ಇಂದು ಸೀಲ್ ಮಾಡಿದ ಲಕೋಟೆಯಲ್ಲಿ ಸಚಿವರ ಪಟ್ಟಿ ತರ್ತಿದ್ದಾರಾ ಸಿಎಂ? ಸುಮಾರು 15 ಜನರಿಗೆ ಸಚಿವ ಸ್ಥಾನ ನಿರೀಕ್ಷೆ

ನವದೆಹಲಿ: ದೆಹಲಿಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಎರಡು ದಿನಗಳ ಸತತ ಚರ್ಚೆಯ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಿನ್ನೆ ತಡರಾತ್ರಿ ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2-3 ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರೊಂದಿಗೆ ಎರಡು ಸಲ ಚರ್ಚೆ ನಡೆಸಲಾಗಿದೆ. ಕೆಲವು ಸ್ಪಷ್ಠೀಕರಣ ಕೇಳಿದ್ದರು. ಅವುಗಳಗೆ ಸ್ಪಷ್ಟನೆ ನೀಡಲಾಗಿದೆ‌ ಎಂದು ತಿಳಿಸಿದರು.ಬುಧವಾರ ಬೆಳಿಗ್ಗೆ ಹೈಕಮಾಂಡನಿಂದ ಬೇಗ […]

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ- ಭೀಮಾ ತೀರ ಸೇರಿದಂತೆ ಮಹಾರಾಷ್ಟ್ರದ ಗಡಿ ಚೆಕ್ ಪೋಸ್ಚ್ ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಗಡಿ ಚೆಕ್ ಪೋಸ್ಟ್ ಗಳಿಗೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿದರು.   ಮೊದಲಿಗೆ ಇಂಡಿ ತಾಲೂಕಿನ ಧೂಳಖೇಡ್ ಚೆಕ್ ಪೋಸ್ಟ್ ಗೆ ತೆರಳಿದ ಅವರು, ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೈಗೊಳ್ಳಲಾಗಿರುವ ಬಂದೋಬಸ್ತ್ ಮತ್ತು ತಪಾಸಣೆ ಕುರಿತು ಪರಿಶೀಲನೆ ನಡೆಸಿದರು.       ನಂತರ ಚಡಚಣ ತಾಲೂಕಿನ ಶಿರಾಡೋಣ […]

ದೇವಸ್ಥಾನದ ಎದುರು ಟೆಂಗಿನಕಾಯಿ ಮಾರಾಟ ಮಾಡಿ ಆನಲೈನ್ ಮೂಲಕ ವಿದ್ಯಾಭ್ಯಾಸ ಮಾಡುತ್ತಿದ್ದ ಬಡ ವಿದ್ಯಾರ್ಥಿನಿಗೆ ನೆರವಾದ ಮಾಜಿ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಬಡತನದ ಹಿನ್ನೆಲೆಯಲ್ಲಿ ದೇವಸ್ಥಾನದ ಎದುರು ಟೆಂಗಿನಕಾಯಿ ಮಾರಾಟ ಮಾಡಿ ಆನಲೈನ್ ಪಾಠ ಕೇಳುತ್ತಿದ್ದ ಬಾಲಕಿಗೆ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಮತ್ತು ಬಬಲೇಶ್ವರ ಶಾಸಕರಾದ ಶ್ರೀ ಎಂ. ಬಿ. ಪಾಟೀಲ ಆರ್ಥಿಕವಾಗಿ ನೆರವಾಗಿದ್ದಾರೆ. ಅಷ್ಟೇ ಅಲ್ಲ, ಅವಳ ಭಾವಿ ಶಿಕ್ಷಣಕ್ಕೂ ಸಹಾಯ ಹಸ್ತ ಚಾಚಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಡವಡಗಿ ಗ್ರಾಮದ ಕಾವ್ಯಾ ಮಲ್ಲಪ್ಪ ಅರಮನಿ ಎಂಬ ವಿದ್ಯಾರ್ಥಿನಿಗೆ ತಂದೆಯಿಲ್ಲ. ತಾಯಿ ಕಾಶಿಬಾಯಿ ಮತ್ತು ತಮ್ಮ ಸಂಗಮೇಶ ವಡವ ಡಗಿಯಲ್ಲಿಯೇ […]

ಭೀಮಾ ತೀರದ ಜನರ ದುಸ್ಸಾಹಸ- ಕೊರೊನಾ ಮಹಾ ಕಂಟಕ ತಪ್ಪಿಸಲು ಬಂದ್ ಮಾಡಿರುವ ಬ್ಯಾರೇಜ್ ಮೇಲಿನ ರಸ್ತೆಯ ಮೇಲೆ ಬೈಕ್ ಹತ್ತಿಸಿ ಸಂಚಾರ

ವಿಜಯಪುರ: ಈ ಜನರೇ ಹೀಗೆ. ಸರಕಾರ ಕೈಗೊಳ್ಳುವ ನಿರ್ಧಾರಗಳು ಅವರ ಒಳಿತಿಗೆ ಇವೆ ಎಂಬುದನ್ನು ಮೈ ಮರೆತು ತಮ್ಮ ಚತುರತನವನ್ನು ಯಾವ್ಯಾವ ರೀತಿ ತೋರಿಸುತ್ತಾರೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕು ಸಾಕಷ್ಟು ನಿಯಂತ್ರಣಕ್ಕೆ ಬಂದಿದ್ದರೂ ನೆರೆಯ ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿರುವ ಸೋಂಕಿನ ಪ್ರಮಾಣ ಗಡಿಭಾಗ ಅಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೂ ಕಂಟಕ ತರುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗಡಿಯಲ್ಲಿರುವ ವಿಜಯಪುರ ಜಿಲ್ಲೆಯಲ್ಲಿಯೂ ಮಹಾರಾಷ್ಟ್ರವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೊರೊನಾ ಮೂರನೇ ಅಲೆಯ […]

ನವದೆಹಲಿಯಲ್ಲಿ ಉಪರಾಷ್ಟ್ರಪತಿ, ಬಿಜೆಪಿ ರಾಜ್ಯ ಉಸ್ತುವಾರಿ ಭೇಟಿ ಮಾಡಿದ ಸಿಎಂ

ಸನವದೆಹಲಿ: ಸಚಿವ ಸಂಪುಟ ವಿಸ್ತರಣೆ ಸಂಬಂಧ ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಷ್ಟ್ರ ನಾಯಕರ ಭೇಟಿ ಮುಂದುವರೆಸಿದ್ದಾರೆ. ರಾಜ್ಯಸಭೆಗೆ ತೆರಳಿದ ಸಿಎಂ, ಅಲ್ಲಿ ಉಪರಾಷ್ಟ್ರಪತಿ ಮತ್ತು ಸಭಾಫತಿಯಾಗಿರುವ ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಕುಷಲೋಪರಿ ವಿಚಾರಿಸಿದರು‌. ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಅವರು, ಮಾತುಕತೆ ನಡೆಸಿದರು. ಅಲ್ಲದೇ, ತಾವು ಮುಖ್ಯಮಂತ್ರಿಯಾಗಲು ಸಹಕರಿಸಿದ್ದಕ್ಕೆ ಕೃತಹಜ್ಞತೆ ಸಲ್ಲಿಸಿದರು.

ಶಾಸಕ ಯತ್ನಾಳಗೆ ಸಚಿವ ಸ್ಥಾನ ನೀಡಲೇಬೇಕಾದ ಸಂದಿಗ್ಧತೆಯಲ್ಲಿ ಬಿಜೆಪಿ ಹೈಕಮಾಂಡ್- ಯಾಕೆ ಗೊತ್ತಾ?

ವಿಜಯಪುರ: ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕವೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಮುಂದುವರೆದಿದೆ. ಈ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯ ಮೂಲ ಮತ್ತು ವಲಸಿಗ ಶಾಸಕರಲ್ಲಿ ಯಾರಿಗೆ ಎಷ್ಟು ಸ್ಥಾನ ನೀಡಬೇಕು? ಜಾತಿವಾರು, ಪ್ರಾದೇಶಿಕವಾರು, ಗುಂಪುಗಳವಾರು ಅಂಶಗಳನ್ನೂ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಅತ್ತ ನಾನಾ ಶಾಸಕರು ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ದೆಹಲಿ ಮತ್ತು ಬೆಂಗಳೂರು ಸೇರಿದಂತೆ ನಾನಾ ಕಡೆಗಳಲ್ಲಿ ಸುತ್ತಾಡಿ ಕೇಂದ್ರ ಹೈಕಮಾಂಡ್ ಮತ್ತು ರಾಜ್ಯ ಹಿರಿಯ […]

ಸಂಪುಟ ವಿಸ್ತರಣೆ- ಇಂದು ರಾತ್ರಿ ಹೈಕಮಾಂಡ್ ಸಚಿವ ಪಟ್ಟಿ ಪ್ರಕಟಿಸಲಿದೆ- ನಂತರ ಪ್ರಮಾಣ ವಚನ ದಿನ ನಿಗದಿ- ಸಿಎಂ ಬಸವರಾಜ ಬೊಮ್ಮಾಯಿ

ನವದೆಹಲಿ: ರಾಜ್ಯ ಸಚಿವ ಸಂಪುಟ ಸೇರಲಿರುವವ ಪಟ್ಟಿಯನ್ನು ಇಂದು ರಾತ್ರಿ ಹೈಕಮಾಂಡ ಪ್ರಕಟಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಆವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಿಎಂ ಈ ಕುರಿತು ಮಾಹಿತಿ ನೀಡಿದರು. ಮಂಗಳವಾರ ಲೋಕಸಭೆ ಅಧಿವೇಶನ ಮುಗಿದ ಬಳಿಕ ಎಷ್ಟು ಜನರಿಗೆ ಮತ್ತು ಯಾರಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಕುರಿತು ಹೈಕಮಾಂಡ್ ಸಭೆ ನಡೆಸಿ ನಿರ್ಧರಿಸಲಿದೆ. ಹೈಕಮಾಂಡ್ ಪಟ್ಟಿ ಪ್ರಕಟಿಸಿದ ನಂತರ ಬಿಜೆಪಿ […]