ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಅತೀ ಕಡಿಮೆ ಕೊರೊನಾ ಪಾಸಿಟಿವಿಟಿ ಹೊಂದಿದ ಜಿಲ್ಲೆಯಾಗಿದೆ.
ಇಂದು ಸರಕಾರ ಬಿಡುಗಡೆ ಮಾಡಿರುವ ಕೊರೊನಾ ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದು, ಬಸವ ನಾಡಿನಲ್ಲಿ ಕಳೆದ ಒಂದು ವಾರದಲ್ಲಿ ಕೇವಲ ಶೇ. 0.08 ರಷ್ಟು ಕೊರೊನಾ ಪಾಸಿಟಿವಿಟಿ ದರ ದಾಖಲಾಗಿದೆ.
ಜಿಲ್ಲಾವಾರು ಪಾಸಿಟಿವಿಟಿ ಪ್ರಮಾಣದ ಮಾಹಿತಿ ಇಲ್ಲಿದೆ.
1. ದಕ್ಷಿಣ ಕನ್ನಡ- ಶೇ. 3.98
2. ಚಿಕ್ಕಮಗಳೂರು- ಶೇ. 3.24
3. ಕೊಡಗು- ಶೇ. 2.71
4. ಹಾಸನ- ಶೇ. 2.23
5. ಚಾಮರಾಜನಗರ- ಶೇ. 1.29
6. ಶಿವಮೊಗ್ಗ- ಶೇ. 1.26
7. ಮೈಸೂರು- ಶೇ. 1.20
8. ಉತ್ತರ ಕನ್ನಡ- ಶೇ. 1.16
9. ಬೆಂಗಳೂರು ಗ್ರಾಮೀಣ- ಶೇ. 1.13
10. ಕೋಲಾರ- ಶೇ. 0.86
11. ಚಿತ್ರದುರ್ಗ- ಶೇ. 0.85
12. ತುಮಕೂರು- ಶೇ. 0.77
13. ಬೆಳಗಾವಿ- ಶೇ. 0.76
14. ಬೆಂಗಳೂರು ನಗರ- 0.66
15. ಮಂಡ್ಯ- ಶೇ. 0.64
16. ದಾವಣಗೆರೆ- ಶೇ. 0.63
17. ಕಲಬುರಗಿ- ಶೇ. 0.33
18. ರಾಮನಗರ- ಶೇ. 0.32
19. ಧಾರವಾಡ- ಶೇ. 0.29
20. ಕೊಪ್ಪಳ- ಶೇ. 0.24
21. ರಾಯಚೂರು- ಶೇ. 0.24
22. ಬಾಗಲಕೋಟೆ- ಶೇ. 0.22
23. ಬಳ್ಳಾರಿ- ಶೇ. 0.22
24. ಚಿಕ್ಕಬಳ್ಳಾಪುರ- ಶೇ. 0.17
25. ಬೀದರ ಶೇ. 0.16
26. ಗದಗ- ಶೇ. 0.14
27. ಹಾವೇರಿ- ಶೇ. 0.13
28. ಯಾದಗಿರಿ- ಶೇ. 0.09
ವಿಜಯಪುರ- ಶೇ. 0.08
ವಿಜಯಪುರ ಜಿಲ್ಲಾಡಳಿತ ಕೈಗೊಂಡ ಬಿಗಿಯಾದ ಸೂಕ್ತ ಕ್ರಮಗಳಿಂದಾಗಿ ಮಹಾರಾಷ್ಟ್ರದ ಗಡಿಯಲ್ಲಿದ್ದರೂ ಬಸವ ನಾಡಿನಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗಿರುವುದು ಗಮನಾರ್ಹವಾಗಿದೆ.