ಗದಗ: ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿದ್ಯಾರ್ಥಿನಿಯರ ಆಗ್ರಹಕ್ಕೆ ಪ್ರೀತಿಯಿಂದಲೇ ಸ್ಪಂದಿಸಿದ ಘಟನೆ ಗದಗ ನಗರದಲ್ಲಿ ನಡೆಯಿತು.
ಗದಗದ ನಗರದಲ್ಲಿರುವ ಮೆಟ್ರಿಕ್ ನಂತರ ಬಾಲಕಿಯರ ಸರಕಾರಿ ವಸತಿ ನಿಲಯಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಅಪೇಕ್ಷೆ ಮೇರೆಗೆ ವಸತಿ ನಿಲಯದ ಇಬ್ಬರು ವಿದ್ಯಾರ್ಥಿನಿಯರ ಹುಟ್ಟುಹಬ್ಬದ ಕೇಕ್ ಕಟ್ ಮಾಡುವ ಮೂಲಕ ಸಚಿವರು ವಿದ್ಯಾರ್ಥಿನಿಯರ ಸಂಭ್ರಮವನ್ನು ಹೆಚ್ಚಿಸಿದರು.
ನಂತರ ಮಾತನಾಡಿದ ಸಚಿವರು, ಗಣೇಶ ಚತುರ್ಥಿ ಆಚರಿಸಲಿದ್ದೇವೆ. ಕೋವಿಡ್ ಗೈಡ್ ಲೈನ್ ಪಾಲಿಸುವದರ ಜೊತೆಗೆ ಗಣೇಶೋತ್ಸವ ಆಚರಿಸುತ್ತೇವೆ. ಹಬ್ಬ ಆಚರಣೆ ಬಗ್ಗೆ ಮುಖ್ಯಮಂತ್ರಿ ಈಗಾಗಲೇ ಸಭೆ ನಡೆಸುವುದಾಗಿ ಹೇಳಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಸಮಾರಂಭ ಮಾಡುವಾಗ ಕೋವಿಡ್ ಗೈಡ್ ಲೈನ್ ಇಟ್ಟುಕೊಂಡು ಮಾಡಬೇಕಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಭೇಟಿ ಹಣದ ವ್ಯವಹಾರಕ್ಕೆ ರಾಜ್ಯಕ್ಕೆ ಭೇಟಿ ನೀಡಿದ್ದಾರ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆರೋಪ ಮಾಡುವವರಿಗೆ ಆ ವಿಚಾರ ಗೊತ್ತಿರಬಹುದು. ಆದರೆ, ನಮ್ಮ ಪಕ್ಷದಲ್ಲಿ ಆ ವ್ಯವಸ್ಥೆ ಇಲ್ಲ. ಕುಮಾರಸ್ವಾಮಿಯವರು, ಸಿದ್ಧರಾಮಯ್ಯ ನವರು ನಮ್ಮ ಪಾರ್ಟಿ ಬಗ್ಗೆ ಹೊಗಳುತ್ತಾರೆ ಎನ್ನುವ ಭ್ರಮೆ ನಮಗಿಲ್ಲ ಎಂದು ಹೇಳಿದರು.
ಅವರ ಅನಾರೋಗ್ಯಕರ ಟೀಕೆಗೆ ಅದೇ ವೇದಿಯಲ್ಲಿ ಉತ್ತರ ನೀಡುತ್ತೇವೆ. ಸರಕಾರಿ ಕೆಲಸ ಇಲ್ಲಿ ಉತ್ತರ ಬೇಡ. ಸಂದರ್ಭದಲ್ಲಿ ಉತ್ತರಿಸುವೆ ಎಂದು ತಿಳಿಸಿದ ಸಚಿವರು, ವಿದ್ಯಾರ್ಥಿ ವೇತನ ಬಿಡುಗಡೆಯಾಗದ ಕುರಿತು ಮಾತನಾಡಿ, ಪ್ರೋತ್ಸಾಹ ಧನ ಬಂದಿಲ್ಲ ಎಂಬ ಮಾಹಿತಿ ಇದೆ. ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಕೂಡಲೇ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇನೆ. ಜಿಲ್ಲಾವಾರು ಪ್ರೋತ್ಸಾಹ ಧನ ಸಮಸ್ಯೆಯಾಗಿದೆ. ಸಭೆ ನಡೆ ನಡೆಸಿ ಬಗೆಹರಿಸುತ್ತೇನೆ ಎಂದು ತಿಳಿಸಿದರು.