ನಾಗಠಾಣ ಮತಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಚಾಲನೆ

ವಿಜಯಪುರ: ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ತಮ್ಮ ಮತಕ್ಷೇತ್ರ ವ್ಯಾಪ್ತಿಯ ನಾನಾ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಚಡಚಣ ಪಟ್ಟಣದಲ್ಲಿ ಅಂದಾಜು ರೂ. 58 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪ್ರವಾಸಿ ಮಂದಿರದ ಎರಡನೇ ಮಹಡಿಯ ಕಟ್ಟಡದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಚಡಚಣ ಪಟ್ಟಣದ ನಾನಾ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ನಂತರ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 2020-21 ನೇ ವರ್ಷದ ಜಲಜೀವನ ಮಿಷನ್ ಯೋಜನೆಯಡಿ ಅಂದಾಜು ರೂ. 1.93 ಕೋ. ವೆಚ್ಚದ ಕಾರ್ಯಾತ್ಮಕ ಮನೆ(FHTC)ಗಳಿಗೆ ನಳಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬರಡೋಲ ಗ್ರಾಮದ ನಾನಾ ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಜೆಡಿಎಸ್ ಕಾರ್ಯಕರ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಮತ್ತು ಇತರರು ಉಪಸ್ಥಿತರಿದ್ದರು.

ಬಳಿಕ ಡಾ. ದೇವಾನಂದ ಚವ್ಹಾಣ ಅವರು, ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 2020-21 ನೇ ವರ್ಷದ ಜಲಜೀವನ ಮಿಷನ್ ಯೋಜನೆಯಡಿ ಅಂದಾಜು ರೂ.1.78 ಕೋ. ವೆಚ್ಚದಲ್ಲಿ ಕಾರ್ಯಾತ್ಮಕ ಮನೆ ಮನೆ(FHTC)ಗಳಿಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು.

ಅದೇ ರೀತಿ ಚಡಚಣ ತಾಲೂಕಿನ ಧೂಳಖೇಡ.ಗ್ರಾಮದಲ್ಲಿಯೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 20

20-21 ನೇ ವರ್ಷದ ಜಲಜೀವನ ಮಿಷನ್ ಯೋಜನೆಯಡಿ ಅಂದಾಜು ರೂ.1.55 ಕೋ. ವೆಚ್ಚದಲ್ಲಿ ಕಾರ್ಯಾತ್ಮಕ ಮನೆ ಮನೆ(FHTC)ಗಳಿಗೆ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

 

Leave a Reply

ಹೊಸ ಪೋಸ್ಟ್‌