ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆ-ಐಸಿಎಂಆರ್- ಎನ್ಐಟಿಎಂ ನಡುವೆ ಒಡಂಬಡಿಕೆ

ವಿಜಯಪುರ: ವಿಜಯಪುರದ ಬಿ.ಎಲ್.ಡಿ.ಇ.ಸಂಸ್ಥೆ ಮತ್ತು ಪ್ರತಿಷ್ಠಿತ ಆಯ್‍ಸಿಎಂಆರ್-ನ್ಯಾಷನಲ್ ಇನಸ್ಟಿಟ್ಯೂಟ್ ಆಫ್ ಟ್ರೆಡಿಷನಲ್ ಮೆಡಿಷಿನ್ (ICMR–NITM), ಬೆಳಗಾವಿ ಐದು ವರ್ಷಗಳ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿವೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಬಿ. ಎಲ್. ಡಿ. ಇ. ಸಂಸ್ಥೆಯ ಪರವಾಗಿ ನಿರ್ದೇಶಕರಾದ ಶ್ರೀ. ಸುನೀಲಗೌಡ ಬಿ. ಪಾಟೀಲ ಮತ್ತು ಆಯ್‍ಸಿಎಂಆರ್ – ಎನ್‍ಆಯ್‍ಟಿಎಂ ಪರವಾಗಿ ನಿರ್ದೇಶಕರಾದ ಡಾ. ದೇಬಪ್ರಸಾದ ಚಟ್ಟೊಪಾಧ್ಯಾಯ ಈ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ್ದಾರೆ.

ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್. ಆಯುರ್ವೇದ ಮಹಾವಿದ್ಯಾಲಯ, ಎಸ್. ಎಸ್. ಎಂ. ಕಾಲೇಜ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ ಸೆಂಟರ ಮತ್ತು ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಇಜನಿಯರಿಂಗ ಕಾಲೇಜುಗಳು ಈ ಒಡಂಬಡಿಕೆಯ ವ್ಯಾಪ್ತಿಗೆ ಒಳಪಡಲಿವೆ.

ಈ ಒಡಂಬಡಿಕೆಯಂತೆ ಉಭಯ ಸಂಸ್ಥೆಗಳ ಮಧ್ಯ ಶೈಕ್ಷಣಿಕ ಕಾರ್ಯಕ್ರಮಗಳು ಬೋಧಕ ಸಿಬ್ಬಂದಿಗಳ ವಿನಿಮಯ, ಸ್ನಾತಕೋತ್ತರ ಮತ್ತು ಸಂಶೋಧನೆ ವಿದ್ಯಾರ್ಥಿಗಳ ವಿನಿಮಯ, ಜಂಟಿಯಾಗಿ ಸಂಶೋಧನೆ ನಡೆಸುವುದು, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಸೇರಿದಂತೆ ಪರಸ್ಪರ ಶೈಕ್ಷಣಿಕ ಮತ್ತು ಸಂಶೋಧನೆ ಕಾರ್ಯಕ್ರಮಗಳಿಗೆ ಪರಸ್ಪರ ಸಹಕಾರ ನೀಡುವುದು ಪ್ರಮುಖ ಉದ್ದೇಶವಾಗಳಾಗಿವೆ.

ಈ ಸಂದರ್ಭದಲ್ಲಿ ಡಾ. ದೇವಪ್ರಸಾದ ಚಟ್ಟೋಪಾಧ್ಯಾಯ ಅವರು ಬಿ ಎಲ್ ಡಿ ಇ ಸಂಸ್ಥೆಯ ಎ ವಿ ವಿ ಮಹಾವಿದ್ಯಾಲಯದ ಕುರಿತು ಮಾತನಾಡಿದರು. ಅಲ್ಲದೆ ಅಲ್ಲಿನ ಸಿಬ್ಬಂದಿ ಹಾಗೂ ಬಿ ಎಲ್ ಡಿ ಇ ಸಂಸ್ಥೆಯ ನಾನಾ ಶಿಕ್ಷಣ ಸಂಸ್ಥೆಗಳ ಸಂಶೋಧಕರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಪ್ರೊ. ಕುಶಾಲ ಕೆ. ದಾಸ, ಡಾ. ಆರ್. ವಿ. ಕುಲಕರ್ಣಿ, ಪ್ರೊ. ಕೆ. ಜಿ. ಪೂಜಾರಿ, ಶ್ರೀ ಡಿ. ಕೆ. ಅಗರವಾಲ, ಡಾ. ಬನ್ನಪ್ಪ ಉಂಗೇರ, ಡಾ. ಮನೀಶ, ಡಾ. ಆರ್.ಬಿ.ಕೊಟ್ನಾಳ, ಡಾ. ಸಂಜಯ ಕಡ್ಲಿಮಟ್ಟಿ ಮತ್ತು ಡಾ. ಅತುಲ್ ಆಯಿರೆ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌