ವಿಜಯಪುರ ಜಿಲ್ಲಾಧಿಕಾರಿಗಳಿಂದ ಅಲಿಯಾಬಾದ ವಾಟರ್ ಪೆವಿಲಿಯನ್ ವೀಕ್ಷಣೆ

ವಿಜಯಪುರ: ವಿಜಯಪುರ ತಾಲೂಕಿನ ಐತಿಹಾಸಿಕ ತಾಣವಾದ ಅಲಿಯಾಬಾದ ವಾಟರ್ ಪೆವಿಲಿಯನ್ ಸ್ಮಾರಕಕ್ಕೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆದಿಲಶಾಹಿ ಕಾಲದಲ್ಲಿ ನಿರ್ಮಿಸಲಾಗಿರುವ ಮತ್ತು ವಿಜಯಪುರ ನಗರದಿಂದ ಸುಮಾರು 13 ಕಿ. ಮೀ. ದೂರದಲ್ಲಿರುವ ಈ ಸ್ಮಾರಕ ಅಲಿಯಾಬಾದ ಗ್ರಾಮದ ಮಧ್ಯದ ಪ್ರಕೃತಿಯ ಮಡಿಲಿನಲ್ಲಿ ಸುಂದರವಾದ ಸ್ಮಾರಕವಾಗಿದೆ. ಈ ಪ್ರವಾಸಿ ಸ್ಮಾರಕವನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳ ವೀಕ್ಷಣೆ ಮಾಡಿ ಸ್ಮಾರಕ ರಕ್ಷಣೆ ಮಾಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು,

ಈ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ವಿಜಯಪುರ ತಹಸೀಲ್ದಾರ ಭೋಸಗಿ, ಅನಿಲ ಕುಮಾರ್ ಬಡಿಗೇರ ಹಾಗೂ ಕಂದಾಯ ಇಲಾಖೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌