ಬಸವ ನಾಡಿನ ವಿಮಾನ ನಿಲ್ದಾಣದ ಟರ್ಮಿನಲ್ ಹೇಗಿರಲಿದೆ ಗೊತ್ತಾ? ಅದರ ವಿನ್ಯಾಸದ ಚಿತ್ರಗಳು ಇಲ್ಲಿವೆ ನೋಡಿ

ವಿಜಯಪುರ: ಬಸವ ನಾಡಿನ ಜನರ ಬಹುದಿನಗಳ ಗಗನಯಾನದ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿದ್ದು, ಬುರಣಾಪುರ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಮೊದಲ ಹಂತದ ಕಾಮಗಾರಿ ಶೇ. 80ರಷ್ಟು ಪೂರ್ಣವಾಗಿತ್ತಿದ್ದು, ರನ್ ವೇ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

ಮಾಜಿ ಡಿಸಿಎಂ ಮತ್ತು ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಈ ಕಾಮಗಾರಿಯ ಬಗ್ಗೆ ಅತೀ ಹೆಚ್ಚು ಆಸಕ್ತಿ ಹೊಂದಿದ್ದು, ಆಗಾಗ ಭೇಟಿ ನೀಡುವ ಮೂಲಕ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಮಾನ ನಿಲ್ದಾಣದ ಟರ್ಮಿನಲ್ ವಿನ್ಯಾಸದ ಚಿತ್ರಗಳನ್ನು ಬಿಡುಗಡೆ ಮಾಡಿದ ಸಚಿವ ಗೋವಿಂದ ಕಾರಜೋಳ.

ಈ ಮಧ್ಯೆ, ಸೆಪ್ಟೆಂಬರ್ 2 ರಂದು ಈ ಕಾಮಗಾರಿ ಸ್ಥಳಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿದ್ದು, ವಿಮಾನ ನಿಲ್ದಾಣದ ಟರ್ಮಿನಲ್ ನ ನೀಲನಕ್ಷೆಯನ್ನೂ ಬಿಡುಗಡೆ ಮಾಡಿದ್ದಾರೆ.

 

ವಿಜಯಪುರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕಾಗಿ ಪಿಟಿಬಿ ಕಟ್ಟಡದ ಅಭಿವೃದ್ಧಿ ಪಡಿಸಲಾಗುತ್ತಿದೆ. ವಿಜಯಪುರ ನಗರದಿಂದ ಸುಮಾರು 15 ಕಿ. ಮೀ. ದೂರದಲ್ಲಿರುವ ಬುರಣಾಪುರದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಒಟ್ಟು 727 ಎಕರೆಯಲ್ಲಿ ಈ ವಿಮಾನ ನಿಲ್ದಾಣ ನಡೆಯುತ್ತಿದ್ದು, ವಿಮಾನ ನಿಲ್ದಾಣವನ್ನು ಎಟಿಆರ್ 72 ಅಥವಾ ಸಮಾನ ವಿಮಾನಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.

 

ಪ್ರಯಾಣಿಕರ ಟರ್ಮಿನಲ್ ಕಟ್ಟಡ ಹೇಗಿರಬೇಕು ಎಂಬುದನ್ನೂ ಈಗಾಗಲೇ ನೀಲನಕ್ಷೆ ತಯಾರಿಸಲಾಗಿದೆ. ಒಟ್ಟು ವಿಸ್ತೀರ್ಣ 2640 ಚದರ ಮೀಟರ್ ಆಗಿದ್ದು, 100 ಪ್ರಯಾಣಿಕರಿಗಾಗಿ ಗರಿಷ್ಠ ಸಮಯದಲ್ಲಿ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

 

 

ಆಗಮನ ಮತ್ತು ನಿರ್ಗಮನಕ್ಕೆ 100 ಪ್ರಯಾಣಿಕರು ಲಗೇಜ್ ನಿರ್ವಹಣೆ ಚಟುವಟಿಕೆಗಳಿಗಾಗಿ ಸರಳ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಕಟ್ಟಡದ ಮುಂಭಾಗದಲ್ಲಿ ಗಾಜಿನ ಹಾಗೂ ಉಕ್ಕಿನ ರಚನೆಗೆ ಯೋಜಿಸಲಾಗಿದೆ.

ಅಕೌಸ್ಟಿಕ್ ವಸ್ತುಗಳು ವಿಶಾಲವಾದ ನೋಟವನ್ನು ಹೊಂದಿರುವ ಹೆಚ್ಚಿನ ಪ್ರದೇಶಗಳಲ್ಲಿ ಸೀಲಿಂಗ್ ಅನ್ನು ಒದಗಿಸಲಾಗಿದೆ. ಕಟ್ಟಡದ ಒಳಗಿನ ಜಾಗವನ್ನು ಅಲ್ಯೂಮಿನಿಯಂ ಮತ್ತು ಗಾಜಿನಿಂದ ಆಂತರಿಕ ವಿಭಾಗಗಳಾಗಿ ಯೋಜಿಸಲಾಗಿದೆ

ಒಂದೇ ಮಟ್ಟದ ದೈಹಿಕ ವಿಕಲಚೇತನರಿಗೆ ವಿಶೇಷ ಕಾಳಜಿ ವಹಿಸಲಾಗಿದೆ, ಅವರಿಗಾಗಿಯೂ ವಿಶೇಷ ಸೌಲಭ್ಯವನ್ನು ಈ ಕಟ್ಟಡ ಒಳಗೊಂಡಿದೆ. ಪ್ರಯಾಣಿಕರ ಆಗಮನ, ನಿರ್ಗಮನ, ತಂಗುದಾಣ, ಶೌಚಾಲಯಗಳು, ಸಿಸಿಟಿವಿಗಳು ಎಲ್ಲ ಸೌಲಭ್ಯಗಳು ಇಲ್ಲಿದ್ದು, VRF ಕಂಡೀಷನಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಹವಾನಿಯಂತ್ರಣವನ್ನು ಒದಗಿಸಲಾಗಿದೆ. ಆಗಮನ ಮತ್ತು ನಿರ್ಗಮನ ವಲಯಗಳಲ್ಲಿ ಸಾಕಷ್ಟು ವಾಣಿಜ್ಯ ಮತ್ತು ಎಟಿಎಂಗಳನ್ನು ಒದಗಿಸಲಾಗಿದೆ.

ಅಷ್ಟೇ ಅಲ್ಲ, 200 ಕಾರುಗಳನ್ನು ಪಾರ್ಕಿಂಗ್ ಮಾಡಲು ಕೂಡ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಂಭಾವಿ ಆರ್ಕಿಟೆಕ್ಚರ್ ಫೌಂಡೇಶನ್ ಈ ವಿನ್ಯಾಸ ರೂಪಿಸಿದೆ.

Leave a Reply

ಹೊಸ ಪೋಸ್ಟ್‌