ಎರಡು ದಿನಗಳಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ, ಈಗ ಕೊರೊನಾ, ಪ್ರವಾಹ ನಿರ್ವಹಣಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ಸಚಿವರ ಸಭೆ ನಡೆಸಿದ್ದಾರೆ. ಇಲ್ಲದೇ, ಈ ಸಚಿವರಿಗೆ ಎರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ.

ಅದಕ್ಕೂ ಮುಂಚೆ, ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮತ್ತು ಪ್ರವಾಹ ಪರಿಹಾರ ಕಾರ್ಯ ಕೈಗೊಳ್ಳಲು ಎಲ್ಲ 29 ಸಚಿವರಿಗೆ ನಾನಾ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದಾರೆ.

ನೂತನ ಸಚಿವರು ಮತ್ತು ಕೊರೊನಾ ಹಾಗೂ ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯ ಉಸ್ತುವಾರಿಗಳಿಗಾಗಿ ಅವರಿಗೆ ಹಂಚಿಕೆ ಮಾಡಲಾಗಿರುವ ಜಿಲ್ಲೆಗಳ ಮಾಹಿತಿ ಇಲ್ಲಿದೆ.

ನೂತನ ಸಚಿವರ ಪಟ್ಟಿ

1. ಗೋವಿಂದ ಕಾರಜೋಳ- ಬೆಳಗಾವಿ

2. ಕೆ. ಎಸ್. ಈಶ್ವರಪ್ಪ- ಶಿವಮೊಗ್ಗ

3. ಆರ್. ಅಶೋಕ- ಬೆಂಗಳೂರು ನಗರ

4. ಡಾ. ಅಶ್ವಥ ನಾರಾಯಣ-ರಾಮನಗರ

5. ಬಿ. ಶ್ರೀರಾಮುಲು- ಚಿತ್ರದುರ್ಗ

6. ವಿ. ಸೋಮಣ್ಣ- ರಾಯಚೂರು

7. ಜೆ. ಸಿ. ಮಾಧುಸ್ವಾಮಿ- ತುಮಕೂರು

8. ಸಿ. ಸಿ. ಪಾಟೀಲ- ಗದಗ

9. ಪ್ರಭು ಚವಾಣ- ಬೀದರ

10. ಆನಂದಸಿಂಗ- ವಿಜಯನಗರ, ಬಳ್ಳಾರಿ

11. ಕೆ. ಗೋಪಾಲಯ್ಯ- ಹಾಸನ

12. ಬೈರತಿ ಬಸವರಾಜ- ದಾವಣಗೆರೆ

13. ಎಸ್. ಟಿ. ಸೋಮಶೇಖರ- ಮೈಸೂರು ಮತ್ತು ಚಾಮರಾಜನಗರ

14. ಬಿ. ಸಿ. ಪಾಟೀಲ- ಹಾವೇರಿ

15. ಕೆ. ಸುಧಾಕರ- ಚಿಕ್ಕಬಳ್ಳಾಪುರ

16. ಕೆ. ಸಿ. ನಾರಾಯಣಗೌಡ- ಮಂಡ್ಯ

17. ಶಿವರಾಮ ಹೆಬ್ಬಾರ- ಉತ್ತರ ಕನ್ನಡ

18. ಉಮೇಶ ಕತ್ತಿ- ಬಾಗಲಕೋಟೆ

19. ಎಸ್. ಅಂಗಾರಾ- ದಕ್ಷಿಣ ಕನ್ನಡ

20. ಮುರುಗೇಶ ನಿರಾಣಿ- ಕಲಬುರಗಿ

21. ಎಂ. ಟಿ. ಬಿ. ನಾಗರಾಜ- ಬೆಂಗಳೂರು ಗ್ರಾಮಾಂತರ

22. ಕೋಟ ಶ್ರೀನಿವಾಸ ಪೂಜಾರಿ- ಕೊಡಗು

23. ಶಶಿಕಲಾ ಜೊಲ್ಲೆ- ವಿಜಯಪುರ

24. ವಿ. ಸುನಿಲ ಕುಮಾರ- ಉಡುಪಿ

25. ಹಾಲಪ್ಪ ಆಚಾರ- ಕೊಪ್ಪಳ

26. ಅರಗ ಜ್ಞಾನೇಂದ್ರ- ಚಿಕ್ಕಮಗಳೂರು

27. ಶಂಕರ ಪಾಟೀಲ ಮುನೇನಕೊಪ್ಪ- ಧಾರವಾಡ

28. ಬಿ. ಸಿ. ನಾಗೇಶ- ಯಾದಗಿರಿ

29. ಮುನಿರತ್ನ- ಕೋಲಾರ.

ಖಾತೆ ಹಂಚಿಕೆ ಬಳಿಕ ಈ ಸಚಿವರಿಗೆ ಅದೇ ಜಿಲ್ಲೆಗಳ ಉಸ್ತುವಾರಿಯನ್ನೂ ನೀಡುವ ಸಾಧ್ಯತೆ ಇದೆ.

Leave a Reply

ಹೊಸ ಪೋಸ್ಟ್‌