ಜನಸೇವೆಗಾಗಿ ಯಾವ ಖಾತೆಯನ್ನೂ ನಿಭಾಯಿಸುವೆ- ಹೊಸ ಖಾತೆ ಬಗ್ಗೆ ಬೇಸರವಿಲ್ಲ- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಕೆಲಸ ಮಾಡುವವರಿಗೆ ಜನತೆಗೆ ನ್ಯಾಯ ಒದಗಿಸಲು ಖಾತೆ ಯಾವುದಾದರೇನು? ಎಂದು ಪ್ರಶ್ನಿಸುವ ಮೂಲಕ ಮೂಲಕ ಮುಜರಾಯಿ, ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಮಗೆ ನೀಡಿರುವ ಖಾತೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಭೇಟಿಯ ನಂತರ ಮಾತನಾಡಿದ ಅವರು, ಯಾವ ಖಾತೆ ಇದ್ದರೂ ಆ ಖಾತೆ ಯೋಜನೆಗಳನ್ನು ತಳಮಟ್ಟದ ಜನತೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎರಡು ವರ್ಷಗಳಿಂದ ಮಹಿಳಾ ಮತ್ತು […]

ಪ್ರವಾಹದಿಂದಾದ ಬೆಳೆಹಾನಿ ಕುರಿತು ಸಂಪೂರ್ಣ ಸಮೀಕ್ಷಾ ವರದಿ ಪಡೆದು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಯಲಗೂರ ವ್ಯಾಪ್ತಿಯಲ್ಲಿ ಪ್ರವಾಹದಿಂದಾದ ಬೆಳೆಹಾನಿಗೆ ಸಂಬಂಧಿಸಿದ ಸಮೀಕ್ಷೆ ಕಾರ್ಯ ಮುಗಿದಿದ್ದು, ಈ ಕುರಿತು ಸಂಪೂರ್ಣ ವರದಿ ಪಡೆದು ಸೂಕ್ತ ಮತ್ತು ತಕ್ಷಣ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಹಾಗೂ ಪ್ರವಾಹ ಮತ್ತು ಕೋವಿಡ್ ನಿರ್ವಹಣೆ ವಿಜಯಪುರ ಉಸ್ತುವಾರಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಪ್ರವಾಹ ಹಾನಿ ಪರಿಶೀಲನೆಗಾಗಿ ಯಲಗೂರು ಶ್ರೀ ಹನುಮಾನ್ ದೇವಸ್ಥಾನದ ದರ್ಶನ ಪಡೆದ ನಂತರ ಕೃಷ್ಣಾ ನದಿ ದಂಡೆಯ ಜಾಕ್‍ವೆಲ್ […]

ಹೊಸ ಬದಲಾವಣೆ ತರಲು ಹೊಸ ಸಚಿವರಿಗೆ ದೊಡ್ಡ ಖಾತೆ ನೀಡಲಾಗಿದೆ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಹೊಸಬರಿಗೆ ದೊಡ್ಡ ಖಾತೆಗಳನ್ನು ನೀಡುವ ಮೂಲಕ ಹೊಸ ಬದಲಾವಣೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವರಿಗೆ ಈಗ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಇನ್ನು ಮುಂದೆ ಆಯಾ ಸಚಿವರು ತಮ್ಮ ಖಾತೆಯನ್ನು ನಿಭಾಯಿಸಿ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು ಖಾತೆ ಹಂಚಿಕೆ ಬಗ್ಗೆ ಸಚಿವ ಆನಂದಸಿಂಗ್ ಅಸಮಾಧಾನ ವಿಚಾರ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆನಂದಸಿಂಗ್ ಅವರನ್ನು […]

ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ- ಕಾರಜೋಳಗೆ ನೀರಾವರಿ, ನಿರಾಣಿಗೆ ಕೈಗಾರಿಕೆ- ಉಳಿದವರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ

ಬೆಂಗಳೂರು: ಇಂತೂ ಇಂತು ಅಳೆದು ತೂಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಯಾರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ ನೂತನ ಸಚಿವರ ಪಟ್ಟಿ 1. ಬಸವರಾಜ ಬೊಮ್ಮಾಯಿ- ಡಿಪಿಎಆರ್, ಹಣಕಾಸು, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ನಗರಾಭಿವೃದ್ಧಿ, ಹಂಚಿಕೆಯಾಗದ ಇತರ ಖಾತೆಗಳು 2. ಗೋವಿಂದ ಕಾರಜೋಳ- ಭಾರಿ ಮತ್ತು ಮಧ್ಯ ನೀರಾವರಿ 3. ಕೆ. ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ 4. ಆರ್. ಅಶೋಕ- ಕಂದಾಯ(ಮುಜರಾಯಿ […]