ಬಸವ ನಾಡಿನಲ್ಲಿ ಸಹೋದರ-ಸಹೋದರಿಯರ ಸಂಬಂಧ ಬೆಸೆಯುವ ರಕ್ಷಾ ಬಂಧನ ಆಚರಣೆ

ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ನೂಲ ಹುಣ್ಣಿಮೆ ಅಂದರೆ ರಕ್ಷಾ ಬಂಧನ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಬಾಂಧವ್ಯವನ್ನು ಬೆಸೆಯುವ ಹಬ್ಬ ಇದಾಗಿದ್ದು, ಎಲ್ಲ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಬೆಳಿಗ್ಗೆ ಎದ್ದು ಹೊಸ ಬಟ್ಟೆ ತೊಟ್ಟ ಬಾಲಕಿಯರು, ಯುವತಿಯರು ಮತ್ತು ವನಿತೆಯರು ತಮ್ಮ ಅಣ್ಣಂದಿರು ಮತ್ತು ತಮ್ಮಂದಿರ ಕೈಗಳಿಗೆ ರಾಖಿಯನ್ನು ಕಟ್ಟಿ ಸಂಭ್ರಮಿಸಿದರು. ಬಾಲಕರು, ಯುವಕರು, ಪುರುಷರೂ ಕೂಡ ಹೊಸ ಬಟ್ಟೆ ಧರಿಸಿದ್ದರು. ಅಲ್ಲದೇ, ತಮ್ಮ ತಂಗಿ ಮತ್ತು ಅಕ್ಕಂದಿರಿಂದ ಮತ್ತು ಸೋದರ ಸಂಬಂಧಿಗಳಿಂದ ರಾಖಿ ಕಟ್ಟಿಸಿಕೊಂಡು ಅವರಿಗೆ ತರಹೇವಾರಿ ಉಡುಗೊರೆ ನೀಡಿ ಖುಷಿಪಟ್ಟರು.

/

ಮನೆಯಲ್ಲಿ ಸಿಹಿ ತಯಾರಿಸಿದ್ದ ಸಹೋದತಿಯರು ತಂತಮ್ಮ ಸಹೋದರರಿಗೆ ತಿನ್ನಿಸಿ, ಆರತಿ ಬೆಳಗಿದರು. ಹಣೆಗೆ ತಿಲಕವನ್ನಿಟ್ಟು ದೀರ್ಘಾಯುಷ್ಯ ಕೋರಿದರು‌. ಸಹೋದರರು ಕೂಡ ತಮ್ಮ ಕೈಲಾದ ಮಟ್ಟಿಗೆ ಕಾಣಿಕೆ ನೀಡಿ ಸಹೋದರರಿ ಯರನ್ನು ಹರಸಿದರು. ಬಳಿಕ ಮನೆ ಮಂದಿಯೆಲ್ಲ ಸೇರಿಕೊಂಡು ಭೋಜನ ಸವಿದರು. ಇನ್ನೂ ಚಿಕ್ಕಮಕ್ಕಳು ನಾನಾ ಬಣ್ಣದ ಬಟ್ಟೆ ತೊಟ್ಟು ಸಂಭ್ರಮಿಸಿದರು. ಚಿಣ್ಣರು ತಮ್ಮ ಕೈಯಲ್ಲಿರುವ ರಾಖಿಯನ್ನು ಮತ್ತೊಬ್ಬರಿಗೆ ತೋರಿಸಿ ಸಂಭ್ರಮಿಸಿದರು.

ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಮಾರುಕಟ್ಟೆಗೆ ಬಂದಿದ್ದ ತರಹೇವಾರಿ ವರ್ಣರಂಜಿತ ರಾಖಿಗಳೂ ಕೂಡ ಗಮನ ಸೆಳೆದವು. ರಾಖಿ ವ್ಯಾಪಾರ ವಹಿವಾಟು ಕೂಡ ಬೆಳಗ್ಗೆಯೂ ಚುರುಕಿನಿಂದ ನಡೆಯಿತು‌

Leave a Reply

ಹೊಸ ಪೋಸ್ಟ್‌