ಕೃಷ್ಣಾನಗರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಹಿತರಕ್ಷಣಾ ಸಮಿತಿ ಸಭೆ

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಹಿತರಕ್ಷಣಾ ಸಮಿತಿ ಸಭೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರಖಾನೆಯ ಆವರಣದಲ್ಲಿ ನಡೆಯಿತು.

ಆಲಮಟ್ಟಿ ಜಲಾಷಯದ ಎತ್ತರವನ್ನು 524.256 ಮೀ. ಗೆ ಹೆಚ್ಚಿಸುವುದರಿಂದ ಮಳುಗಡೆಯಾಗುವ ಜಮೀನಿಗೆ ಯೋಗ್ಯ ದರ ನಿಗದಿ ಪಡಿಸುವ ಕುರಿತು ಮತ್ತು ಈ ಹಿಂದೆ ಸಲ್ಲಿಸಿರುವ ಹಲವಾರು ಬೇಡಿಕೆಗಳ ಕುರಿತು ನೀಕಾವಕಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ಸಂತ್ರಸ್ಥರ ಬೇಡಿಕೆಗಳ ಕುರಿತು ಗಮನ ಸೆಳೆಯಲು ನಿರ್ಧರಿಸಲಾಯಿತು.

ಈ ಸಭೆಯಲ್ಲಿ ಎಚ್. ಜಿ. ಬಾಳಶೆಟ್ಟಿ, ಕುಮಾರ ನಿಡೋಣಿ, ಪ್ರಭುಸ್ವಾಮಿ ಹಿರೇಮಠ, ಮೋಹನ ಜಾಧವ, ದುಂಡಪ್ಪ ನಾಗನೂರ ಮತ್ತು ಹೈಕೋರ್ಟ್ ನ್ಯಾಯವಾದಿ ರಾಜೇಂದ್ರ ದೇಸಾಯಿ ಅವರು ಸಂತ್ರಸ್ತರ ಬೇಡಿಕೆಗಳ ಕುರಿತು ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿ ಅಧ್ಯಕ್ಷ ಮುತ್ತು ವಾಸಣ್ಣ ದೇಸಾಯಿ ಮುಂದಿನ ಹೋರಾಟದ ರೂಪು ರೇಷೆಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶಂಕರಗೌಡ ಪಾಟೀಲ, ಜಿ. ಡಿ. ದೇಸಾಯಿ, ಲಕ್ಷ್ಮಣ ದೊಡ್ಡಮನಿ, ರವಿಕುಮಾರ ದೇಸಾಯಿ, ಶಿವನಗೌಡ ಪಾಟೀಲ, ಗಿರೀಶ ಕೋರಡ್ಡಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ನಿರ್ದೇಶಕರಾದ ರಮೇಶ ಜಕರಡ್ಡಿ, ರಮೇಶ ಶೇಭಾಣಿ, ಸಿದ್ದಣ್ಣ ದೇಸಾಯಿ, ತಿಮ್ಮಣ್ಣ ಅಮಲಝರಿ, ಶರಶ್ಚಂದ್ರ ಪಾಟೀಲ, ಹಣಮಂತ ಕೊಣ್ಣೂರ, ಹಣಮಂತ ಕಡಪಟ್ಟಿ, ಗಿರೀಶ ಪಾಟೀಲ ಶಿರಬೂರ ಮತ್ತು ಸಂತ್ರಸ್ಥರು ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌