ಬಸವ ನಾಡಿನಲ್ಲಿ ನಡೆಯಿತು ವಿಶೇಷ ಸ್ವಾತಂತ್ರ್ಯ ದಿನಾಚರಣೆ- ಶಾಲೆಗೆ ಬಾರದಿದ್ದರೂ ವಿದ್ಯಾರ್ಥಿಗಳು ಖುಷ್ ಆಗಲು ಕಾರಣವೇನು ಗೊತ್ತಾ?

ವಿಜಯಪುರ: ಬಸವ ನಾಡು ವಿಜಯಪುರದ ಜನತೆ ಮತ್ತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸದಾ ವಿನೂತನ ಪ್ರಯತ್ನದಲ್ಲಿ ತೊಡಗಿರುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ಕಾರ್ಯಕ್ರಮ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಶಾಲೆಗೆ ತೆರಳದ ಮಕ್ಕಳಲ್ಲಿ ಈ ಕಾರ್ಯಕ್ರಮ ಸಂತಸ ತಂದಿತ್ತಲ್ಲದೇ ಪೋಷಕರಲ್ಲಿಯೂ ಸಮಾಧಾನಕ್ಕೆ ಕಾರಣವಾಗಿತ್ತು. ಇಲ್ಲಿ ಆಗಿದ್ದೇನೆಂದರೆ, ಶಾಲೆಗಳು ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಶಾಲೆಗಳ ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಮರೆತಂತಾಗಿತ್ತು.

 

ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ರವೀಂದ್ರನಾಥ ಠಾಗೋರ ಶಿಕ್ಷಣ ಸಂಸ್ಥೆ 1 ರಿಂದ 5ನೇ ತರಗತಿ ಮಕ್ಕಳಿಗೆ ಆನಲೈನ್ ಮೂಲಕ ಸ್ವಾತಂತ್ರ್ಯ ದಿನಾಚರಣಎ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

 

ಈ ಕಾರ್ಯಕ್ರಮ ಇಷ್ಟಕ್ಕೆ ಮುಗಿಯದೇ ವಿದ್ಯಾರ್ಥಿಗಳಿಗಾಗಿ ವಿಷೇಷ ಕಾರ್ಯಕ್ರಮಕ್ಕೂ ಸಾಕ್ಷಿಯಾಯಿತು. ಈ ಆನಲೈನ್ ಧ್ವಜಾರೋಹಣ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೋಂಡು 75ನೇ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಅರ್ಥ ನೀಡಿದರು.

ಈ ಸ್ವಾತಂತ್ರ್ಯೋತ್ಸವನ್ನು ಸ್ಮರಣೀಯವಾಗಿಸಲು 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ನಾನಾ ವೇಷಭೂಷಣ ಸ್ಪರ್ಧೆ ಕೂಡ ಆಯೋಜಿಸಲಾಗಿತ್ತು. ಚಿಣ್ಣರು ತಂತಮ ಮನೆಗಳಲ್ಲಿಯೇ ತಮಗಿಷ್ಟವಾದ ಸ್ವಾತಂತ್ರ್ಯ ಯೋಧರ ತರಹೇವಾರಿ ವೇಷಭೂಷಗಳನ್ನು ಧರಿಸಿ ಸ್ಪರ್ಧೆಯಲ್ಲಿ ಪಾಲ್ಗೋಂಡಿದ್ದು ಗಮನ ಸೆಳೆಯಿತು.

ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ಸುಭಾಷಚಂದ್ರ ಬೋಸ್, ಕಿತ್ತೂರ ರಾಣಿ ಚೆನ್ನಮ್ಮ, ಅಂಬೇಡ್ಕರ್ ಸೇರಿದಂತೆ ನಾನಾ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳು ಸಂತಸ ಪಟ್ಟರು. ಆನಲೈನ್ ಮೂಲಕವೇ ನಡೆದ ಈ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಆನಲೈನ್ ಮೂಲಕವೇ ಫಲಿತಾಂಶ ಪ್ರಕಟಿಸಿ ಬಹುಮಾನ ಘೋಷಣೆ ಮಾಡಲಾಯಿತು.

ಇದಕ್ಕೂ ಮೊದಲು ಶಾಲೆಯ ಆವರಣದಲ್ಲಿ ಭಾರತದ 75ನೇ ವರ್ಷಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಲಾಯಿತು.

Leave a Reply

ಹೊಸ ಪೋಸ್ಟ್‌