ಆಲಮಟ್ಟಿ ಪುನರ್ವಸತಿ ಅಧಿಕಾರಿಗಳ ಕಚೇರಿ ಮೇಲೆ ಎಸಿಬಿ ಧಾಳಿ- ನಾಳೆಯವರೆಗೂ ನಡೆಯಲಿದೆ ಪರಿಶೀಲನೆ- ಯಾಕೆ ಗೊತ್ತಾ?

ವಿಜಯಪುರ: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಕೆ ಬಿ ಜೆ ಎನ್ ಎಲ್ ಪುನರ್ವಸತಿ ಅಧಿಕಾರಗಳ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಮಧ್ಯಾಹ್ನ ಧಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬೆಳಗಾವಿ ಎಸಿಬಿ ಎಸ್ಪಿ ಬಿ. ಎಸ್. ನೇಮೆಗೌಡ ಮಾರ್ಗದರ್ಶನದಲ್ಲಿ ವಿಜಯಪುರ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ, ಬಾಗಲಕೋಟೆ ಎಸಿಬಿ ಡಿವೈಎಸ್ಪಿ ಸುರೇಶರೆಡ್ಡಿ, ವಿಜಯಪುರ ಎಸಿಬಿ ಸಿಪಿಐ ಪರಮೇಶ್ವರ ಕವಟಗಿ, ಚಂದ್ರಕಲಾ ಹೊಸಮನಿ, ಗದಗ ಡಿವೈಎಸ್ಪಿ ದೇಸಾಯಿ ಸೇರಿ ಸುಮಾರು 20 ಜನ ಎಸಿಬಿ ಅಧಿಕಾರಿಗಳ ತಂಡ ಈ ಧಾಳಿ ನಡೆಸಿದೆ.

ಆಲಮಟ್ಟಿಯಲ್ಲಿರುವ ಕೆ ಬಿ ಜೆ ಎನ್ ಎಲ್ ಪುನರ್ವಸತಿ ಅಧಿಕಾರಿಗಳ ಕಾರ್ಯಾಲಯ.

ಆಲಮಟ್ಟಿ ಜಲಾಷಯ ನಿರ್ಮಾಣದಿಂದ ಸಂತ್ರಸ್ತರಾದವರಿಗೆ 50 ನಾನಾ ಪ್ರದೇಶಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ, ಹಲವಾರು ಕಡೆಗಳಲ್ಲಿ ನಿಜವಾದ ಫಲಾನುಭವಿಗಳ ಬದಲು ಬೇರೆಯವರಿಗೆ ನಿವೇಶನ ಹಂಚಿಕೆ ಮಾಡಿ ದಾಖಲೆಗಳನ್ನು ತಿದ್ದಲಾಗಿದೆ. ಈ ಕುರಿತು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಈ ಧಾಳಿ ನಡೆಸಿದ್ದಾರೆ.

ಆಲಮಟ್ಟಿ ಪುನರ್ವಸತಿ ಅಧಿಕಾರಿಗಳ ಕಾರ್ಯಾಲಯದ ಮೇಲೆ ಧಾಳಿ ನಡೆಸಿದ ಎಸಿಬಿ ಅಧಿಕಾರಿಗಳು.

ಮೇಲ್ನೋಟಕ್ಕೆ ಮೂಲ ದಾಖಲಾತಿಗಳಲ್ಲಿ ಹಲವಾರು ಕಡೆಗಳಲ್ಲಿ ವೈಟ್ನರ್ ಹಚ್ಚಿ ಹೆಸರುಗಳನ್ನು ತಿದ್ದಲಾಗಿದೆ. ಕೆಲವೆಡೆ ನಕಲಿ ದಾಖಲಾತಿಗಳನ್ನೂ ಸೃಷ್ಠಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಧಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಈ ಕಾರ್ಯ ನಾಳೆ ಬೆಳಗಿನ ಜಾವದ ವರೆಗೂ ಮುಂದುವರೆಯುವ ನಿರೀಕ್ಷೆಯಿದೆ.

ಆಲಮಟ್ಟಿ ಪುನರ್ವಸತಿ ಅಧಿಕಾರಿಗಳ ಕಾರ್ಯಾಲಯದ ಮೇಲೆ ಧಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು.

ಈ ಕಚೇರಿಯಲ್ಲಿನ ಸಿಬ್ಬಂದಿ ಕೂಡ ಈಗ ಆಫೀಸಿನಲ್ಲಿಯೇ ಇರಬೇಕಾದ ಅನಿವಾರ್ಯತೆ ಇದ್ದು, ಸಮಗ್ರ ತನಿಖೆಗೆ ಸಾಕಷ್ಟು ಸಮಯ ತಗಲುವ ನಿರೀಕ್ಷೆಯಿದೆ ಎಂದು ಎಸಿಬಿ ಉನ್ನತ ಮೂಲಗಳು ಬಸವ ನಾಡಿಗೆ ತಿಳಿಸಿವೆ.

Leave a Reply

ಹೊಸ ಪೋಸ್ಟ್‌