ವಿಜಯಪುರ: 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಅತೀ ದೊಡ್ಡ ಜಲಾಷಯ ಆಲಮಟ್ಟಿಗೆ 3ಡಿ ರೂಪದಲ್ಲಿ ವಿದ್ಯುದಲಂಕಾರ ಮಾಡಲಾಗಿದೆ.
ಶುಕ್ರವಾರ ಸಂಜೆಯಿಂದಲೇ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಸಾಗರ ವಿದ್ಯುತ್ ಬೆಳಕಿನಿಂಗ ಜಗಮಘಾಯಿಸುತ್ತಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿಂದ ಮುಖ್ಯ ದ್ವಾರಕ್ಕೆ ವಿದ್ಯುತ್ ಅರಂಕಾರ ಮಾಡಲಾಗಿದೆ.
ಅಷ್ಟೇ ಅಲ್ಲ, ಆಲಮಟ್ಟಿ ಜಲಾಷಯದ ಗೇಟುಗಳಿಗೂ ವಿದ್ಯುತ್ ಅಲಂಕಾರ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ಒಟ್ಟಾರೆ, ಈ ಬಾರಿ ಪ್ರತಿವರ್ಷಕ್ಕೂ ಮುಂಚೆಯೇ ಜಲಾಷಯ ಸಂಪೂರ್ಣ ಭರ್ತಿಯಾಗಿದ್ದು, ಈ ಸಲ 75ನೇ ಸ್ವಾತಂತ್ರ್ಯ ದಿನಾಚರಣೆಯೂ ಇರುವುದರಿಂದ ಮತ್ತು ಜಲಾಷಯಕ್ಕೆ 3ಡಿ ರೂಪದ ವಿದ್ಯುತ್ ಅಲಂಕಾರ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.