬೆಂಗಳೂರು ದಕ್ಷಿಣ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ ತೇಜಸ್ವಿ ಸೂರ್ಯ, ಮಾಜಿ ಸಚಿವ ಡಾ. ಕೆ. ಸುಧಾಕರ ಕೂಡ ಸೈಕ್ಲಿಂಗ್ ಜಾಥಾದಲ್ಲಿ ಪಾಲ್ಗೋಂಡರು.

Leave a Reply

ಹೊಸ ಪೋಸ್ಟ್‌