ಆಯುಷ್ ಅರಿವು ಕಾರ್ಯಕ್ರಮ- ಡಾ. ರವಿ. ಎಸ್. ಕೋಟೆಣ್ಣವರ ಅವರಿಂದ ಉಪನ್ಯಾಸ

ಬಾಗಲಕೋಟೆ: ಬಾಗಲಕೋಟೆ ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಆಯುಷ್ ಅರಿವು ಕಾರ್ಯಕ್ರಮ ನಡೆಯಿತು.

ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಬಿವಿವಿಎಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಜಿಲ್ಯಾದ್ಯಂತ ಆಯೋಜಿಸಿರುವ ಸರಣಿ ಉಪನ್ಯಾಸ ಕಾಯ೯ಕ್ರಮದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವಿ ಎಸ್. ಕೋಟೆಣ್ಣವರ, ಸ್ವಸ್ಥ, ಸಮರ್ಥ್ಯ, ಸದೃಡ ಆರೋಗ್ಯಕ್ಕಾಗಿ ಆಯುಷ್ ಪದ್ದತಿ ಉಪಯುಕ್ತವಾಗಿದೆ. ದಿನನಿತ್ಯದ ಆರೋಗ್ಯ ಸಮಸ್ಯೆಗಳಿಗೆ ಆಯುಷ್ ಪದ್ದತಿಯಲ್ಲಿ ಪರಿಹಾರವಿದೆ. ಈ ಪದ್ಧತಿಗಳನ್ನು ಅಳವಡಿಸಿಕೊಂಡು ಆರೋಗ್ಯವಂತರಾಗಿ ಇರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎಸ್. ಎಚ್. ಚಲವಾದಿ ಮಾತನಾಡಿ, ಸನಾತನ ಭಾರತೀಯ ಋಷಿ ಮುನಿಗಳ ಕೊಡುಗೆಯಾದ ಯೋಗವನ್ನು ಅಳವಡಿಸಿಕೊಂಡರೆ ನಿರೋಗಿಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ಎ. ಆರ್. ಹಿರೇಮಠ, ಎನ್. ಬಿ. ಲೋಕರೆ, ಡಾ. ನಿಧಿ.ಬೆಳಗಾಂವಕರ ಮುಂತಾದವರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌