ಮಾನಸಿಕ. ದೈಹಿಕ ಆರೋಗ್ಯಕ್ಕಾಗಿ ಪ್ರತಿನಿತ್ಯ ಕನಿಷ್ಠ 30 ನಿಮಿಷ ಓಟ, ವ್ಯಾಯಾಮ, ಯೋಗಾಭ್ಯಾಸ ಅಗತ್ಯ- ಐಎಎಸ್ ತರಬೇತಿ ನಿರತ ಅಧಿಕಾರಿ ರಿಷಿ ಆನಂದ

ವಿಜಯಪುರ: ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಪ್ರತಿನಿತ್ಯ ಕನಿಷ್ಠ 30 ನಿಮಿಷಗಳ ಕಾಲ ಓಟ, ವ್ಯಾಯಾಮ, ಮತ್ತು ಯೋಗಭ್ಯಾಸವನ್ನು ಮಾಡಬೇಕು ಎಂದು ಐಎಎಸ್ ತರಬೇತಿ ನಿರತ ಅಧಿಕಾರಿ ರಿಷಿ ಆನಂದ ಹೇಳಿದ್ದಾರೆ.

ವಿಜಯಪುರದಲ್ಲಿ ಕೇಂದ್ರ ಸರಕಾರದ ನೆಹರು ಯುವ ಕೇಂದ್ರ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಎನ್ ಎಸ್ ಎಸ್ ಘಟಕ, ಭಾರತ ಸೇವಾ ದಳ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯಪುರ ಯುತ್ ಮಾರ್ಶಲ್ ಆರ್ಸ್ಟ್ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಗಾಧವಾದ ಯುವ ಸಮೂಹವನ್ನು ಹೊಂದಿರುವ ಭಾರತ ವಿಶ್ವಮಟ್ಟದಲ್ಲಿ ಇನ್ನಷ್ಟು ಪ್ರಖ್ಯಾತಿ ಹೊಂದಬೇಕಾದರೆ ಯುವಕರು ಮತ್ತು ಇತರ ನಾಗರಿಕರು ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಬೇಕು. ಈ ಮೂಲಕ ದೇಶಕ್ಕೆ ಯಾವುದಾದರೂ ಒಂದು ರೀತಿಯಲ್ಲಿ ಕಾಣಿಕೆ ನೀಡಬೇಕು ಎಂದು ತಿಳಿಸಿದರು.
ನಮ್ಮ ಸುತ್ತಲಿನ ದೇಶಗಳು ಭಾರತ ವಿರೋಧಿ ನಿಲುವನ್ನು ತೆಳದಿದ್ದು, ಭಾರತ ಮಾತೆಯ ಪ್ರಜೆಗಳಾದ ನಾವು ಜಾಗೃತರಾಗಬೇಕು. ಭಾರತಾಂಬೆಯ ರಕ್ಷಣೆಗೆ ಸದಾ ಸನ್ನದ್ಧರಾಗಿರಬೇಕು. ದೇಶದ ಒಳಿತಿಗೆ ನಿಸ್ವಾರ್ಥ ಮನೋಭಾವದಿಂದ ದುಡಿಯುವ ಮನೋಬಲವನ್ನು ಇಂದಿನ ವಿದ್ಯಾರ್ಥಿ ಸಮೂಹ ಹೊಂದಬೇಕಿದೆ ಎಂದು ಹೇಳಿದರು.

ನೆಹರು ಯುವ ಕೇಂದ್ರದ ಜಿಲ್ಲಾ ಜಿಲ್ಲಾ ಯುವ ಅಧಿಕಾರಿ ರಾಹುಲ ಡೋಂಗ್ರೆ ಮಾತನಾಡಿ, ಆರೋಗ್ಯವಂತ ಜೀವನ ಶೈಲಿಯನ್ನು ಅಳವಡಿಸಿಕೊಂಡು ಉತ್ತಮ ಮಾನವ ಸಂಪನ್ಮೂಲ ವ್ಯಕ್ತಿಗಳಾಗಬೇಕಿದೆ ಎಂದು ಹೇಳಿದರು.

ಐತಿಹಾಸಿಕ ಗೋಳಗುಮ್ಮಟ ಮುಂಭಾಗದಿಂದ ಆರಂಭವಾದ ಓಟ ಗಾಂಧಿ ಚಾಕಿನಲ್ಲಿ ಮುಕ್ತಾಯಗೊಂಡಿತು. ಅಲ್ಲಿ ಗಾಂಧಿ ಪುತ್ತಳಿಗೆ ಗಣ್ಯರಿಂದ ಮಾರ್ಲಾಪಣೆ ಮಾಡಲಾಯಿತು. ನಂತರ ಫಿಟ್ ಇಂಡಿಯಾ, ಫ್ರೀಡಮ್ ರನ್ 2.0 ಕುರಿತ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು.

ನಗರದ ನಾನಾ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಈ ಓಟದಲ್ಲಿ ಭಾಗವಹಿಸಿದ್ದರು. ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಿ. ಕೆ. ಸುರೇಶ, ಜಿಲ್ಲಾ, ಎನ್ ಎಸ್ ಎಸ್ ನೋಡಲ್ ಅಧಿಕಾರಿ ಪ್ರೋ. ಎಸ್. ಎಂ. ಸಜ್ಜಾದೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಜಿ. ಲೋಣಿ, ನಾಗೇಶ ಡೋಣೂರ, ಮಂಜುಳಾ ದತ್ತಾತ್ರೇಯ ಹಿಪ್ಪರಗಿ, ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಯಲಯದ ಎನ್ ಎಸ್ ಎಸ್ ಸಂಯೋಜಕ ಪ್ರೋ. ನಾಮದೇವಗೌಡ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಜಾವೀದ ಜಮಾದಾರ, ನೆಹರು ಯುವ ಕೇಂದ್ರದ ಸ್ವಯಂ ಸೇವಕರು, ವಿಜಯಪುರ ಯುತ್ ಮಾರ್ಶಲ್ ಆರ್ಟ್ಸ್ ನ ಸ್ವಯಂ ಸೇವಕರು, ನಗರದ ನಾನಾ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌