ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ- ಭೀಮಾ ತೀರ ಸೇರಿದಂತೆ ಮಹಾರಾಷ್ಟ್ರದ ಗಡಿ ಚೆಕ್ ಪೋಸ್ಚ್ ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಗಡಿ ಚೆಕ್ ಪೋಸ್ಟ್ ಗಳಿಗೆ ಖುದ್ದಾಗಿ ತೆರಳಿ ಪರಿಶೀಲನೆ ನಡೆಸಿದರು.

 

ಮೊದಲಿಗೆ ಇಂಡಿ ತಾಲೂಕಿನ ಧೂಳಖೇಡ್ ಚೆಕ್ ಪೋಸ್ಟ್ ಗೆ ತೆರಳಿದ ಅವರು, ವಿಜಯಪುರ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೈಗೊಳ್ಳಲಾಗಿರುವ ಬಂದೋಬಸ್ತ್ ಮತ್ತು ತಪಾಸಣೆ ಕುರಿತು ಪರಿಶೀಲನೆ ನಡೆಸಿದರು.

 

 

 

ನಂತರ ಚಡಚಣ ತಾಲೂಕಿನ ಶಿರಾಡೋಣ ಗೆ ತೆರಳಿದ ಅವರು, ಶಿರಾಡೋಣ-ಲಿಂಗಸಗೂರು ರಾಜ್ಯ ಹೆದ್ದಾರಿಯಲ್ಲಿ ಕೈಗೊಳ್ಳಲಾಗಿರುವ ತಪಾಸಣೆ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಿದರು.

 

 

ಬಳಿಕ ಚಡಚಣ ತಾಲೂಕಿನ ಇಂಚಗೇರಿ ಬಳಿಯ ಕಣಕನಾಳ ಚೆಕ್ ಪೋಸ್ಟ್ ಗೆ ತೆರಳಿದ ಅವರು, ಅಲ್ಲಿಯೂ ಪರಿಶೀಲನೆ ನಡೆಸಿದರು.

ಅಲ್ಲಿಂದ ಗುಡ್ಡಾಪುರಕ್ಕೆ ಸಂಪರ್ಕ ಕಲ್ಪಿಸುವ ಅಳಗಿನಾಳ ಗ್ರಾಮದ ಚೆಕ್ ಪೋಸ್ಟ್ ಗೆ ತೆರಳಿ ಬಂದೋಬಸ್ತ್ ಪರಿಶೀಲನೆ ನಡೆಸಿದರು.

 

 

 

ನಂತರ ತಿಕೋಟಾ ತಾಲೂಕಿನ ಕನಮಡಿಗೆ ತೆರಳಿ ವಿಜಯಪುರ-ಜತ್ ಹೆದ್ದಾರಿಯಲ್ಲಿ ಕೈಗೊಳ್ಳಲಾಗಿರುವ ತಪಾಸಣೆ ಮತ್ತು ಇತರ ಕಾರ್ಯಗಳನ್ನು ಪರಿಶೀಲನೆ ನಡೆಸಿದರು.

 

 

ನಂತರ ಚಡಚಣ ತಾಲೂಕಿನ ಉಮರಜ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಅಲ್ಲಿಂದ ಭೀಮಾ ತೀರದ ಉಮರಾಣಿ ಗ್ರಾಮಕ್ಕೆ ತೆರಳಿ ಬಾಂದಾರ್ ಮೂಲಕ ಇರುವ ರಸ್ತೆಯಲ್ಲಿ ಕೈಗೊಳ್ಳಲಾಗಿರುವ ಬಂದೋಬಸ್ತ್ ಪರಿಶೀಲನೆ ನಡೆಸಿದರು.

ತಿಕೋಟಾ ತಾಲೂಕಿನ ಯತ್ನಾಳ ಗ್ರಾಮಕ್ಕೆ ತೆರಳಿ ಅಲ್ಲಿಯೂ ಚೆಕ್ ಪೋಸ್ಟ್ ನಲ್ಲಿ ಕೈಗೊಳ್ಳಲಾಗಿರುವ ಬಂದೋಬಸ್ತ್ ಪರಿಶೀಲನೆ ನಡೆಸಿದರು.

ನಂತರ ಸಿದ್ದಾಪುರ ಗ್ರಾಮಕ್ಕೆ ತೆರಳಿ ವಿಜಯಪುರ-ಉಮದಿ ರಸ್ತೆಯಲ್ಲಿ ಕೈಗೊಳ್ಳಲಾಗಿರುವ ಕಾರ್ಯವನ್ನು ಪರಿಶೀಲನೆ ನಡೆಸಿದರು.

ನಂತರ ಉಮದಿ ಕ್ರಾಸ್ ಗೆ ತೆರಳಿ ಚೆಕ್ ಪೋಸ್ಟ್ ಸಿಬ್ಬಂದಿಯ ಕಾರ್ಯ ವೈಖರಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಕೊರೊನಾ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಎಲ್ಲ ಪ್ರಯಾಣಿಕರನ್ನು ಪರಿಶೀಲನೆ ನಡೆಸಿ ಒಳಗೆ ಪ್ರವೇಶ ನೀಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಜೊತೆ ಇಂಡಿ ಉಪವಿಭಾಗಾಧಿಕಾರಿ ರಾಹುಲ ಸಿಂಧೆ ಸೇರಿದಂತೆ ನಾನಾ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌