ಬೆಂಗಳೂರು: ಸಚಿವ ಅವರಿಗೆ ಬೆಂಗಳೂರಿಗೆ ಬರಲು ಸೂಚಿಸಿದ್ದು ಅವರು ಬಂದು ಹೋದ ಮೇಲೆ ಎಲ್ಲವೂ ಸರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆನಂದಸಿಂಗ್ ರಾಜೀನಾಮೆ ವದಂತಿಗಳ ಕುರಿತು ಪ್ರತಿಕ್ರಿಯೆ ನೀಡಿದರು.
ಆನಂದಸಿಂಗ್ ನನಗೆ ಮೂರು ದಶಕಗಳ ನನಗೆ ಗೆಳೆಯರು. ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ನಿನ್ನೆ ಕೂಡ ಅವರೊಂದಿಗೆ ಮಾತನಾಡಿದ್ದೇನೆ. ಇಂದು ಕೂಡ ಮಾತನಾಡುತ್ತೇನೆ ಎಂದು ಸಿಎಂ ತಿಳಿಸಿದರು.
ಆನಂದಸಿಂಗ್ ಅವರ ವಿಚಾರ ನನಗೆ ಗೊತ್ತಿದೆ. ನಾನು ಕೂಡ ಹಲವಾರು ವಿಚಾರಗಳನ್ನು ಅವರಿಗೆ ಹೇಳಿದ್ದೇನೆ. ಅವರು ಇಲ್ಲಿಗೆ ಬಂದು ಮಾತನಾಡಿ ಹೋದ ಮೇಲೆ ಎಲ್ಲವೂ ಸರಿಹೋಗಲಿದೆ. ಅವರು ರಾಜೀನಾಮೆ ನೀಡಿಲ್ಲ. ಅವರ ವಿಚಾರಗಳ ಕುರಿತು ಮಾತುಕತೆಯಷ್ಟೇ ಆಗಿದೆ. ಅಂತಿಮವಾಗಿ ಎಲ್ಲವೂ ಸರಿಯಾಗುಲಿದೆ ಎಂದು ಅವರು ತಿಳಿಸಿದರು.
ಯಾವ ನಿರ್ಧಾರ ಕೈಗೊಳ್ಳುತ್ತೀರಿ ಎಂದು ಮಾಧ್ಯಮದವರ ಫ್ರಶ್ನೆಗೆ ಪ್ರಯಿಕ್ರಿಯೆ ನೀಡಿದ ಸಿಎಂ ನಾವು ಮಾಡುವ ನಿರ್ಣಯ ನಿಮಗೆ ಆಮೇಲೆ ಗೊತ್ತಾಗುತ್ತೆ. ಅವರು ಎಲ್ಲ ವಿಚಾರಗಳನ್ನು ಹೇಳಿದ್ದಾರೆ. ನಾನು ಅದನ್ನು ಚರ್ಚೆ ಮಾಡುತ್ತೇನೆ. ನಾನು ಅವರನ್ನು ಕರೆದು ಮಾತನಾಡಿದ ಮೇಲೆ ಎಲ್ಲವೂ ಸರಿಯಾಗುತ್ತದೆ. ನಾನು ಏನು ಮಾಡುತ್ತೇನೆ ಎಂಬುದನ್ನು ನಿಮಗೇಕೆ ಹೇಳಬೇಕು ಎಂದು ಪ್ರಶ್ನಿಸಿದತು.
ಆನಂದಸಿಂಗ್ ಅವರಿಗೆ ಇಂದು ಅಥವಾ ನಾಡಿದ್ದು ಬರಲು ಹೇಳಿದ್ದೇನೆ. ನಾಳೆ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಅವರಿಗೆ ಅನುಕೂಲವಾದಾಗ ಬರಲಿ. ಈ ವಿಷಯದ ಕುರಿತು ಹೈಕಮಾಂಡ ಸೇರಿದಂತೆ ಯಾರ ಜೊತೆಯೂ ಚರ್ಚಿಸಿಲ್ಲ. ಆನಂದಸಿಂಗ್ ಬಂದು ಹೋದ ಮೇಲೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ, ಸಚಿವ ಎಂಟಿಬಿ ನಾಗರಾಜ ಬೇಡಿಕೆ ಕುರಿತು ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅವರದೇನೂ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.