ಯಾವ ಕ್ಲಾಸಲ್ಲಿ ಓದ್ತಾ ಇದಿಯಮ್ಮಾ? ಕ್ಲಾಸ್ ಶುರು ಆಗಿವೆಯಾ? ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಸಿಎಂ

ಹಾವೆರಿ: ಯಾವ ಕ್ಲಾಸಲ್ಲಿ ಓದ್ತಾ ಇದಿಯಮ್ಮಾ? ಕ್ಲಾಸ್ ಶುರು ಆಗಿವೆಯಾ? ಸರಿಯಾಗಿ ಓದಮ್ಮಾ.

ಇವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹಾವೇರಿ ಜಿಲ್ಲೆಯ ತಮ್ಮ ಸ್ವಕ್ಷೇತ್ರೆ ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಅರಟಾಳ ದುಂಡಸಿ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮಕ್ಕಳಿಗೆ ಕೇಳಿದ ಪ್ರಶ್ನೆಗಳಿವು.

ಅರಟಾಳ ದುಂಡಸಿಯಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಸಿಎಂ.

ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಮುಖ್ಯಮಂತ್ರಿಗಳು ತಡಸ ಗ್ರಾಮದಿಂದ ಹೊರಟ ನಂತರ ಮಾರ್ಗಮಧ್ಯದ ಅರಟಾಳ‌ದುಂಡಸಿ ಗ್ರಾಮಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆ ವಿದ್ಯಾರ್ಥಿಗಳು ಸಿಎಂ ಅವರನ್ನು ಸ್ವಾಗತಿಸಿದರು.

ವಿದ್ಯಾರ್ಥಿಗಳೊಂದಿಗೆ ಕೆಲ ಸಮಯ ಮುಖ್ಯಮಂತ್ರಿಗಳು ಮಾತನಾಡಿದರು. ವಿದ್ಯಾರ್ಥಿನಿಯೊಬ್ಬಳನ್ನು ಕರೆದು ಮಾತನಾಡಿಸಿದ ಸಿಎಂ, ಯಾವ ಕ್ಲಾಸಲ್ಲಿ ಓದ್ತಾ ಇದ್ದೀಯಾ? ಕ್ಲಾಸುಗಳು ಆರಂಭವಾಗಿವೆಯಾ? ಏನಾದರೂ ಸಮಸ್ಯೆ ಇದೆಯಾ ಎಂದು ಪ್ರಶ್ನಿಸಿದರು.

ಅರಟಾಳ-ಧುಂಡಸಿಯಲ್ಲಿ ವಿದ್ಯಾರ್ಥಿಗಳಿಗೆಆಹಾರ ಧಾನ್ಯ ವಿತರಿಸಿದ ಸಿಎಂ

ನಂತರ ಚೆನ್ನಾಗಿ ಓದಮ್ಮಾ ಅಂತ ಸಲಹೆ ನೀಡಿದರು‌. ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು.

Leave a Reply

ಹೊಸ ಪೋಸ್ಟ್‌