ಎಂಬಿಎ ಓದಲು, ಉದ್ಯೋಗ ಗಿಟ್ಟಿಸಲು ವರದಾನವಾಗಿದೆ ಈ ಕಾಲೇಜು- ಕಳೆದ ವರ್ಷ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

ಡಾ.ವೀರೇಂದ್ರಕುಮಾರ ಎಂ.ನರಸಲಗಿ,
ಎಂಬಿಎ ವಿಭಾಗದ ಮುಖ್ಯಸ್ಥರು.

ವಿಜಯಪುರ: ಎಂಬಿಎ ವಿದ್ಯಾರ್ಥಿಗಳಿಗೆ ವೃತ್ತಿ ಪರ ಕೌಶಲ್ಯ ಶಿಕ್ಷಣ ನೀಡುವ ಮೂಲಕ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಇಂಜನಿಯರಿಂಗ್ ಕಾಲೇಜಿನ ಎಂ.ಬಿ.ಎ ವಿಭಾಗ ಗಮನ ಸೆಳೆಯುತ್ತಿದೆ.

ಅಮೇರಿಕಾದಲ್ಲಿ 19ನೇ ಶತಮಾನದ ಕೊನೆಯ ಭಾಗದಲ್ಲಿ ಕೈಗಾರಿಕರಣದಿಂದಾಗಿ ಕಂಪನಿಗಳು ಆಡಳಿತ ನಿರ್ವಹಣೆಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡವು ಇದರ ಪರಿಣಾಮ ಮಾಸ್ಟರ್ ಆಫ್ ಬ್ಯುಸಿನೆಸ್ ಎಡ್ಮಿನಿಸ್ಟ್ರೇಷನ್ (ಎಂ.ಬಿ.ಎ) ವೃತ್ತಿಪರ ಪದವಿ ಪ್ರಾರಂಭವಾಯಿತು.

ಇತ್ತೀಚಿನ ದಿನಗಳಲ್ಲಿ ಬಹು ಬೇಡಿಕೆಯಲ್ಲಿರುವ ಸ್ನಾತಕೋತ್ತರ ಪದವಿ ಇದಾಗಿದ್ದು, ಈ ಪದವಿ ಪೂರೈಸಿದ ಯುವಕರು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಅವರ ವೃತ್ತಿ ಜೀವನವನ್ನು ಖಾತ್ರಿಗೊಳಿಸುತ್ತದೆ. ಅಷ್ಟೆ ಅಲ್ಲ ಎಂಬಿಎ ಪದವಿಧರರು ಹೊಸ-ಹೊಸ ಉದ್ಯಮಗಳತ್ತ ಗಮನ ಹರಿಸಿ, ಉದ್ಯಮಿಗಳಾಗಲು ಪ್ರೇರಿಪಿಸುತ್ತಿದೆ.

ಎಂ.ಬಿ.ಎ ಪದವಿಧರರಿಗೆ ಭಾರತ ಅಷ್ಟೇ ಅಲ್ಲ ದೇಶ-ವಿದೇಶಗಳ ನಾನಾ ಕಂಪನಿಗಳಲ್ಲಿ ಅತೀ ಹೆಚ್ಚಿನ ವೇತನ ಆಫರ್ ನೀಡುತ್ತಿರುವುದು ಎಂ.ಬಿ.ಎ ಪದವಿಧರರ ವೃತ್ತಿ ಜೀವನ ಉನ್ನತಿಯತ್ತ ಸಾಗುವುದಕ್ಕೆ ಸಾಕ್ಶಿಯಾಗಿದೆ. ಎಂ.ಬಿ.ಎ ಪದವಿ ಸ್ವಯಂ ಉದ್ಯೋಗ ಕೈಗೊಳ್ಳಲು ವಿಶ್ವಾಸವನ್ನು ಹೆಚ್ಚಿಸುವುದರ ಹೊತೆಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಜಾಗತಿಕವಾಗಿ ಹೆಚ್ಚು ಪ್ರಸಿದ್ಧ ಪಡೆದ ಪದವಿಗಳಲ್ಲಿ ಎಂ.ಬಿ.ಎ ಪದವಿ ಕೂಡ ಒಂದು.

ಎಂಜಿನಿಯರಿಂಗ್ ಕಾಲೇಜಿನ ಚಿತ್ರ.

ಈ ಪದವಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಹೆಚ್ಚಿನ ಸ್ಪರ್ಧೆ ಏರ್ಪಟ್ಟಿದೆ. ನಾನಾ ಕಂಪನಿಗಳಲ್ಲಿ ಮ್ಯಾನೇಜರ್‍ಗಳನ್ನು ನೇಮಕ ಮಾಡುವಾಗ ಈ ಪದವಿ ಅಭ್ಯರ್ಥಿಯ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸುವದಲ್ಲದೇ ಸುಸ್ಥಿರವಾದ ಭವಿಷ್ಯಕ್ಕೂ ನಾಂದಿಯಾಗುತ್ತದೆ. ಇತರ್ ಬಹುರಾಷ್ಟ್ರೀಯ ಕಂಪನಿಗಳು ಎಂ.ಬಿಎ ಪದವಿಧರರಿಗೆ ಆದ್ಯತೆ ನೀಡಿ, ಹೆಚ್ಚಿನ ವೇತನ ಸೇರಿದಂತೆ ಇತರ ಸೌಕರ್ಯಗಳ ಪ್ಯಾಕೇಜ್‍ಗಳನ್ನು ಘೋಷಿಸುವ ಮೂಲಕ ಅವಕಾಶಗಳನ್ನು ನೀಡುತ್ತಿದೆ.

ಎಂ.ಬಿ.ಎ ಪದವಿ ಕೂಡ ಇತರೆ ಪದವಿಗಳಂತೆ ಯಾವುದೇ ನಿರ್ಬಂಧ ಹೊಂದಿಲ್ಲ. ಹಾಗೂ ಹಲವಾರು ಅವಕಾಶಗಳನ್ನು ತೆರೆದಿಡುತ್ತಿವೆ. ಎಂ.ಬಿ.ಎ ಶಿಕ್ಷಣ ಮೂಲ ಉದ್ದೇಶ ಅರ್ಥಶಾಸ್ತ್ರ ವಾಣಿಜ್ಯೋದ್ಯಮ, ಹಣಕಾಸು, ಜಾಹಿರಾತು ಪ್ರಚಾರ, ಮಾನವ ಸಂಪನ್ಮೂಲ, ಕಾರ್ಯಾಚರಣಾ ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ ಹಾಗೂ ಇನ್ನಿತರೆ ವಿಭಾಗಗಳ ಬಗ್ಗೆ ತರಬೇತಿ ಕೊಡಿಸುವುದಾಗಿದೆ. ವಿದ್ಯಾರ್ಥಿಗಳು ಕೂಡ ತಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ಸಾಕಷ್ಟು ಅವಕಾಶವಿದೆ. ಎರಡು ವರ್ಷಗಳ ಈ ಕೋರ್ಸ್‍ನಲ್ಲಿ ವಿದ್ಯಾಅರ್ಥಿಗಳು ನಾನಾ ಕ್ಷೇತ್ರಗಳಲ್ಲಿ ಅವರಿಗೆ ಇಷ್ಟವಾದದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಭಾರತದಲ್ಲಿ, ವೃತ್ತಿಯಲ್ಲಿ ಯಾವುದೇ ರೀತಿಯ ಅನುಭವವಿರದ ಮತ್ತು ಪದವೀಧರರು ಹಾಗೂ ಯಾವದೇ ಪದವಿಯನ್ನು ಹೊಂದಿರುವ ವಿದ್ಯಾರ್ಥಿಗಳು ಕೂಡ ಈ ಕೋರ್ಸ್‍ನ್ನು ಓದಬಹುದಾಗಿದೆ. ಎಂ.ಬಿ.ಎ ಪದವಿಗೆ ಪ್ರವೇಶ ಪಡೆಯಲು ಅರ್ಹತಾ ಪರೀಕ್ಷೆಗಳಾದ CAT, XAT, GMAT, JMET PGCET, KMAT ಅಥವಾ MAT ಪರೀಕ್ಷೆಗಳಲ್ಲಿ ಗಳಲ್ಲಿ ಉತ್ತೀರ್ಣರಾಗಬೇಕಿದೆ.

ಈ ಅರ್ಹತಾ ಪರೀಕ್ಷೆಯ ಮೂಲಕ ಪಾಸಾದವರು ತಮಗೆ ಇಷ್ಟವಾದ ಕಾಲೇಜ್‍ಗಳಲ್ಲಿ ಪ್ರವೇಶ ಪಡೆಯಲು ಅವಕಾಶವಿದೆ. AICTEಯ ನಿಯಮದ ಪ್ರಕಾರ ಸ್ವಾಯತ್ತತೆ ಹೊಂದಿದ ಕಾಲೇಜುಗಳು ಎಂ.ಬಿ.ಎ ಪದವಿಯನ್ನು ನೀಡುತ್ತವೆ.

ಎಂಬಿಎ ವಿಭಾಗದ ಮುಖ್ಯಸ್ಥ ಡಾ. ವೀರೇಂದ್ರಕುಮಾರ ಎಂ. ನರಸಲಗಿ.

ವಿಜಯಪುರ ಜಿಲ್ಲೆಯ ಜನರಿಗೆ ಉತ್ತಮ ಶಿಕ್ಷಣ ನೀಡುವ ದೂರದೃಷ್ಠಿಯಿಂದ 1910 ರಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಯನ್ನು ಪ್ರಾರಂಭಿಸಲಾಯಿತು. ಇದರ ಮುಂದುವರೆದ ಭಾಗವಾಗಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಒದಗಿಸುವ ಸದುದ್ದೇಶದಿಂದ 1980 ರಲ್ಲಿ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಶಿಕ್ಷಣ ಕಾಲೇಜು ಪ್ರಾರಂಭಿಸಲಾಯಿತು. ಬಳಿಕ ಎಂ.ಬಿ.ಎ. ಪದವಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ 2011 ರಲ್ಲಿ ಎಂ.ಬಿ.ಎ ವಿಭಾಗವನ್ನು ಆರಂಭಿಸಲಾಗಿದೆ. ಇದೀಗ ಒಂಬತ್ತು ವರ್ಷಗಳಿಂದ ಈ ವಿಭಾಗ ಉತ್ತಮವಾಗಿ ನಡೆದುಕೊಂಡು ಬಂದಿದ್ದು, ನುರಿತ ಹಾಗೂ ಕೈಗಾರಿಕಾ ಅನುಭವವುಳ್ಳ ಭೋಧಕ ವೃಂದ, ವಿದ್ಯಾರ್ಥಿಗಳ ವೃತ್ತಿಪರ ಜೀವನವನ್ನು ಕಾಪೆರ್Çರೇಟ್ ಕಂಪನಿಗಳ ಅವಶ್ಯಕತೆಗೆ ತಕ್ಕಂತೆ ರೂಪಿಸುತ್ತಿದ್ದಾರೆ. ಇದು ಈ ವಿಭಾಗ ಬಹಳಷ್ಟು ವಿದ್ಯಾರ್ಥಿಗಳ ಪ್ರಥಮ ಆಯ್ಕೆಗೆ ಕಾರಣವಾಗಿದೆ.

ಇಲ್ಲಿ ವಿದ್ಯಾರ್ಥಿಗಳಿಗೆ ವ್ಯಾಪಾರ ವಹಿವಾಟುಗಳ ಮೂಲ ತತ್ವಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಲಾಗುತ್ತದೆ. ಅಲ್ಲದೇ ಆ ಮಾಹಿತಿಯನ್ನು ನೈಜ ಮಾರುಕಟ್ಟೆಯಲ್ಲಿ ಹೇಗೆ ಉಪಯೋಗಿಸಬೇಕು ಎಂಬ ಕಲೆಯನ್ನು ತಿಳಿಸಲಾಗುತ್ತದೆ. ಜೊತೆಗೆ ಸಂವಹನ ಕೌಶಲ್ಯ, ನಾಯಕತ್ವ ತರಬೇತಿ, ಸಮಸ್ಯೆ ಪರಿಹರಿಸುವ ಕುಶಲತೆ, ಕಂಪ್ಯೂಟರ್ ಕೌಶಲಗಳ ಬಗ್ಗೆ ಹೇಳಿ ಕೊಡಲಾಗುತ್ತದೆ. ಅಲ್ಲದೆ ‘ಡಿಶಿಷನ್ ಮೇಕಿಂಗ್ ಸ್ಕಿಲ್’ ಅನ್ನು ಕರಗತ ಮಾಡಿಸಿ, ವಿದ್ಯಾರ್ಥಿಗಳನ್ನು ತಾರ್ಕಿಕ ಆಲೋಚನೆಗಳತ್ತ ಹೆಚ್ಚು ಒತ್ತು ನೀಡಲು ಪ್ರೇರಿಪಿಸಲಾಗುತ್ತದೆ.
ಈ ವಿಭಾಗದಲ್ಲಿ ಎಂ.ಬಿ.ಎ ಪದವಿ ಪಡೆದಿರುವ ನೂರಾರು ವಿದ್ಯಾರ್ಥಿಗಳು ದೇಶ-ವಿದೇಶಗಳ ನಾನಾ ಪ್ರತಿಷ್ಠಿತ ಕಂಪನಿಗಳ ಉನ್ನತ ಹುದ್ದೆಗಳಲ್ಲಿ ಕೆಲಸಕಾರ್ಯನಿರ್ವಹಿಸುತ್ತಾ, ಉತ್ತಮ ವೇತನ ಪಡೆಯುತ್ತಿದ್ದಾರೆ.
ಇಲ್ಲಿ ಎಂ.ಬಿ.ಎ ಸ್ನಾತಕೋತ್ತರ ಪದವಿ ಪಡೆಯಲು ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ಪ್ಲೇಸಮೆಂಟ್ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ. ಅವರು ನಾನಾ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಅವಕಾಶಗಳು ಇರುವಲ್ಲಿ ಉದ್ಯೋಗ ಒದಗಲು ಮಾರ್ಗದರ್ಶ ನೀಡುತ್ತಿದ್ದಾರೆ.

ಈ ಕೊರೊನಾ ಸಂದರ್ಭದಲ್ಲಿಯೂ 40 ಕ್ಕೂ ಕಂಪನಿಗಳು ಬಿ.ಎಲ್.ಡಿ.ಇ ಡಾ.ಫ.ಗು.ಹಳಕಟ್ಟಿ ಇಂಜನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ, 150 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

ವಿಳಾಸ:
ಡಾ. ವೀರೇಂದ್ರಕುಮಾರ ಎಂ. ನರಸಲಗಿ,
ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು
ಎಂ.ಬಿ.ಎ ವಿಭಾಗ, ಬಿ.ಎಲ್.ಡಿ.ಇ ಸಂಸ್ಥೆ
ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಇಂಜನಿಯರಿಂಗ್
ಹಾಗೂ ತಾಂತ್ರಿಕ ಕಾಲೇಜು, ವಿಜಯಪುರ.
Mobile: +91 8147850127,
E-mail: veerumn@gmail.com

Leave a Reply

ಹೊಸ ಪೋಸ್ಟ್‌