ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಹಿಳಾ ಸಬಲೀಕರಣ ಇನ್ನೂ ಪರಿಪೂರ್ಣವಾಗಿಲ್ಲ- ಇದಕ್ಕೆ ಕಾರಣಗಳೇನು ಎಂಬುದರ ಕುರಿತು ಲೇಖನ

ಡಾ. ಮಲ್ಲಮ್ಮ ಯಾಳವಾರ
ಸಬಲಾ ಸಂಸ್ಥೆಯ ಸಂಸ್ಥಾಪಕಿ

ವಿಜಯಪುರ: ಮಹಿಳೆಯರನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಸಬಲಿಕರಣಕ್ಕಾಗಿ ಹಾಗೂ ಅವರನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶಗಳಿರುವ ಸ್ವಯಂ ಸೇವಾ ಸಂಸ್ಥೆಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿವೆ. ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡು ಕೆಲಸವನ್ನೂ ನಿರ್ವಹಿಸುತ್ತಿವೆ. ಫೆವಾರ್ಡ- ಕ ಗೆ 30 ವರ್ಷ ಇತಿಹಾಸವಿದ್ದರೂ ಮಹಿಳೆಯರ ಭಾಗವಹಿಸುವಿಕೆಯ ಕೋರತೆ ಇಂದಿಗೂ ಕಾಣುತ್ತಿದೆ. ಇಂದು ನಮ್ಮ ಸಮಾಜದಲ್ಲಿ ಹಾಗೂ ಕುಟುಂಬ ವ್ಯವಸ್ಥೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಶಿಕ್ಷಣ, ಅಧಿಕಾರ ಮತ್ತು ಪ್ರಯಾಣ ಮೂಲಗಳಾಗಿದ್ದರೂ ಇವುಗಳಿಗೆ ಸೂಕ್ತ ಆರ್ಥಿಕ ಸಹಾಯವಿಲ್ಲದೇ ಅವುಗಳ ಅದಮ್ಯ ವಿಶ್ವಾಸವನ್ನು ನಿರುತ್ಸಾಹಗೊಳಿಸುವ ಮೂಲಕ ಹತ್ತಿಕ್ಕಲಾಗುತ್ತಿದೆ. ಮಹಿಳೆಯರ ಅಭಿವೃದ್ಧಿಗಾಗಿ ಹುಟ್ಟಿಕೊಂಡ ಮಹಿಳಾ ಸಂಸ್ಥೆಗಳು ಇದಕ್ಕೆ ಹೊರತಾಗಿಲ್ಲ.

ಭಾರತದ ಸಂವಿಧಾನದ 14ನೇ ವಿಧಿಯ ಅನ್ವಯ ಮಹಿಳೆಯರು ಮತ್ತು ಪುರುಷರು ಸಮಾನರು. ಮಹಿಳೆಗೆ ಪುರುಷರಂತೆ‌ ಎಲ್ಲ ಹಕ್ಕುಗಳು ಸಿಗಬೇಕಿದೆ. ಆದರೆ, ದೇಶಕ್ಕೆ ಸ್ವಂತಂತ್ರ ಬಂದು 74 ವರ್ಷಗಳು ಕಳೆದರೂ ಇಂದಿಗೂ ಮಹಿಳಾ ಶೋಷಣೆ ನಿಂತಿಲ್ಲ. ಜಾಗತಿಕರಣದಿಂದ ಮಹಿಳೆಯರು ಅನೇಕ ಪ್ರಯೋಜನೆ ಪಡೆದಿದ್ದರೂ ಶೋಷಣೆಯಿಂದ ಮುಕ್ತರಾಗಿಲ್ಲ. ಕರ್ನಾಕದಲ್ಲಿ ಹುಟ್ಟುವ ಮಕ್ಕಳ ಲಿಂಗಾನುಪಾತ 1000 ಗಂಡು ಮಕ್ಕಳಿಗೆ 940 ಹೆಣ್ಣು ಮಕ್ಕಳಿರುವುದು ಇದಕ್ಕೆ ಸಾಕ್ಷು. ಸ್ತ್ರೀ ಭ್ರೂಣ ಹತ್ತೆ ನಿರಂತರವಾಗಿ ನಡೆಯುತ್ತಿದೆ. ಹುಟ್ಟಿದ ಮಗು‌ ಹೆಣ್ಣೆಂದು ತಿಳಿದು ಹತ್ಯೆ ಮಾಡಲಾಗುತ್ತಿದೆ. ಏಷ್ಟೋ ಹೆಣ್ಣು ಮಕ್ಕಳು ಹುಟ್ಟಿದ 12 ವರ್ಷದೊಳಗೆ ಕಾಣೆಯಾಗುತ್ತಿದ್ದಾರೆ. ಹೆಣ್ಣು ಮಕ್ಕಳು ಕಲಿಕೆಯಲ್ಲಿ ವಂಚಿತರಾಗಿರುವುದರಿಂದ ಅವಳ ಸಾಮಾಜಿಕ ಬೇಳವಣಿಗೆಯು ಕುಂದುತ್ತಿದೆ. ಅಪರಿಚಿತ ಬಡ ಕುಟುಂಬದ ಮಕ್ಕಳು ಕಾಣೆಯಾದಾಗ ಪೊಲೀಸರು ತಾತ್ಸಾರ ತೊರಿದ್ದನ್ನು ನಾವು ಕಾಣುತ್ತಿದ್ದಶವೆ. ಕೌಟುಂಬಿಕ ದೌರ್ಜನ್ಯಗಳು ದಿನದಿನೇ ಹೆಚ್ಚುತ್ತಿವೆ. ಬಲವಾದ ಕಾನೂನುಗಳ ನೆರವಿದ್ದರೂ ಮಹಿಳೆಯರನ್ನು ದ್ವಿತೀಯದ ರ್ಜೆ ನಾಗರೀಕರನ್ನಾಗಿ ನೋಡುವ ಪ್ರವೃತ್ತಿ ಬದಲಾಗಿಲ್ಲ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ದತ್ತವಾಗಬೇಕಿರುವ ಹಕ್ಕು ಮತ್ತು ಅಧಿಕಾರಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಮಹಿಳೆಯು ಬೈಗುಳ, ಕೆಟ್ಟ ಶಬ್ಧಗಳ ಬಳಕೆ ಮತ್ತು ನಿಂಧನೆಗಳಿಂದ ಜರ್ಝರಿತಳಾಗುತ್ತಿದ್ದಾಳೆ. ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಗೆ ಅವಕಾಶ ಸಿಗುತ್ತಿಲ್ಲ್ಲ.

ಹಣ, ಹೆಂಡ, ಜಾತಿ ಪ್ರಭಾವದಿಂದ ಪುರುಷರೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮಹಿಳೆಯನ್ನು ಸಹನಶೀಲಳೆಂದು ಭೂಮಿಗೆ ಹೊಲಿಸಲಾಗುತ್ತದೆ. ಆದರೆ ಅವಳು ಭೂಮಿ ಹಕ್ಕಿನಿಂದಲೇ ವಂಚಿತಳಾಗಿದ್ದಾಳೆ. ಕರ್ನಾಟಕದಲ್ಲಿ ಕೇವಲ ಶಢ. 12 ಮಹಿಳೆಯರು ಭೂ ಮಾಲಿಕತ್ವವನ್ನು ಹೊಂದಿದ್ದಾರೆ.

ಇಂದಿನ ಶೈಕ್ಷಣಿಕ ಅಧ್ಯಯನದಂತೆ ಕೇವಲ ಶೇ. 8 ಗ್ರಾಮೀಣ ದಲಿತ ಹೆಣ್ಣು ಮಕ್ಕಳು ಹಾಗೂ ಶೇ. 12 ಹಿಂದುಳಿದ ವರ್ಗದ ಮಕ್ಕಳು ಇತರೆ ವರ್ಗದ ಶೇ. 27 ಹೆಣ್ಣು ಮಕ್ಕಳು ಕಾಲೇಜು ಕಟ್ಟೆ ಏರುತ್ತಿದ್ದಾರೆ. ಉನ್ನತ ಶಿಕ್ಷಣವನ್ನು ಮಾಡಿದ ಮಕ್ಕಳಲ್ಲಿ ಶೇ.‌ 27 ಮಹಿಳೆಯರು ಕೇಲಸಕ್ಕೆ ಸೇರುತ್ತಿದ್ದಾರೆ. ಇಂಥ ಮಹಿಳೇಯರು ಮದುವೆ ಆದ ನಂತರ ಕೌಟುಂಬಿಕ ಕಲಹಗಳಿಂದ ಕೆಲಸಗಳನ್ನು ತ್ಯಜಿಸುತ್ತಿದ್ದಾರೆ.

ಲಕ್ಷಾಂತರ ಸ್ವಸಹಾಯ ಮಹಿಳಾ ಸಂಘಗಳನ್ನು ಸರಕಾರ ಮುತ್ತು ಸ್ವಯಂ ಸೇವಾ ಸಂಸ್ಥೆಗಳು ರಚಿಸಿವೆ. ಆದರೆ ಅವುಗಳ ಮೂಲ ಉದ್ದೇಶವೆ ಮರೆತು ಕೇವಲ ಹಣಕಾಸು ವ್ಯವಹಾರಕ್ಕೆ ಸೀಮಿತವಾಗಿವೆ. ಮೈಸೂರಿನ ಆರ್. ಎಲ್. ಎಚ್. ಪಿ ಸಂಸ್ಥೆಯ ಇತ್ತೀಚಿನ ಅಧ್ಯಯನದ ಪ್ರಕಾರ ಮೈಕ್ರೋ ಫೈನಾನ್ಸನಿಂದ ಮಹಿಳೆ ಶೋಷಣೆಗೆ ಒಳಪಡುತ್ತಿದ್ದಾಳೆ. ಮಾನಸಿಕ ಒತ್ತಡ ಹೆಚ್ಚುತ್ತಿವೆ. ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿವೆ. ಪಡೆದ ಸಾಲವನ್ನು ಸ್ವಯಂ ಉದ್ದೋಗಕ್ಕಾಗಿ ಅಥವಾ ಸುಸ್ಥಿರ ಅಭಿವೃದ್ಧಿಗಾಗಿ ಉಪಯೋಗಿಸುವ ಸ್ವಾತಂತ್ರ್ಯ ಮಹಿಳೆಯರಿಗೆ ಇಲ್ಲ. ಹಾಗಿದ್ದರೆ ಯಾಕೆ ಮಹಿಳೆಯರನ್ನು ಸಾಲಗಾರರನ್ನಾಗಿ ಮಾಡುವುದು? ಎಷ್ಟೋ ಸ್ವಯಂ ಸೇವಾ ಸಂಸ್ಥೆಗಳು ಇದನ್ನು ಮುಖ್ಯ ಕಾರ್ಯಕ್ರಮವನ್ನಾಗಿ ಮಾಡುತ್ತಿರುವುದು ಎಷ್ಟು ಸರಿ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.

ರಾಜಕಾರಣಿಗಳು, ಬಂಡವಾಳ ಶಾಹಿಗಳು ತಮ್ಮಕಪ್ಪು ಹಣವನ್ನು ಸಾಲ ಕೊಟ್ಟು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಮುಖ್ಯಸ್ಥ ಸ್ವಯಂ ಸೇವಾ ಸಂಸ್ಥೆಗಳು ಮಹಿಳಾ ಮಂಡಳಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಹೋರಾಟಗಾರರು ಮಹಿಳೆಯ ಅಸ್ಥಿತ್ವಕ್ಕಾಗಿ, ಸಮಾನತೆಗಾಗಿ, ಹಕ್ಕುಗಳಿಗಾಗಿ ಎಲೆಮರೆಯ ಕಾಯಿಯಂತೆ ಕೇಲಸ ನಿರ್ವಹಿಸುತ್ತಿದ್ದಾರೆ.‌‌ ಒಂದು ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ ಖಂಡಿತವಾಗಿ ಅವಳಲ್ಲಿ ಅಗಾಧ ಹಾಗೂ ಅನಂತವಾದ ಶಕ್ತಿ ಇದೆ. ಆದರೆ ನಮ್ಮಕುಟುಂಬ ವ್ಯವಸ್ಥೆ ಸಾಮಾಜಿಕ ಕಟ್ಟಳೆಗಳಿಂದ ಅವಳನ್ನು ಹತ್ತಿಕ್ಕಲಾಗುತ್ತಿದೆ 21ನೇ ಶತಮಾನದಲ್ಲಿ ಮಹಿಳೆಯ ಪಾತ್ರ ಬದಲಾಗಿದೆ. ವೃತ್ತಿ ಮತ್ತು ಸಂಸಾರ ಎರಡನ್ನು ನಿಭಾಯಿಸಬಲ್ಲೆ ಎಂದು ಮಹಿಳೆ ಮಾದರಿಯಾಗಿ ನಿಂತಿದ್ದಾಳೆ. ದುಡಿಯುವ ಮಹಿಳೆಯರನ್ನು ಗುರುತಿಸಿ ಗೌರವ ಪ್ರೋತ್ಸಾಹ ನೀಡುವದಕ್ಕಾಗಿ ಮಹಿಳಾ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ. ಅವಳಿಗೆ ಪ್ರೋತ್ಸಾಹ ಸಿಗಬೇಕಿದೆ. ಇದು ಸಾಧ್ಯವಾಗಬೇಕದರೆ, ಸ್ವಯಂ ಸೇವಾ ಸಂಸ್ಥೆಗಳು ಅದರಲ್ಲೂ ಮಹಿಳಾ ಮುಖ್ಯಸ್ಥ ಸ್ವಯಂ ಸೇವಾ ಸಂಸ್ಥಗಳು ರಚನಾತ್ಮಕವಾಗಿ ಕೇಲಸ ಮಾಡಬೇಕಾಗುತ್ತದೆ. ಕರ್ನಾಟಕದಲ್ಲಿರುವ ಸುಮಾರು 250ಕ್ಕೂ ಹೆಚ್ಚು ಮಹಿಳಾ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಬೇಕಿದೆ. ದೂರದೃಷ್ಟಿಯ ಕಾರ್ಯ ಯೋಜನೆ ರೂಪಿಸಿ ಅದರಂತೆ ಕಾರ್ಯ ನಿರ್ವಹಿಸುವ ಅವಶ್ಯಕತೆ ಇದೆ.

ಬೇರೆ ರಾಜ್ಯದ ಇಂತಹುದೆ ಜಾಲಗಳೊಂದಿಗೆ ಕೈಗೂಡಿಸುವ ಅವಶ್ಯತೆಯಿದೆ. ಸುಸ್ಥಿರ ಅಭಿವೃದ್ಧಿಗಾಗಿ ಮಹಿಳೆಯರನ್ನು ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಬಲವಾದ ಸಂಘಟನೆ ಮಾಡಿ ನಿರ್ಧಿಷ್ಟ ರೂಪುರೇಷಗಳನ್ನು ರಚಿಸಿ ಮಹಿಳೆಯರ ನಾಯಕತ್ವದಲ್ಲಿ ಕಾರ್ಯರೂಪಕ್ಕೆತಂದರೆ ಮಹಿಳಾ ಸಬಲೀಕರಣ ನಿಜವಾದಅರ್ಥದಲ್ಲಿಕಾಣಲು ಸಾಧ್ಯವಿದೆ.

ಮಹಿಳೆ ಸಬಲಳಾದರೆ, ದೇಶವೆ ಸಬಲವಾಗುತ್ತದೆ.

Leave a Reply

ಹೊಸ ಪೋಸ್ಟ್‌