ನಡು ರಸ್ತೆಯಲ್ಲಿ ಒಲೆಯ ಮೇಲೆ ಅಡುಗೆ ಮಾಡಿ ಪ್ರತಿಭಟನೆ ನಡೆಸಿದ ಗುಮ್ಮಟ ನಗರಿಯ ಕಾಂಗ್ರೆಸ್ ಕಾರ್ಯಕರ್ತರು

ವಿಜಯಪುರ: ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಡು ರಸ್ತೆಯಲ್ಲಿ ಒಲೆಯ ಮೇಲೆ ಅಡುಗೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರಕಾರ ತೈಲ ಬೆಲೆಯನ್ನು ಹೆಚ್ಚಿಸುತ್ತಿರುವುದರ ಜೊತೆಗೆ ಈಗ ಅಡುಗೆ ಅನಿಲದ ಬೆಲೆಯನ್ನು ಗಣನೀಯವಾಗಿ ಹೆಚ್ಚಳ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಗಂಭೀರ ಹೊಡೆತ ಬಿದ್ದಿದ್ದು, ಕೊರೊನಾ ಸಂಕಷ್ಟದಲ್ಲಿ ಈಗಾಗಲೇ ತೊಂದರೆ ಇರುವ ಜನತೆಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.

ಅಬ್ದುಲ್ ಹಮೀದ್ ಮುಶ್ರಿಫ್ ನೇತೃತ್ವದಲ್ಲಿ ವಿಜಯಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.

ವಿಜಯಪುರ ನಗರದ ಅಂಬೇಡ್ಕರ ಚೌಕ್ ನಲ್ಲಿ ವಿಜಯಪುರ ನಗರದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಹಾಕಿದರು. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ನಡು ರಸ್ತೆಯಲ್ಲಿಯೇ ಒಲೆಯಲ್ಲಿ ಕಟ್ಟಿಗೆಯನ್ನಿಟ್ಟು ಬೆಂಕಿ ಹೊತ್ತಿಸಿ ಉಪ್ಪಿಟ್ಟು ಮತ್ತು ಅವಲಕ್ಕಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಹಮೀದ್ ಮುಶ್ರಿಫ್, ಅಚ್ಚೆ ದಿನಗಳನ್ನು ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅಲ್ಲದೇ, ನಾ ಖಾವೂಂಗಾ, ನಾ ಖಾನೆ ದೂಂಗಾ ಎಂದೂ ಭರವಸೆ ನೀಡಿದ್ದರು. ಆದರೆ, ಈಗ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿದೆ. ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಮಹಿಳೆಯರೂ ಕೂಡ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇವೆಂಥ ಅಚ್ಚೆ ದಿನಗಳು ಎಂದು ಪ್ರಶ್ನಿಸಿದರು. ಅಲ್ಲದೇ, ಎಲ್ಲದರಲ್ಲಿಯೂ ತಿನ್ನುವುದೇ ಇವರ ಕೆಲಸವಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವೈಜನಾಥ ಕರ್ಪೂರಮಠ, ಅಬ್ಬಲ್ ರಜಾಕ್ ಹೋರ್ತಿ, ಬಾಪೂಗೌಡ ಪಾಟೀಲ(ವಡವಡಗಿ), ವಿದ್ಯಾರಾಣಿ ತುಂಗಳ, ಆರತಿ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬ್ಬೀರ ಜಾಗೀರದಾರ, ರವೀಂದ್ರ ಜಾಧವ, ಚಾಂದಸಾಬ ಗಡಗಲಾವ, ಸಜ್ಜಾದೇ ಪೀರಾ ಮುಶ್ರೀಪ, ಡಿ. ಎಚ್. ಕಲಾಲ, ಶ್ರೀದೇವಿ ಉತ್ಸಾಸರ, ಶಹಜಾನ ದುಂಡಸಿ, ಮಹ್ಮದ್ ಹನೀಪ್  ಮಕಾನದಾರ, ವಸಂತ ಹೊನಮೊಡೆ, ಚನ್ನಬಸಪ್ಪ ನಂದರಗಿ, ಶರಣಪ್ಪ ಯಕ್ಕುಂಡಿ, ಜಮೀರ್ ಬಾಂಗಿ, ಇದ್ರೂಷ್ ಶಪೀಕ್ ಬಗದಾದಿ, ಇಲಿಯಾಸ ಸಿದ್ದಿಕಿ, ರಜಾಕ್ ಕಾಖಂಡಕಿ. ಇರ್ಫಾನ್ ಶೇಖ, ಧನರಾಜ. ಎ, ಮೊಹಿನ್ ಶೇಖ, ಜಯಶ್ರೀ, ಭಾರತಿ ದೊಡಮನಿ, ರಾಜೇಶ್ವರಿ ಚೋಳಕೆ, ದೀಪಾ ಕುಂಬಾರ, ಸವಿತಾ ಧನರಾಜ, ಆಸ್ಮಾ ಕಾಲೇಬಾಗ, ಶಮೀಮ ಅಕ್ಕಲಕೋಟ, ಹಮೀದಾ ಆಯಿಷಾ ಬೇಪಾರಿ, ಹುಸೇನ ಬಾನು ಹತ್ತರಕಿಹಾಳ, ಬಳ್ಳಾರಿ, ತಿಪ್ಪಣ್ಣ ಕಮಲದಿನ್ನಿ, ಬಾಬು ಯಾಳವಾರ, ತಾಜುದ್ದೀನ ಖಲೀಪ, ನಾಸೀರ ನಾಗರಬಾವಡಿ , ಆಸೀಪ್ ಪುಂಗೀವಾಲೆ, ಆಬೀದ ಸಂಗಮ, ಎಂ. ಎಂ. ಬಕ್ಷಿ ಮುಂತಾದವರು ಉಪಸ್ಥಿತರಿದ್ದರು .

Leave a Reply

ಹೊಸ ಪೋಸ್ಟ್‌