ಇಂದು ಸೀಲ್ ಮಾಡಿದ ಲಕೋಟೆಯಲ್ಲಿ ಸಚಿವರ ಪಟ್ಟಿ ತರ್ತಿದ್ದಾರಾ ಸಿಎಂ? ಸುಮಾರು 15 ಜನರಿಗೆ ಸಚಿವ ಸ್ಥಾನ ನಿರೀಕ್ಷೆ

  • ನವದೆಹಲಿ: ದೆಹಲಿಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಎರಡು ದಿನಗಳ ಸತತ ಚರ್ಚೆಯ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
  • ನಿನ್ನೆ ತಡರಾತ್ರಿ ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2-3 ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಸಂಪುಟ ವಿಸ್ತರಣೆ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರೊಂದಿಗೆ ಎರಡು ಸಲ ಚರ್ಚೆ ನಡೆಸಲಾಗಿದೆ. ಕೆಲವು ಸ್ಪಷ್ಠೀಕರಣ ಕೇಳಿದ್ದರು. ಅವುಗಳಗೆ ಸ್ಪಷ್ಟನೆ ನೀಡಲಾಗಿದೆ‌ ಎಂದು ತಿಳಿಸಿದರು.ಬುಧವಾರ ಬೆಳಿಗ್ಗೆ ಹೈಕಮಾಂಡನಿಂದ ಬೇಗ ಸಂದೇಶ ಬಂದರೆ ಮಧ್ಯಾಹ್ನ‌ ಅಥವಾ ಸಂಜೆ ವೇಳೆಗೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಎಷ್ಟು ಜನರಿಗೆ ಮತ್ತು ಯಾರಿಗೆ ಸಚಿವ ಸ್ಥಾನ ನೀಡಬಹುದು ಎಂಬುದನ್ನು ಹೈಕಮಾಂಡ ನಿರ್ಧರಿಸಲಿದೆ ಎಂದು ಅವರು ತಿಳಿಸಿದರು.ಸಾಮಾಜಿಕ ನ್ಯಾಯ, ಪ್ರಾದೇಶಿಕವಾರು, ಹಿರಿಯರು ಮತ್ತು ಯುವಕರಿಗೆ ಆದ್ಯತೆ ನೀಡಲಾಗುವುದು. ಉತ್ತಮ ಆಎಳಿತ ನೀಡುವುದರ ಜೊತೆಗೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಎರಡು ಹಂತಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಯೋಚನೆ ಹೊಂದಿದ್ದೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
  • ಸೀಲ್ ಮಾಡಿದ ಲಕೋಟೆಯೊಂದಿಗೆ ಬಂದ್ರಾ ಸಿಎಂ?
  • ಬಿಜೆಪಿ ಹೈಕಮಾಂಡ್ ಯಾರಿಗೆಲ್ಲ ಸಚಿವ ಸ್ಥಾನ ನೀಡಬೇಕು ಎಂಬುದರ ಕುರಿತು ಈಗಾಗಲೇ ಪಟ್ಟಿಯೊಂದನ್ನು ತಯಾರಿಸಿದೆ. ಆ ಪಟ್ಟಿಯನ್ನು ಲಕೋಟೆಯಲ್ಲಿ ಹಾಕಿ ಸೀಲ್ ಮಾಡಿ ಕಳುಹಿಸಿದೆ. ಆ ಪಟ್ಟಿಯನ್ನು ರಾಜಭವನಕ್ಕೆ ತಲುಪಿಸಿದ ಮೇಲೆ ಸಚಿವರ ಹೆಸರನ್ನು ಬಹಿರಂಗ ಪಡಿಸಲು ವರಿಷ್ಠರು ಸೂಚಿಸಿದ್ದಾರೆ ಎಂದು ನವದೆಹಲಿಯ ಮೂಲಗಳು ತಿಳಿಸಿವೆ.
  • ಮೊದಲ ಹಂತದಲ್ಲಿ 15 ಜನರಿಗೆ ಅವಕಾಶ
  • ಸಚಿವ ಸಂಪುಟ ವಿಸ್ತರಣೆಯಲ್ಲಿ ಮೊದಲ ಹಂತದಲ್ಲಿ ಸುಮಾರು 14 ರಿಂದ 15 ಜನರಿಗೆ ಅವಕಾಶ ನೀಡಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆಯ ಬಳಿಕ ಉಂಟಾಗುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿ ಎರಡನೇ ಹಂತದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡಲು ಬಿಜೆಪಿ ಹೈಕಮಾಂಡ ನಿರ್ಧರಿಸಿದೆ ಎಂದು ಬಿಜೆಪಿ ಉನ್ನತ ಮೂಲಗಳು ಬಸವ ನಾಡಿಗೆ ತಿಳಿಸಿವ

Leave a Reply

ಹೊಸ ಪೋಸ್ಟ್‌