ಯತ್ನಾಳ ಹೇಳಿಕೆ ನೀಡಿ ಹಾಳಾಗುತ್ತಿದ್ದಾರೆ- ಮಠಾಧೀಶರ ಗೊಡ್ಡು ಬೆದರಿಕೆಗಳಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ- ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗಡೌಡ ಪಾಟೀಲ ಯತ್ನಾಳ ಬಹಿರಂಗ ಹೇಳಿಕೆ ‌ಕೊಟ್ಟು ಅವರೇ ಹಾಳಾಗುತ್ತಿದ್ದಾರೆ. ಅವರು ನನ್ನ ಆತ್ಮೀಯ ಸ್ನೇಹಿತ. ಹೀಗಾಗಿ ಬಹಿರಂಗ ಹೇಳಿಕೆ ಕೊಡುವುದನ್ನು ತಕ್ಷಣ ನಿಲ್ಲಿಸಬೇಕೆಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಯತ್ನಾಳಗೆ ಬುದ್ದಿವಾದ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಯತ್ನಾಳ ಅವರ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ನನಗೇನು ಅನಿಸುವದಿಲ್ಲ. ನಾಲ್ಕು ಗೋಡೆಗಳ ಮದ್ಯ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಈ ಕುರಿತು ನಾನು ಯತ್ನಾಳ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಮಠಾಧೀಶರ ಗೊಡ್ಡು ಬೆದರಿಕೆಗೆ ಬಿಜೆಪಿಯಲ್ಲಿ‌ ಕವಡಿ ಕಾಸಿನ ಕಿಮ್ಮತ್ತಿಲ್ಲ. ತಂತಮ್ಮ ಸಮಾಜದ ಶಾಸಕರನ್ನು ಮಂತ್ರಿ ಮಾಡಿ ಎಂದು ಮಠಾಧೀಶರು ಹೇಳುವುದು ತಪ್ಪಲ್ಲ. ಆದರೆ ಶಾಸಕರು ಹೇಳುವುದು ತಪ್ಪು. ಇನ್ನೊಂದೆಡೆ ನಮ್ಮ‌ ಸಮಾಜದ ವ್ಯಕ್ತಿಗೆ‌ ಮಂತ್ರಿ‌ ಮಾಡದಿದ್ದರೆ ಬಿಜೆಪಿ ಸರ್ವನಾಶ ಅಂತಾ ಹೇಳುವುದು‌ ತಪ್ಪು ಎಂದು ಹೇಳಿದರು.

ಧರ್ಮ ವಿಚಾರದಲ್ಲಿ ನಾವೂ ಇದ್ದೇವೆ. ಆದರೆ ಮಠಾಧೀಶರು ಶಾಪ ಹಾಕುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದ ಅವರು, ಬೊಮ್ಮಾಯಿ‌ ಸಂಪುಟದಲ್ಲಿ ಸ್ಥಾನ ಸಿಗಲಿ, ಬಿಡಲಿ. ಆದರೆ ರಾಯಣ್ಣ ಬ್ರಿಗೇಡ್ ಮುಂದುವರಿಸಲ್ಲ. ಪಕ್ಷದ ಹೈಕಮಂಡಿನವರು ರಾಯಣ್ಣ ಬ್ರಿಗೇಡ್ ಕೈ ಬಿಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಭವಿಷ್ಯದ ದಿನಗಳಲ್ಲಿ ಅದರತ್ತ ಕಿಂಚಿತ್ತೂ ಲಕ್ಷ ವಹಿಸಲ್ಲ ಎಂದು ತಿಳಿಸಿದರು.

ಮುಂಬರುವ ಚುನಾವಣೆಯಲ್ಲಿ ಪೂರ್ಣ ಬಹುಮತದ ಬಿಜೆಪಿ ಸರಕಾರ ತರುವುದೇ ಗುರಿಯಾಗಿದೆ. ಈ ಮುಂಚೆ ಪೂರ್ಣ ಬಹುಮತ ತರುವಷ್ಟು ಶಕ್ತಿ ಶಾಲಿಯಾಗಿರಲಿಲ್ಲ. ಈಗ ಕಟೀಲ ನೇತೃತ್ವದಲ್ಲಿ ಸಂಘಟನೆ ನಡೆದಿದೆ. ಇನ್ನೂ ಒಂದು‌ ವರ್ಷ 10 ತಿಂಗಳ ಅವಧಿ ಬಾಕಿಯಿದೆ. ಅಷ್ಟರೊಳಗಾಗಿ‌ ನಿಷ್ಠಾವಂತ ಕಾರ್ಯಕರ್ತರ ತಂಡ ಕಟ್ಟುವ‌ ಮೂಲಕ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಲಕ್ಷಾಂತರ ಕಾರ್ಯಕರ್ತರೊಟ್ಟಿಗೆ‌ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಜಗದೀಶ ಶೆಟ್ಟರ್ ಸಚಿವರಾಗಲು ಒಪ್ಪದಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಶೆಟ್ಟರ್ ಅವರು ಸಿಎಂ ಬೊಮ್ಮಾಯಿ‌ ಅವರಿಗಿಂತ ಹಿರಿಯರಾದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಬೊಮ್ಮಾಯಿ‌ ಸಂಪುಟ ಸೇರ್ಪಡೆಗೆ‌ ನಿರಾಕರಿಸಿದ್ದಾರೆ. ‌ಅವರ ನಿರ್ಧಾರವನ್ನು ಬೇರೆ ರೀತಿ‌ ಅರ್ಥೈಸಬೇಕಿಲ್ಲ ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.

ಪಕ್ಷ ನೀಡುವ ಜವಾಬ್ದಾರಿ ನಿಷ್ಠೆಯಿಂದ ಮಾಡುವುದಾಗಿ ತಿಳಿಸಿದ ಅವರು, ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡುವುದು ಬಿಜೆಪಿ ಸಂಸ್ಕೃತಿ. ಬಿ. ಎಸ್. ಯಡಿಯೂರಪ್ಪ ರಾಜೀನಾಮೆಯಿಂದ ಕಾಂಗ್ರೆಸ್ಸಿನವರು ಖುಷಿಯಲ್ಲಿದ್ದರು. ಆದರೆ ಅವರು ನಿರಾಸೆ ಅನುಭವಿಸಿದರು. ನಾನೇ ಎಂ ಎಲ್ ಎ, ಸಿಎಂ ಎನ್ನುವುದು ಕಾಂಗ್ರೆಸ್ ಸಂಸ್ಕೃತಿ. ನಮ್ಮದಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ‌ ನಡೆಸಿದರು.

ಕಾರ್ಯಕರ್ತರ‌ ಭೇದ, ಭಾವ ನಮ್ಮಲ್ಲಿಲ್ಲ. ಚಾಮುಂಡೇಶ್ವರಿಯಲ್ಲಿ ಸೋತ ಮಗ, ಬಾದಾಮಿ ಮಗ, ಯಾವ ಪಕ್ಷದಲ್ಲಿದ್ದೀರಿ? ನಿಮ್ಮಪ್ಪ‌ ಯಾರು? ನಮ್ಮ ತಾಯಿ ಭಾರತಾಂಬೆ‌ಯ ಆದರೆ, ಬಿಜೆಪಿಯಲ್ಲಿ ಇಂಥ ಭಾವನೆಯಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಜುಗೌಡ ಪಾಟೀಲ, ಸಾಬು ಮಾಶ್ಯಾಳ, ರಾಜು‌ ಬಿರಾದಾರ,
ಚಿದಾನಂದ ಚಲವಾದಿ, ವಿಜಯ ಜೋಶಿ ಮತ್ತಿತರರಿದ್ದರು.

Leave a Reply

ಹೊಸ ಪೋಸ್ಟ್‌