ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಹೆಚ್ಚಿಗೆ ಹಣ ನೀಡಿ ಪೂರ್ಣಗೊಳಿಸಿ- ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಬಳಿ ಶ್ರೀ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಬಳಿ ಶ್ರೀ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಅನುಷ್ಠಾನಗೊಳಿಸಲು ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಬಜೆಟ್‌ ನಲ್ಲಿ […]

ಬಸವ ನಾಡಿನಲ್ಲಿ ಮನೆ ದೇವರಿಗೆ ಬೆಳ್ಳಿ ಪಲ್ಲಕ್ಕಿ ಅರ್ಪಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ- ಎಲ್ಲಿ ಗೊತ್ತಾ?

ವಿಜಯಪುರ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಸವ ನಾಡು ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದು ತಮ್ಮ ಮನೆ ದೇವರಿಗೆ ಪಲ್ಲಕ್ಕಿಯನ್ನು ಅರ್ಪಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರ ಉಪ್ಪಲದಿನ್ನಿ ಗ್ರಾಮಕ್ಕೆ ಆಗಮಿಸಿದ್ದ ಲಕ್ಷ್ಮಣ ಸವದಿ, ನೂತನ ಬೆಳ್ಳಿ ಪಲ್ಲಕ್ಕಿ ಹಾಗೂ ಬಸವಣ್ಣ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೋಂಡರು. ಈ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಕುಟುಂಬ ಸದಸ್ಯರು ಸುಕ್ಷೇತ್ರ ಉಪ್ಪಲದಿನ್ನಿ ಗ್ರಾಮದ ಮುಗ್ದ ಸಂಗಮೇನಾಥ ದೇವಸ್ಥಾನಕ್ಕೆ ಬೆಳ್ಳಿ ಪಲ್ಲಕ್ಕಿಯನ್ನು ಸಕಾಣಿಕೆ ನೀಡಿದರು. ಬಳಿಕ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ […]

ಆಲಮಟ್ಟಿ ಪುನರ್ವಸತಿ ಅಧಿಕಾರಿಗಳ ಕಚೇರಿ ಮೇಲೆ ಎಸಿಬಿ ಧಾಳಿ- ನಾಳೆಯವರೆಗೂ ನಡೆಯಲಿದೆ ಪರಿಶೀಲನೆ- ಯಾಕೆ ಗೊತ್ತಾ?

ವಿಜಯಪುರ: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಕೆ ಬಿ ಜೆ ಎನ್ ಎಲ್ ಪುನರ್ವಸತಿ ಅಧಿಕಾರಗಳ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಮಧ್ಯಾಹ್ನ ಧಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಎಸಿಬಿ ಎಸ್ಪಿ ಬಿ. ಎಸ್. ನೇಮೆಗೌಡ ಮಾರ್ಗದರ್ಶನದಲ್ಲಿ ವಿಜಯಪುರ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ, ಬಾಗಲಕೋಟೆ ಎಸಿಬಿ ಡಿವೈಎಸ್ಪಿ ಸುರೇಶರೆಡ್ಡಿ, ವಿಜಯಪುರ ಎಸಿಬಿ ಸಿಪಿಐ ಪರಮೇಶ್ವರ ಕವಟಗಿ, ಚಂದ್ರಕಲಾ ಹೊಸಮನಿ, ಗದಗ ಡಿವೈಎಸ್ಪಿ ದೇಸಾಯಿ ಸೇರಿ ಸುಮಾರು 20 ಜನ ಎಸಿಬಿ ಅಧಿಕಾರಿಗಳ […]

ವಿಜಯೇಂದ್ರಗೆ ನನ್ನಿಂದಲೇ ಸಚಿವ ಸ್ಥಾನ ತಪ್ಪಿದೆ- ನನ್ನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವೆ- ಯತ್ನಾಳ

ವಿಜಯಪುರ: ಬಿ. ವೈ. ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ತಪ್ಪಲು ನಾನೇ ಕಾರಣ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ನನಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬೇಡಿ ಎಂದು ಪಟ್ಟು ಹಿಡಿದ ಪರಿಣಾಮ ಅವರಿಗೆ ಸಚಿವ ಸ್ಥಾನ ತಪ್ಪಿದೆ ಎಂದು ತಿಳಿಸಿದರು. ಮಸ್ಕಿ ಬೈ ಎಲೆಕ್ಷನ್ ಯಾರ ಉಸ್ತುವಾರಿಯಲ್ಲಿ ನಡೆಯಿತು? ಅದರ ಪಲಿತಾಂಶ ಏನಾಯ್ತು? ಒಂದೇ ಕುಟುಂಬದಲ್ಲಿ ಎಷ್ಟು ಜನರಿಗೆ ಅವಕಾಶ ನೀಡಬೇಕು ಎಂದು ಪ್ರಶ್ನಿಸಿದರು. […]

ವಿಜಯಪುರದಲ್ಲಿ ಶಾಸಕ ಯತ್ನಾಳ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ವಿಜಯಪುರ: ಶಾಸಕ ಬಸವಗೌಡ ಪಾಟೀಲ ಯತ್ನಾಳ ವಿಜಯಪುರ ನಗರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ವಾರ್ಡ್ ಸಂಖ್ಯೆ 21ರಲ್ಲಿ ಬರುವ ಸಿದ್ಧೇಶ್ವರ ಬಡಾವಣೆ, ಗಡಗಿ ಲೇಔಟ್ ದಲ್ಲಿ ಇರುವ ಶ್ರೀ ಜೈ ಹನುಮಾನ ದೇವಸ್ಥಾನ ಬಳಿ ಕಂಪೌಂಡ್ ಗೋಡೆ ಗಾರ್ಡನ್ ಮೇಸ್ ಅಳವಡಿಸುವ ಕಾಮಗಾರಿಗೆ ಯತ್ನಾಳ ಭೂಮಿ ಪೂಜೆ ನೆರವೇರಿಸಿದರು. ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದಿಂದ ರೂ. 19.25 ಲಕ್ಷ ವೆಚ್ಚದ ಕಾಮಗಾರಿ ಇದಾಗಿದೆ. ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ […]

ವಿಜಯಪುರದಲ್ಲಿ ರಾಷ್ಟ್ರೀಯ ಕ್ರೀಡಾದಿನ, ಮೇ. ಧ್ಯಾನಚಂದ ಜನ್ಮದಿನ ಆಚರಣೆ

ವಿಜಯಪುರ: ವಿಜಯಪುರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಮತ್ತು ಮತ್ತು ಖ್ಯಾತ ಹಾಕಿ ಮಾಂತ್ರಿಕ ಮೇ. ಧ್ಯಾನಚಂದ ಜನ್ಮದಿನ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ವ್ಹಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಭೀಮಸೇನ ಕೋಕರೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೇ. ಧ್ಯಾನಚಂದ ಅವರು ಮಾಂತ್ರಿಕ ಹಾಕಿ ಆಟದ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹಲವಾರು ಚಿನ್ನದ ಪದಕಗಳನ್ನು ಜಯಿಸಿದ್ದರು. ಅವರಲ್ಲಿರುವ ಕಲೆಯನ್ನು ಇತರ ಕ್ರೀಡಾಪಟುಗಳು ಮೈಗೂಡಿಸಿಕೊಳ್ಳಬೇಕು ಎಂದು […]

ಮೂರು ತಲೆಮಾರುಗಳಿಂದ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಮೂಲಕ ಮೂಲಕ ಗಮನ ಸೆಳೆಯುತ್ತಿರುವ ಬಸವ ನಾಡಿನ ಪತ್ತಾರ ಕುಟುಂಬ

ವಿಜಯಪುರ: ಈ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಪರಸರಕ್ಕೆ ಪೂರಕವಾಗಿರುವ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದೆ. ಮಣ್ಣಿನ ಗಣಪ ತಯಾರಿಸಲು ಪಣತೊಟ್ಟು ಅದನ್ನೇ ನಡೆಸಿಕೊಂಡು ಬಂದಿರುವ ಕುಟುಂಬ ಎಲ್ಲರೂ ಪರಿಸರ ಸ್ನೇಹಿ ಗಣೇಶೋತ್ಸವ ನಡೆಸಲಿ ಎಂಬ ಸಂಕಲ್ಪ ಮಾಡಿದೆ. ಈ ಕುಟುಂಬದ ಮಗ ಮತ್ತು ಸೊಸೆ ವಿದೇಶದಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿದ್ದರೂ ಕೂಡ ತಂದೆಯ ಸಂಕಲ್ಪಕ್ಕೆ ಪೂರಕವಾಗಿ ನಿಂತಿರುವುದು ಗಮನಾರ್ಹವಾಗಿದೆ. ಗುಮ್ಮಟ ನಗರಿ ವಿಜಯಪುರದ ವಾಟರ್ ಟ್ಯಾಂಕ್ ಬಳಿಯ ಜೋರಾಪುರ ಪೇಟೆಯಲ್ಲಿ ನಿವೃತ್ತ […]