ಬಸವ ನಾಡಿನಲ್ಲಿ ಮನೆ ದೇವರಿಗೆ ಬೆಳ್ಳಿ ಪಲ್ಲಕ್ಕಿ ಅರ್ಪಿಸಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ- ಎಲ್ಲಿ ಗೊತ್ತಾ?

ವಿಜಯಪುರ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಸವ ನಾಡು ವಿಜಯಪುರ ಜಿಲ್ಲೆಗೆ ಭೇಟಿ ನೀಡಿದ್ದು ತಮ್ಮ ಮನೆ ದೇವರಿಗೆ ಪಲ್ಲಕ್ಕಿಯನ್ನು ಅರ್ಪಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರ ಉಪ್ಪಲದಿನ್ನಿ ಗ್ರಾಮಕ್ಕೆ ಆಗಮಿಸಿದ್ದ ಲಕ್ಷ್ಮಣ ಸವದಿ, ನೂತನ ಬೆಳ್ಳಿ ಪಲ್ಲಕ್ಕಿ ಹಾಗೂ ಬಸವಣ್ಣ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೋಂಡರು.

ಉಪ್ಪಲದಿನ್ನಿಯಲ್ಲಿ ಧರ್ಮಸಭೆಯಲ್ಲಿ ಪಾಲ್ಗೋಂಡ ಮಾಜಿ ಡಿಸಿಎೞ ಲಕ್ಷ್ಮಣ ಸವದಿ, ಮುಖಂಡ ವಿಜುಗೌಡ ಪಾಟೀಲ.

ಈ ಸಂದರ್ಭದಲ್ಲಿ ಲಕ್ಷ್ಮಣ ಸವದಿ ಕುಟುಂಬ ಸದಸ್ಯರು ಸುಕ್ಷೇತ್ರ ಉಪ್ಪಲದಿನ್ನಿ ಗ್ರಾಮದ ಮುಗ್ದ ಸಂಗಮೇನಾಥ ದೇವಸ್ಥಾನಕ್ಕೆ ಬೆಳ್ಳಿ ಪಲ್ಲಕ್ಕಿಯನ್ನು ಸಕಾಣಿಕೆ ನೀಡಿದರು.

ಬಳಿಕ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಪ್ಪಲದಿನ್ನಿ ಮುಗ್ದ ಸಂಗಮ ನಮ್ಮನೆಯ ದೇವರು. ಈ ದೇವರಿಗೆ ಬೆಳ್ಳಿ ಪಲ್ಲಕ್ಕಿಯನ್ನು ಕಾಣಿಕೆಯಾಗಿ ನೀಡಿದ್ದೇನೆ. 12ನೇ ಶತಮಾನದ ಬಸವಣ್ಣನವರ ಸಮಕಾಲಿನರಾದ ಮುಗ್ದ ಸಂಗಮೇಶ್ವರ ಶರಣರು ಅಣ್ಣ ಬಸವಣ್ಣನವರಿಗೆ ಪ್ರೀತಿಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.

ಉಪ್ಪಲದಿನ್ನಿಯಲ್ಲಿ ನಡೆದ ಧರ್ಮ ಸಭೆ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಸ್ವಾಮೀಜಿಗಳು, ನಾನಾ ಮುಖಂಡರು.

ಈ ಸಂದರ್ಭದಲ್ಲಿ ರಾಜ್ಯ ಸಾವಯವ ಬೀಜ ಪ್ರಮಾಣನ ನಿಗಮದ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ, ಕೋಲ್ಹಾರದ ಶ್ರೀ ಕಲ್ಲಿನಾಥ ದೇವರು, ಮಮದಾಪುರದ ಶ್ರೀ ಅಭಿನವ ಮುರಗೆಂದ್ರ ಸ್ವಾಮೀಜಿ, ಇಂಗಳೇಶ್ವರ ಶ್ರೀಗಳು, ವಿಜಯಪೂರದ ವನಶ್ರೀ ಸಂಸ್ಥಾನ ಮಠದ ಶ್ರೀಗಳು, ದೇವಸ್ಥಾನ ದರ್ಮದರ್ಶಿ ಬಸವರಾಜ ದೇಸಾಯಿ, ಸಿದ್ದಣ್ಣ ದೇಸಾಯಿ, ಮಲ್ಲಿಕಾರ್ಜುನ ಗಂಗೂರಿ, ಶಿವನಗೌಡ ಬಿರಾದಾರ, ಚಂದ್ರಶೇಖರ ಪೂಜಾರಿ, ಸೋಮು ಬಿರಾದಾರ, ಸಿದ್ದಪ್ಪ ಬೀಳಗಿ, ಪ್ರಕಾಶ ಬಿರಾದಾರ ಸೇರಿದಂತೆ ನಾನಾ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌