ವಿಜಯಪುರದಲ್ಲಿ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಜಪಾನ ಮುಂದಾಗಲಿ- ಜಪಾನ್ ಡೆಪ್ಯೂಟಿ ಕೌನ್ಸಿಲ್ ಜನರಲ್ ಮೂಲಕ ಆಹ್ವಾನ ನೀಡಿದ ಮಾಜಿ ಸಚಿವ ಎಂ. ಬಿ. ಪಾಟೀಲ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆಗೆ ಬೇಕಾಗುವ ಎಲ್ಲ ಸೌಲಭ್ಯಗಳೂ ಲಭ್ಯವಿದ್ದು, ಜಪಾನ ಬೃಹತ್ ಉದ್ದಿಮೆಗಳನ್ನು ವಿಜಯಪುರದಲ್ಲಿ ಸ್ಥಾಪಿಸಲು ಮುಂದಾಗಬೇಕು ಎಂದು ಜಪಾನ್ ರಾಯಭಾರಿ ಮೂಲಕ ಮಾಜಿ ಸಚಿವ ಎಂ. ಬಿ. ಪಾಟೀಲ ಮನವಿ ಮಾಡಿದ್ದಾರೆ. ಎರಡು ದಿನಗಳ ವಿಜಯಪುರ ಪ್ರವಾಸದಲ್ಲಿರುವ ಬೆಂಗಳೂರಿನಲ್ಲಿರುವ ಜಪಾನ್ ಕೌನ್ಸಿಲೇಟ್ ಡೆಪ್ಟೂಯಿ ಕೌನ್ಸಿಲ್ ಜನರಲ್ ಕತ್ಸುಮಸಾ ಮರಾವೂ, ಬಿ ಎಲ್ ಡಿ ಇ ಸಂಸ್ಥೆಯ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಲಾಸ್ ರೂಂ ಕಾಂಪ್ಸೆಕ್ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ […]
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಎಂಬ ಖ್ಯಾತಿಗೆ ಪಾತ್ರವಾದ ಕರ್ನಾಟಕ.
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಞಾನಗೊಳಿಸುತ್ತಿರುವ ದೇಶದ ಮೊಟ್ಟ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020 ಸಾಲಿನಿಂದ ಅನುಷ್ಠಾನ ಕಾರ್ಯಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ ನವದೆಹಲಿಯಿಂದ ವರ್ಚುವಲ್ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು. ಇತ್ತ ಬೆಂಗಳೂರಿನ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುವ NEP ಸಹಾಯವಾಣಿ ಉದ್ಘಾಟನೆ ಮಾಡಿದತು. ಅಲ್ಲದೇ, NEP ಪ್ರವೇಶಾತಿಗೆ ರೂಪಿಸಲಾಗಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಯ […]
ಶಿಕ್ಷಣ, ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಎಂ ಎಲ್ ಸಿ ಅರುಣ ಶಹಾಪುರ ಸಲ್ಲಿಸಿದ ಬೇಡಿಕೆ ಏನು ಗೊತ್ತಾ?
ಬೆಂಗಳೂರು: ವಿಧಾನ ಪರಿಷತ್ ಬಿಜೆಪಿ ಸದಸ್ಯ ಅರುಣ ಶಹಾಪುರ ಬೆಂಗಳೂರಿನಲ್ಲಿ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ ಮತ್ತು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಐಟಿ ಮತ್ತು ಬಿಟಿ ಸಚಿವ ಡಾ. ಅಶ್ವತ್ಥನಾರಾಯಣ ಅರವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಐಟಿಐ ಶಿಕ್ಷಣ ಇಲಾಖೆಗಳಲ್ಲಿನ ಅತೀ ಪ್ರಮುಖವಾದ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು. ಅಲ್ಲದೇ, ಈ ನಿಟ್ಟಿನಲ್ಲಿ […]
ಅನ್ನದಾತನ ಹೊಲಕ್ಕೆ ತೆರಳಿ ಆ್ಯಪ್ ನಲ್ಲಿ ಸ್ವಯಂ ಬೆಳೆ ಸಮೀಕ್ಷೆ ಮಾಡುವ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ
ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಲಿಯಾಬಾದ ಗ್ರಾಮದ ರೈತ ಹರಿಬಾ ಮಾಳವೆ ಅವರ ಜಮೀನಿಗೆ ತೆರಳಿ ಮೊಬೈಲ್ ಆ್ಯಪ್ ಮೂಲಕ ಸ್ವಯಂ ಬೆಳೆ ಸಮೀಕ್ಷೆ ದಾಖಲಿಸಿಕೊಳ್ಳುವ ಮಾಹಿತಿಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಜಮೀನಿನ ಸರ್ವೇ ನಂಬರ್ ಅನ್ನು ಆಯ್ಕೆ ಮಾಡುವಾಗ ನೀವು ಆಯ್ಕೆ ಮಾಡಿದ ಗ್ರಾಮವು ಪೂರ್ವ ಮುಂಗಾರಿಗೆ ಆಯ್ಕೆ ಆಗಿಲ್ಲ ಎಂಬ ಮಾಹಿತಿ ಗೋಚರಿಸಿದರೆ ನಿಮ್ಮ ಗ್ರಾಮವು ಪೂರ್ವ ಮುಂಗಾರಿಗೆ ಆಯ್ಕೆ ಆಗಿಲ್ಲ ಎಂದು ಅರ್ಥ. […]
ಇಂಗಳೇಶ್ವರದಲ್ಲಿ ಬಸವೇಶ್ವರರ ಅಶ್ವಾರೂಢ ಮೂರ್ತಿ ಸ್ಥಾಪನೆಗೆ ಗ್ರಾಮದ ನಾನಾ ಸಂಘಟನೆಗಳಿಂದ ಶಾಸಕ ಶಿವಾನಂದ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಕೆ
ವಿಜಯಪುರ: ವಿಶ್ವಗುರು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಅಣ್ಣ ಬಸವಣ್ಣನವರ ಅಶ್ವಾರೂಢ ಕಂಚಿನ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಇಂಗಳೇಶ್ವರ ಗ್ರಾಮದ ನಾನಾ ಸಂಘಟಣೆಗಳ ಮುಖಂಡರು ಹಾಗೂ ಆಟೋ ಚಾಲಕರ ಸಂಘ ಜಂಟಿಯಾಗಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿತು. ವಿಜಯಪುರ ನಗರದಲ್ಲಿರುವ ಶಾಸಕರ ನಿವಾಸಕ್ಕೆ ತೆರಳಿದ ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ […]
ಸಿಂದಗಿ ಮತಕ್ಷೇತ್ರಕ್ಕೆ 5000 ಮನೆಗಳ ಮಂಜೂರು- ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ವಿ. ಸೋಮಣ್ಣ ಅವರಿಗೆ ಎಂ ಎಲ್ ಸಿ ಅರುಣ ಶಹಾಪುರ ಕೃತಜ್ಞತೆ
ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ಈ ತಾಲೂಕಿನ ಬಡಜನರಿಗಾಗಿ 5000 ಮನೆಗಳನ್ನು ಮಂಜೂರು ಮಾಡಿರುವುದು ಇದಕ್ಕೆ ಸಾಕ್ಷಿ ಎಂದು ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮ್ಮ ಸರಕಾರವು ಸಿಂದಗಿ ತಾಲೂಕಿನ ಬಡ ಜನರಿಗೆ ಸ್ವಂತ ಸೂರನ್ನು ನಿರ್ಮಿಸಿಕೊಳ್ಳಲು 5000 ಮನೆಗಳನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು […]
ವಿಜಯಪುರ ಜಿಲ್ಲಾಧಿಕಾರಿಗಳಿಂದ ಅಲಿಯಾಬಾದ ವಾಟರ್ ಪೆವಿಲಿಯನ್ ವೀಕ್ಷಣೆ
ವಿಜಯಪುರ: ವಿಜಯಪುರ ತಾಲೂಕಿನ ಐತಿಹಾಸಿಕ ತಾಣವಾದ ಅಲಿಯಾಬಾದ ವಾಟರ್ ಪೆವಿಲಿಯನ್ ಸ್ಮಾರಕಕ್ಕೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದಿಲಶಾಹಿ ಕಾಲದಲ್ಲಿ ನಿರ್ಮಿಸಲಾಗಿರುವ ಮತ್ತು ವಿಜಯಪುರ ನಗರದಿಂದ ಸುಮಾರು 13 ಕಿ. ಮೀ. ದೂರದಲ್ಲಿರುವ ಈ ಸ್ಮಾರಕ ಅಲಿಯಾಬಾದ ಗ್ರಾಮದ ಮಧ್ಯದ ಪ್ರಕೃತಿಯ ಮಡಿಲಿನಲ್ಲಿ ಸುಂದರವಾದ ಸ್ಮಾರಕವಾಗಿದೆ. ಈ ಪ್ರವಾಸಿ ಸ್ಮಾರಕವನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳ ವೀಕ್ಷಣೆ ಮಾಡಿ ಸ್ಮಾರಕ […]