ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ- ಕಾರಜೋಳಗೆ ನೀರಾವರಿ, ನಿರಾಣಿಗೆ ಕೈಗಾರಿಕೆ- ಉಳಿದವರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ

ಬೆಂಗಳೂರು: ಇಂತೂ ಇಂತು ಅಳೆದು ತೂಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಯಾರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ

ನೂತನ ಸಚಿವರ ಪಟ್ಟಿ

1. ಬಸವರಾಜ ಬೊಮ್ಮಾಯಿ- ಡಿಪಿಎಆರ್, ಹಣಕಾಸು, ಗುಪ್ತಚರ, ಸಂಪುಟ ವ್ಯವಹಾರ, ಬೆಂಗಳೂರು ನಗರಾಭಿವೃದ್ಧಿ, ಹಂಚಿಕೆಯಾಗದ ಇತರ ಖಾತೆಗಳು

2. ಗೋವಿಂದ ಕಾರಜೋಳ- ಭಾರಿ ಮತ್ತು ಮಧ್ಯ ನೀರಾವರಿ

3. ಕೆ. ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್

4. ಆರ್. ಅಶೋಕ- ಕಂದಾಯ(ಮುಜರಾಯಿ ಸೇರಿ)

5. ಡಾ. ಅಶ್ವಥ ನಾರಾಯಣ-ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ

6. ಬಿ. ಶ್ರೀರಾಮುಲು- ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ

7. ವಿ. ಸೋಮಣ್ಣ- ವಸತಿ, ಮೂಲಭೂತ ಸೌಕರ್ಯ ಅಭಿವೃದ್ಧಿ

8. ಜೆ. ಸಿ. ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ

9. ಸಿ. ಸಿ. ಪಾಟೀಲ- ಲೋಕೋಪಯೋಗಿ

10. ಪ್ರಭು ಚವಾಣ- ಪಶು ಸಂಗೋಪನೆ

11. ಆನಂದಸಿಂಗ- ಪರಿಸರ ಮತ್ತು ಪ್ರವಾಸೋದ್ಯಮ

12. ಕೆ. ಗೋಪಾಲಯ್ಯ- ಅಬಕಾರಿ

13. ಬೈರತಿ ಬಸವರಾಜ- ನಗರಾಭಿವೃದ್ಧಿ(ಕೆಯುಡಬ್ಲ್ಯೂಎಸ್ ಡಿ ಬಿ ಮತ್ತು ಕೆಯುಐಡಿಎಫಸಿ ಸೇರಿ, ಬೆಂಗಳೂರು ಅಭಿವೃದ್ಧಿ, ಬಿಬಿಎಂಪಿ, ಬಿಡಿಎ, ಬಿ ಡಬ್ಲ್ಯಎಸಎಸಬಿ, ಬಿಎಂಆರಡಿಎ, ಬಿಎಂಆರಸಿಎಲ್ ಮತ್ತು ನಗರಾಭಿವೃದ್ಧಿ ಕೋಶ, ನಗರಾಭಿವೃದ್ಧಿ ಇಲಾಖೆ ಹೊರತು ಪಡಿಸಿ)

14. ಎಸ್. ಟಿ. ಸೋಮಶೇಖರ- ಸಹಕಾರ

15. ಬಿ. ಸಿ. ಪಾಟೀಲ- ಕೃಷಿ

16. ಕೆ. ಸುಧಾಕರ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ

17. ಕೆ. ಸಿ. ನಾರಾಯಣಗೌಡ- ರೇಶ್ಮೆ, ಯುವಜನ ಸೇವೆ ಮತ್ತು ಕ್ರೀಡೆ

18. ಶಿವರಾಮ ಹೆಬ್ಬಾರ- ಕಾರ್ಮಿಕ

19. ಉಮೇಶ ಕತ್ತಿ- ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕರ ವ್ಯವಹಾರ

20. ಎಸ್. ಅಂಗಾರಾ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ

21. ಮುರುಗೇಶ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕೆ

22. ಎಂ. ಟಿ. ಬಿ. ನಾಗರಾಜ- ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ

23. ಕೋಟ ಶ್ರೀನಿವಾಸ ಪೂಜಾರಿ- ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ

24. ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್ ಮತ್ತು ವಕ್ಫ್

25. ವಿ. ಸುನಿಲ ಕುಮಾರ- ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

26. ಹಾಲಪ್ಪ ಆಚಾರ- ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಶೇಷಚೇತನರ ಅಭಿವದ್ಧಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

27. ಅರಗ ಜ್ಞಾನೇಂದ್ರ- ಗೃಹ(ಗುಪ್ತಚರ ಹೊರತು ಪಡಿಸಿ)

28. ಶಂಕರ ಪಾಟೀಲ ಮುನೇನಕೊಪ್ಪ- ಕೈಮಗ್ಗ, ಜವಳಿ, ಸಕ್ಕರೆ

29. ಬಿ. ಸಿ. ನಾಗೇಶ- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ

30. ಮುನಿರತ್ನ- ತೋಟಗಾರಿಕೆ, ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ, ಸಾಂಖ್ಯಿಕ

Leave a Reply

ಹೊಸ ಪೋಸ್ಟ್‌