ಅನಾರೋಗ್ಯದ ಸಂದರ್ಭದಲ್ಲಿ ಆರೈಕೆ ಮಾಡಿದ ಆರೋಗ್ಯ ಸಿಬ್ಬಂದಿಗೆ ನೆರವಾದ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ: ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರ ಉಪಚಾರ ಪಡೆದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗುವ ಮುಂಚೆ ತಮ್ಮನ್ನು ಅಕ್ಕರೆಯಿಂದ ಆರೈಕೆ ಮಾಡಿದ ಆಸ್ಪತ್ರೆಯ ಸಿಬ್ಬಂದಿಗಳಿಗೆ ನೆರವಾಗುವ ಮೂಕಲ ಕೃತಜ್ಞತೆ ಸಲ್ಲಿಸಿದ್ದಾರೆ.

ದೇವಾನಂದ ಚವ್ಹಾಣ ಆಸ್ಪತ್ರೆ ಸಿಬ್ಬಂದಿಗೆ ಆಹಾರದ ಕಿಟ್ ವಿತರಿಸಿದರು.

ಬಸವನಾಡು ವಿಜಯಪುರ ಜಿಲ್ಲೆಯ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ವಾರ ವಿಜಯಪುರ ನಗರದ ಆಯುಷ್ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಗುಣಮುಖರಾಗಿ ಡಿಶ್ಚಾರ್ಜ್ ಆಗುತ್ತಿದ್ದಾರೆ. ಅದಕ್ಕೂ ಮುಂಚೆ ತಮಗೆ ಚಿಕಿತ್ಸೆ ನೀಡಿದ ಆಯುಷ್ ಆಸ್ಪತ್ರೆಯ ಮುಖ್ಯಸ್ಥ ಡಾ. ನಿತೀನ ಅಗರವಾಲ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ, ತಾವು ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಅಕ್ಕರೆಯಿಂದ ಆರೈಕೆ ಮಾಡಿ ಉಪಚರಿಸಿದ ಆಸ್ಪತ್ತೆಯ ಎಲ್ಲ ಸಿಬ್ಬಂದಿಗೆ ಆಹಾರ ಧಾನ್ಯದ ಕಿಟ್ ಗಳನ್ನು ವಿತರಿಸುವ ಮೂಲಕ ನೆರವಾಗಿ ಕೃತಜ್ಞತೆ ಸಲ್ಲಿಸಿದರು.

ತಾವು ನೋವಿನಿಂದ ಗುಣಮುಖರಾದರೂ ತಮಗೆ ಚಿಕಿತ್ಸೆ ನೀಡಿದ ಸಿಬ್ಬಂದಿಯ ಮೊಗದಲ್ಲಿ ಸ್ವಲ್ಪ ಮಟ್ಟಿಗಾದರೂ ನಲಿವಿರಲಿ ಎಂಬ ಸದುದ್ದೇಶದಿಂದ ಆಯುಷ್ ಆಸ್ಪತ್ರೆಯ ಸುಮಾರು 100 ಜನ ಸಿಬ್ಬಂದಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಡಾ. ನಿತೀನ ಅಗರವಾಲ, ಶಾಸಕ ಡಾ. ದೇವಾನಂದ ಚವ್ಹಾಣ ಮತ್ತೀತರರು.

ಈ ಕಿಟ್ ವಿತರಣೆ ಸಂದರ್ಭದಲ್ಲಿ ಆಯುಷ್ ಆಸ್ಪತ್ತೆಯ ಮುಖ್ಯಸ್ಥ ಮತ್ತು ಖ್ಯಾತ ವೈದ್ಯರಾದ ಡಾ. ನಿತಿನ ಅಗರವಾಲ, ಶಾಸಕರ ಸಹೋದರ ರವಿಕುಮಾರ ಫೂ. ಚವ್ಹಾಣ, ಮುಖಂಡರಾದ ವಿಕ್ರಮ ನಾಯ್ಕ, ಉಮೇಶ ರಾಠೋಡ(ಐ. ಆರ್. ಎಸ್), ಡಾ. ಬಾಬು ಕುಚನೂರ, ಧರಿಶ್ಚಂದ್ರ ದೊಡಮನಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌