ವಿಜಯಪುರ ನಗರದ 45 ಉದ್ಯಾನವನಗಳಲ್ಲಿ ಚೈನ್ ಲಿಂಕ್ ಮೇಶ್ ಆಂಡ್ ವಾಕಿಂಗ್ ಟ್ರ್ಯಾಕ್ ಅಭಿವೃದ್ಧಿ- ಶಾಸಕ ಯತ್ನಾಳ ಹೇಳಿಕೆ

ವಿಜಯಪುರ: ವಿಜಯಪುರ ನಗರದಲ್ಲಿ ಆಯ್ದ 45 ಸ್ಥಳಗಳಲ್ಲಿನ ಬಡಾವಣೆಯ ಉದ್ಯಾನವನಗಳಲ್ಲಿ ಚೈನ್ ಲಿಂಕ್ ಮೇಶ್ ಆಂಡ್ ವಾಕಿಂಗ್ ಟ್ರ್ಯಾಕ್ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಆಯ್ದ 45 ನಾನಾ ಬಡಾವಣೆಗಳ ಉದ್ಯಾನವನದಲ್ಲಿ ಚೈನ್ ಲಿಂಕ್ ಮೇಶ್ ಆಂಡ್ ವಾಕಿಂಗ್ ಟ್ರ್ಯಾಕ್ (Chain link Mesh and Walking Trak ) ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶಾಸಕ ಯತ್ನಾಳ ಸಭೆ ನಡೆಸಿದರು.

 

ನಗರದ 40 ಆಯ್ದ ಸ್ಥಳಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಮತ್ತು ಮಿನಿ ಮಾಸ್ಟ್ ದೀಪಗಳನ್ನು ಅಳವಡಿಸಲಾಗುವುದು. ವಿಜಯಪುರ ನಗರದ ಐತಿಹಾಸಿಕ ಬಾವಿಗಳನ್ನು ಹೂಳೆತ್ತಿ ಸ್ವಚ್ಛಗೊಳಿಸಿ ಪುನರುಜ್ಜೀವನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಕಾಯ್ದಿರಿಸಲಾಗಿರುವ ನಾನಾ ಅಳತೆಯ 38 ನಿವೇಶನಗಳನ್ನು 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡುವ ಬಗ್ಗೆಯು ಸಭೆಯಲ್ಲಿ ಚರ್ಚಿ ನಡೆಸಲಾಯಿತು.

ನಗರದ ಹಾಗೂ ಮಹಾಲ ಬಾಗಾಯತ, ರಂಭಾಪುರ, ತೊರವಿ, ಕಸಬಾ, ನವರಸಪುರ, ಐನಾಪುರ, ಗ್ರಾಮಗಳಲ್ಲಿ ವಸತಿ ಉದ್ದೇಶಕ್ಕಾಗಿ ವಾಣಿಜ್ಯ ಉದ್ದೇಶಕ್ಕಾಗಿ ಹಾಗೂ ಪೆಟ್ರೋಲ್ ಪಂಪ್ ಆಸ್ಪತ್ರೆಗಳ ಉದ್ದೇಶಕ್ಕಾಗಿ ಸಲ್ಲಿಸಿದ ಅರ್ಜಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮಣ ಜಾದವ, ವಿಕ್ರಮ ಗಾಯಕವಾಡ, ಸರೋಜಿನಿ ಏವುರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌