ವಿಜಯಪುರ: ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಠದ ಶ್ರೀ ಅಭಿನವ ಸಂಗನಬಸವ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಅವರು, ಮಠದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ವಿಜಯಪುರ ಜಿಲ್ಲೆಯಲ್ಲಿ ಮನಗೂಳಿ ಹಿರೇಮಠ ಇತಿಹಾಸ ಪ್ರಸಿದ್ಧವಾಗಿದೆ. ಈ ಮಠದ ಹಿಂದಿನ ಪೂಜ್ಯರಿಗೆ ತಮಗೂ ಬಹಳ ಆತ್ಮೀಯತೆ ಇತ್ತು. ಈಗ ಶ್ರೀ ಅಭಿನವ ಸಂಗನ ಬಸವ ಶಿವಾಚಾರ್ಯರು ಈ ಮಠದ ಜೀರ್ಣೋದ್ದಾರ ಮಾಡುತ್ತಿದ್ದಾರೆ. ಇದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು.
ಈ ನಾಡಿನಲ್ಲಿ ಮಠಗಳು ಕೀರ್ತನೆ, ಪುರಾಣಸ ಪ್ರವಚನ ನಡೆಸಿಕೊಂಡು ಬರುವುದರಿಂದ ಸಮಾಜ ಸುಧಾರಣೆ ಆಗುತ್ತದೆ ಎನ್ನುವುದು ತಮ್ಮ ಬಲವಾದ ನಂಬಿಕೆಯಾಗಿದೆ ಎಂದು ಎಸ್. ಆರ್. ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ. ಎಸ್. ಪಾಟೀಲ ಯಾಳಗಿ, ವಿಶ್ವನಾಥ್ ಪಾಟೀಲ, ಶಿವನಗೌಡ ಗುಜಗೊಂಡ, ಶ್ರೀಕಾಂತ ಸಾರವಾಡ, ಬಸವರಾಜ ಕಬ್ಬಿನ, ಶರಣಯ್ಯ ನಂದಿಕೋಲಮಠ, ಮುದುಕಪ್ಪ ಮನ್ನೂರ, ಯಂಕಪ್ಪ ಬನ್ನೂರ ಮುಂತಾದವರು ಉಪಸ್ಥಿತರಿದ್ದರು.