ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಕಂಪನಿಗೆ ಪ್ರತಿಷ್ಠಿತ ಶೆಫ್‌ಟಾಕ್ ರಾಷ್ಟ್ರೀಯ ಪ್ರಶಸ್ತಿ

ನವದೆಹಲಿ: ದಕ್ಷಿಣ ಭಾರತದ ಪ್ರತಿಷ್ಠಿತ ಶೆಫ್‌ಟಾಕ್ ಸಂಸ್ಥೆಯ ಸಾಧನೆಯ ಕಿರೀಟಕ್ಕೆ ಇದೀಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಲಭಿಸಿದೆ. ದೆಹಲಿಯಲ್ಲಿ ಕರುನಾಡಿನ ಕಾರ್ಮಿಕರತ್ನ ಖ್ಯಾತಿಯ ಉದ್ಯಮಿ ChefTalk ಕಂಪನಿಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ನಾನಾ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟಕ್ಕಾಗಿ ನೀಡಲಾಗುವ ಪ್ರಶಸ್ತಿ ಇದಾಗಿದ್ದು, ಪ್ರತೀ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಕ್ವಾಲಿಟಿ ಫುಡ್ ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಅವಾರ್ಡ್’ ನೀಡಲಾಗುತ್ತಿದೆ. ಈ ಬಾರಿ ಈ ಪ್ರಶಸ್ತಿ ಬೆಂಗಳೂರು ಪಾಲಾಗಿದೆ. ಇಂಟರ್‌ ನ್ಯಾಷನಲ್ ಅಚೀವರ್ಸ್ ಕಾನ್ಫರೆನ್ಸ್ ಮೂಲಕ ಈ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ. ಈ ವರ್ಷ ಈ ಪ್ರತಿಷ್ಠಿತ ಪುುರಸ್ಕಾರಕ್ಕೆ ಬೆಂಗಳೂರಿನ ಸಂಸ್ಥೆ ಶೆಫ್‌ಟಾಕ್ (Cheftalk Food And Hospitality Services Pvt.Ltd) ಪಾತ್ರವಾಗಿದೆ.

ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿ ನೇತೃತ್ವದ ಈ ಶೆಫ್‌ಟಾಕ್ ಕಂಪನಿ ಬೆಂಗಳೂರಿನಲ್ಲಿ ಕೇಂದ್ರ ಸ್ಥಾನ ಹೊಂದಿದೆ. ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ, ಆಂದ್ರ ಪ್ರದೇಶ, ತೆಲಂಗಾಣ ಸಹಿತ ನಾನಾ ರಾಜ್ಯಗಳ ಆಹಾರೋದ್ಯಮ ಕ್ಷೇತ್ರದಲ್ಲಿ ಪಾರುಪತ್ಯ ಮೆರೆದಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳ ಜೊತೆ ವ್ಯಾವಹಾರಿಕ ನಂಟು ಹೊಂದುವ ಮೂಲಕ ಉತ್ಕೃಷ್ಟ ಗುಣಮಟ್ಟದ ಆಹಾರೋತ್ಪನ್ನ ಪೂರೈಕೆ ಮಾಡುತ್ತ ದೇಶದಲ್ಲಿಯೇ ಅಪ್ರತಿಮ ಸ್ಥಾನ ಗಿಟ್ಟಿಸಿಕೊಂಡಿದೆ ಎಂದು ಇಂಟರ್‌ ನ್ಯಾಷನಲ್ ಅಚೀವರ್ಸ್ ಕಾನ್ಫರೆನ್ಸ್ ಅಭಿಪ್ರಾಯಪಟ್ಟಿದೆ.

 

ಪ್ರತಿಷ್ಠಿತ ಶೆಫ್ ಟಾಕ್ ಪ್ರಶಸ್ತಿ.

ಕರ್ನಾಟಕ ಸರಕಾರಕ್ಕೂ ಹೆಮ್ಮೆ

ಬೆಂಗಳೂರು ಮೂಲದ ಶೆಫ್‌ಟಾಕ್ ಕಂಪನಿಗೆ ಈ ಪುರಸ್ಕಾರ ಬಂದಿರುವುದು ರಾಜ್ಯ ಸರಕಾರಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಮಾಹಿತಿ ತಂತ್ರಜ್ಞಾನ, ಉತ್ಪಾದನೆ ವಲಯ, ಹಾಸ್ಪಿಟಲ್ಸ್ ಹೀಗೆ ಹಲವಾರು ವಲಯಗಳಲ್ಲಿ ಉದ್ದಿಮೆಯ ವಿಸ್ತಾರ ಹೊಂದಿರುವ ಶೆಫ್‌ಟಾಕ್ ಮಾಲೀಕರು 140ಕ್ಕೂ ಹೆಚ್ಚು ಕಂಪನಿಗಳಿಗೆ ಮುಂಚೂಣಿ ಸೇವೆ ಕಲ್ಪಿಸುತ್ತಿದ್ದಾರೆ.

ಅಷ್ಟೇ ಅಲ್ಲ, ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್‌ ಮೂಲಕ ಆಹಾರ ಪೂರೈಸುತ್ತಿರುವ ಶೆಫ್‌ಟಾಕ್ ಸಂಸ್ಥೆ ಪ್ರತಿನಿತ್ಯ ಸಾವಿರಾರು ಜನರ ಹಸಿವು ನೀಗಿಸುತ್ತಿದೆ. ಅದರಲ್ಲೂ ಅಗ್ಗ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಸರಕಾರದ ಪ್ರಯತ್ನವನ್ನು ಈ ರಾಷ್ಟ್ರೀಯ ಮಟ್ಟದ ಪುರಸ್ಕಾರ ಪ್ರಮಾಣೀಕರಿಸಿದೆ ಎಂಬ ಮೆಚ್ಚುಗೆ ಅಧಿಕಾರಿಗಳಿಂದ ವ್ಯಕ್ತವಾಗಿದೆ.

ಪ್ರಶಸ್ತಿ ಪುರಸ್ಕೃತ ಗೋವಿಂದ ಬಾಬು ಪೂಜಾರಿ.

ದೆಹಲಿಯ ಇಂಟರ್‌ ನ್ಯಾಷನಲ್ ಅಚಿವರ್ಸ್ ಕಾನ್ಫರೆನ್ಸ್ ಸಮಾರಂಭದಲ್ಲಿ ಈ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಈ ಪುರಸ್ಕಾರವನ್ನು ಪ್ರದಾನ ಮಾಡಬೇಕಿತ್ತು. ಆದರೆ ಕೋವಿಡ್ ಪರಿಸ್ಥಿತಿ ಹಿನ್ನೆಲೆ ಕಾರ್ಯಕ್ರಮದ ಸ್ವರೂಪ ಬದಲಾಗಿತ್ತು. ಪ್ರಶಸ್ತಿ ಸ್ವೀಕರಿಸಿರುವ ಶೆಫ್‌ಟಾಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿ, ಇದು ತಮ್ಮ ಸಂಸ್ಥೆಯಲ್ಲಿ ದುಡಿಯುತ್ತಿರುವ 6000 ಸಿಬ್ಬಂದಿಯ ಪ್ರಯತ್ನಕ್ಕೆ ಸಂದ ಪುರಸ್ಕಾರ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌