ನಡು ರಸ್ತೆಯಲ್ಲಿ ಒಲೆಯ ಮೇಲೆ ಅಡುಗೆ ಮಾಡಿ ಪ್ರತಿಭಟನೆ ನಡೆಸಿದ ಗುಮ್ಮಟ ನಗರಿಯ ಕಾಂಗ್ರೆಸ್ ಕಾರ್ಯಕರ್ತರು

ವಿಜಯಪುರ: ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಡು ರಸ್ತೆಯಲ್ಲಿ ಒಲೆಯ ಮೇಲೆ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರಕಾರ ತೈಲ ಬೆಲೆಯನ್ನು ಹೆಚ್ಚಿಸುತ್ತಿರುವುದರ ಜೊತೆಗೆ ಈಗ ಅಡುಗೆ ಅನಿಲದ ಬೆಲೆಯನ್ನು ಗಣನೀಯವಾಗಿ ಹೆಚ್ಚಳ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಗಂಭೀರ ಹೊಡೆತ ಬಿದ್ದಿದ್ದು, ಕೊರೊನಾ ಸಂಕಷ್ಟದಲ್ಲಿ ಈಗಾಗಲೇ ತೊಂದರೆ ಇರುವ ಜನತೆಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು. ವಿಜಯಪುರ ನಗರದ ಅಂಬೇಡ್ಕರ […]

ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆ-ಐಸಿಎಂಆರ್- ಎನ್ಐಟಿಎಂ ನಡುವೆ ಒಡಂಬಡಿಕೆ

ವಿಜಯಪುರ: ವಿಜಯಪುರದ ಬಿ.ಎಲ್.ಡಿ.ಇ.ಸಂಸ್ಥೆ ಮತ್ತು ಪ್ರತಿಷ್ಠಿತ ಆಯ್‍ಸಿಎಂಆರ್-ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಷಿನ್ (ICMR–NITM), ಬೆಳಗಾವಿ ಐದು ವರ್ಷಗಳ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿವೆ. ಇಂದು ನಡೆದ ಕಾರ್ಯಕ್ರಮದಲ್ಲಿ ಬಿ. ಎಲ್. ಡಿ. ಇ. ಸಂಸ್ಥೆಯ ಪರವಾಗಿ ನಿರ್ದೇಶಕರಾದ ಶ್ರೀ. ಸುನೀಲಗೌಡ ಬಿ. ಪಾಟೀಲ ಮತ್ತು ಆಯ್‍ಸಿಎಂಆರ್ – ಎನ್‍ಆಯ್‍ಟಿಎಂ ಪರವಾಗಿ ನಿರ್ದೇಶಕರಾದ ಡಾ. ದೇಬಪ್ರಸಾದ ಚಟ್ಟೊಪಾಧ್ಯಾಯ ಈ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್. ಆಯುರ್ವೇದ […]

ಅಂದು ಸೋನು ಸೂದ್ ಇಂದು ಪವರಸ್ಟಾರ್- ಬಸವ ನಾಡಿನ ದ್ರುವತಾರೆ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ವಿಜಯಪುರ: ಅಂದು ಸೋನು ಸೂದ್ ಇಂದು ಪವರಸ್ಟಾರ್ ಪುನಿತ್ ಬಸವನಾಡಿ ದ್ರುವತಾರೆ ಕಾರ್ಯಕ್ಕೆ ಬಹುಪರಾಕ್ ಹೇಳಿದ್ದಾರೆ. ವಿಜಯಪುರದ 18ರ ಯುವಕ ದ್ರುವ ಪಾಟೀಲ 10 ವರ್ಷಗಳ ಹಿಂದೆ ಪರಿಸರ ಮತ್ತು ಪ್ರಾಣಿಗಳ ಸಂರಕ್ಷಣೆಗಾಗಿ ಆರಂಭಿಸಿರುವ Society for Protecting Planet and Animals(SPPA) ಸಂಘಟನೆ ಆರಂಭಿಸಿದ್ದು, ಈ ಸಂಘಟನೆ ಈಗಾಗಲೇ ತನ್ನ ಪರಿಸರ ಮತ್ತು ಪ್ರಾಣಿಪರ ಸೇವೆಯ ಮೂಲಕ ದೇಶವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಗಮನ ಸೆಳೆದಿದೆ. ಈ ಸಂಘಟನೆಯ ಬಗ್ಗೆ ಈಗ ಕನ್ನಡದ ಖ್ಯಾತ ನಟ, ಗಾಯಕ, […]

ಬಸವ ನಾಡಿನ ವಿಮಾನ ನಿಲ್ದಾಣದ ಟರ್ಮಿನಲ್ ಹೇಗಿರಲಿದೆ ಗೊತ್ತಾ? ಅದರ ವಿನ್ಯಾಸದ ಚಿತ್ರಗಳು ಇಲ್ಲಿವೆ ನೋಡಿ

ವಿಜಯಪುರ: ಬಸವ ನಾಡಿನ ಜನರ ಬಹುದಿನಗಳ ಗಗನಯಾನದ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿದ್ದು, ಬುರಣಾಪುರ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಮೊದಲ ಹಂತದ ಕಾಮಗಾರಿ ಶೇ. 80ರಷ್ಟು ಪೂರ್ಣವಾಗಿತ್ತಿದ್ದು, ರನ್ ವೇ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಮಾಜಿ ಡಿಸಿಎಂ ಮತ್ತು ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಈ ಕಾಮಗಾರಿಯ ಬಗ್ಗೆ ಅತೀ ಹೆಚ್ಚು ಆಸಕ್ತಿ ಹೊಂದಿದ್ದು, ಆಗಾಗ ಭೇಟಿ ನೀಡುವ ಮೂಲಕ ಕಾಮಗಾರಿ […]

ಕಾನೂನು ಗೌರವಿಸುವುದು ನಮ್ಮ ಆಧ್ಯ ಕರ್ತವ್ಯ: ವಿಜಯಪುರ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ

ವಿಜಯಪುರಛ ನಮ್ಮ ದೇಶದ ಕಾನೂನು ನಮ್ಮ ರಕ್ಷಣೆಗಾಗಿ ಇವೆ. ಅವುಗಳನ್ನು ಗೌರವಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದು ವಿಜಯಪುರ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ. ಹೊಸಮನಿ ಹೇಳಿದ್ದಾರೆ. ವಿಜಯಪುರ ನಗರದ ಜಲನಗರದ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪೌಷ್ಠಿಕ ಆಹಾರ ದಿನ ಮತ್ತು ರಾಷ್ಟ್ರೀಯ ಪೌಷ್ಠಿಕ ಸಪ್ತಾಹ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 18 ವರ್ಷದ ಒಳಗಿನ ಮಕ್ಕಳ ಕೈಯಲ್ಲಿ ಪಾಲಕರು ವಾಹನವನ್ನು ನೀಡಿದ್ದಲ್ಲಿ ಪಾಲಕರೇ ಹೊಣೆಗಾರರು ಮತ್ತು ವಾಹನ ಚಾಲನೆ ಪರವಾನಿಗೆ […]

ಆಸ್ತಿ ತೆರಿಗೆ ಬಾಕಿಯನ್ನು ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ವಸೂಲಿ ಮಾಡಲು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗಳು ಬಾಕಿ ಇರುವ ಆಸ್ತಿ ತೆರಿಗೆಯನ್ನು ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅಧಿಕಾರಿಗಳಿಗೆ ಸೂಚಿನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ವಿಜಯಪುರ ಮಹಾನಗರಪಾಲಿಕೆ ನಾನಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿಸಿ, ಅಭಿವೃದ್ಧಿಗೆ ಸಹಕರಿಸಬೇಕು. ರಸ್ತೆಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿನ ಪ್ರಚಾರ ತೆರಿಗೆ ಬಗ್ಗೆ ಪರಿಶೀಲಿಸಿ ಪ್ರಚಾರ […]

ಸಾಂಪ್ರದಾಯಿಕ ದಸರಾ ಸರಳವಾಗಿ ಆಚರಿಸಲು ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಧಾರ

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ನಾಡಹಬ್ಬ ದಸರಾವನ್ನು ಈ ಬಾರಿಯೂ ಸಾಂಪ್ರದಾಯಿಕವಾಗಿ ಮತ್ತು ಸರಳವಾಗಿ ಆಚರಿಸಲು ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2021 ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯ ನಂತರ ಮಾಧ್ಯಮದವರೊಂದಿಗೆ ಈ ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಹಾಗೂ ಮೈಸೂರು ಅರಮನೆ ಆವರಣದಲ್ಲಿ ಜಂಬೂ ಸವಾರಿ, ಹತ್ತು ದಿನಗಳ ದೀಪಾಲಂಕಾರ ಮೊದಲಾದ ಕಾರ್ಯಕ್ರಮ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮೈಸೂರು, ಚಾಮರಾಜನಗರ ಮತ್ತು ಶ್ರೀರಂಗಪಟ್ಟಣಗಳಲ್ಲಿ ದಸರಾ ಆಚರಣೆ ನಡೆಸಲು […]