ಅಂದು ಸೋನು ಸೂದ್ ಇಂದು ಪವರಸ್ಟಾರ್- ಬಸವ ನಾಡಿನ ದ್ರುವತಾರೆ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ವಿಜಯಪುರ: ಅಂದು ಸೋನು ಸೂದ್ ಇಂದು ಪವರಸ್ಟಾರ್ ಪುನಿತ್ ಬಸವನಾಡಿ ದ್ರುವತಾರೆ ಕಾರ್ಯಕ್ಕೆ ಬಹುಪರಾಕ್ ಹೇಳಿದ್ದಾರೆ.

ವಿಜಯಪುರದ 18ರ ಯುವಕ ದ್ರುವ ಪಾಟೀಲ 10 ವರ್ಷಗಳ ಹಿಂದೆ ಪರಿಸರ ಮತ್ತು ಪ್ರಾಣಿಗಳ ಸಂರಕ್ಷಣೆಗಾಗಿ ಆರಂಭಿಸಿರುವ Society for Protecting Planet and Animals(SPPA) ಸಂಘಟನೆ ಆರಂಭಿಸಿದ್ದು, ಈ ಸಂಘಟನೆ ಈಗಾಗಲೇ ತನ್ನ ಪರಿಸರ ಮತ್ತು ಪ್ರಾಣಿಪರ ಸೇವೆಯ ಮೂಲಕ ದೇಶವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಗಮನ ಸೆಳೆದಿದೆ.

ಈ ಸಂಘಟನೆಯ ಬಗ್ಗೆ ಈಗ ಕನ್ನಡದ ಖ್ಯಾತ ನಟ, ಗಾಯಕ, ನಿರ್ಮಾಪಕರಾದ ಪವರಸ್ಟಾರ ಪುನಿತ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ನೀಡಿರುವ ಪವರಸ್ಟಾರ್ 10 ವರ್ಷಗಳ ಹಿಂದೆ ಈ ಎನ್ ಜಿ ಓ ವನ್ನು ಅಂದು 8 ವರ್ಷದ ಬಾಲಕ ದ್ರುವ ಪಾಟೀಲ ಈ ಸಂಘಟನೆ ಆರಂಬಿಸಿದ್ದಾರೆ. ಈಗ 18 ವರ್ಷದ ಆ ಯುವಕ ಮತ್ತು ಅವರ ಸ್ನೇಹಿತರು ಪರಿಸರ ವಿಷಯಗಳ ಬಗ್ಗೆ ಗಮನ ಸೆಳೆಯುತ್ತಿದ್ದಾರೆ. 10 ವರ್ಷಗಳಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಾಣಿಗಳಿಗೆ ಸಹಾಯ ಮಾಡಿದ್ದಾರೆ. ಜೊತೆಗೆ ಒಂದು ಕೋಟಿ ಗಿಡಗಳನ್ನು ನೆಟ್ಟಿದ್ದಾರೆ. ತುಂಬಾ ದೊಡ್ಡ ವಿಷಯ. ಈ ಸಂಘಟನೆಯ ಸಂಸ್ಥಾಪಕ ದ್ರುವ ಪಾಟೀಲ ತುಂಬಾ ಒಳ್ಳೆಯ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಸೇರಿ ಈ ಎನ್ ಜಿ ಓ ಗೆ ಸಪೋರ್ಟ್ ಮಾಡೋಣ. ಸೋಷಿಯಲ್ ಮೀಡಿಯಾ ಮೂಲಕ ಫಾಲೋ ಮಾಡೋಣ. ಸಮಾಜಕ್ಕಾಗಿ ಅವರು ನೀಡುವ ಸಂದೇಶವನ್ನು ಪಾಲಿಸೋಣ ಎಂದು ಪುನಿತ ರಾಜಕುಮಾರ ಮನದುಂಬಿ ಹರಸಿದ್ದಾರೆ.

ಪವರಸ್ಟಾರ್ ಪುನಿತ್ ದ್ರುವ ಪಾಟೀಲ ಮತ್ತು ಅವರ ಸಂಘಟನೆಯ ಕುರಿತು ಪ್ರಶಂಸಿರುವ ವಿಡಿಯೋ

ಆ. 16 ರಂದು ದ್ರುವ ಪಾಟೀಲ ಕಾರ್ಯ ಮೆಚ್ಚಿ ಇನಸ್ತಾಗ್ರಾಂ ನಲ್ಲಿ ಕೊಂಡಾಡಿದ್ದ ಸೋನು ಸೂದ್

ಹೌದು. 18 ದಿನಗಳ ಹಿಂದಷ್ಟೇ ಹಿಂದಿ ಚಿತ್ರನಟ ಮತ್ತು ಕೊರೊನಾ ಸಂದರ್ಭದಲ್ಲಿ ತಮ್ಮ ಜನಸೇವೆಯ ಮೂಲಕ ದೇಶಾದ್ಯಂತ ಮನೆಮಾತಾಗಿರುವ ಸೋನು ಸೂದ್ ಬಸವ ನಾಡಿನ ದ್ರುವತಾರೆ ಧ್ರುವ ಪಾಟೀಲ ಅವರ ಕಾರ್ಯ ಮೆಚ್ಚಿ ತಮ್ಮ ಇಸಸ್ತಾಗ್ರಾಂ ನಲ್ಲಿ ಬಸವ ನಾಡಿನ 18ರ ಯುವಕ ದ್ರುವ ಪಾಟೀಲ ಪರಿಸರ ಮತ್ತು ಪ್ರಾಣಿ ಪ್ರೀತಿಯ ಬಗ್ಗೆ ಕೊಂಡಾಡಿದ್ದರು.

ಇದನ್ನು ಓದಿರಿ.

ಆ. 16 ರಂದು ಇನಸ್ತಾಗ್ರಾಂ ನಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದ ಹಿಂದಿ ಚಿತ್ರ ನಟ ಸೋನು ಸೂದ್.

ಖ್ಯಾತ ನಟ ಸೋನು ಸೂದ್ ಗಮನ ಸೆಳೆದ ಬಸವ ನಾಡಿನ ಧ್ರುವತಾರೆ- ಈ ವಿದ್ಯಾರ್ಥಿ ಮಾಡಿರುವ ಸಾಧನೆಗೆ ಜಗಮೆಚ್ಚುಗೆ

ಈ ಮೂಲಕ ದ್ರುವ ಪಾಟೀಲ ಮಾಡುತ್ತಿರುವ ಪರಿಸರಕ್ಕೆ ಪೂರಕವಾಗಿರವ ಕಾರ್ಯಕ್ಕೆ ಈಗ ವ್ಯಾಪಕ ಬೆಂಬಲ ಮತ್ತು ಪ್ರಶಂಸೆ ವ್ಯಕ್ತವಾಗುತ್ತಿದೆ.

ಅಂದಹಾಗೆ, ಈ ದ್ರುವ ಪಾಟೀಲ ಬೇರಾರು ಅಲ್ಲ, ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾಗಿದ್ದಾರೆ. ಅಲ್ಲದೇ, ಆಧುನಿಕ ಭಗೀರಥ ಎಂದೇ ಹೆಸರಾಗಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರ ಕಿರಿಯ ಪುತ್ರರಾಗಿದ್ದಾರೆ. ಈ ವಿದ್ಯಾರ್ಥಿ ಈಗ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಹಾಸ್ಪಿಟ್ಯಾಲಿಟಿ ಮತ್ತು ಟೂರಿಸಂ ಮ್ಯಾನೇಜಮೆಂಟ್ ಕೋರ್ಸ್ ಓದುತ್ತಿದ್ದಾರೆ.

ತಂದೆ ರಾಜಕೀಯದಲ್ಲಿದ್ದರೂ ತಮ್ಮಲ್ಲಿರುವ ಪರಿಸರ ಪ್ರೀತಿ ಮತ್ತು ಪ್ರತಿಭೆಯಿಂದಾಗಿ ಧ್ರುವ ಪಾಟೀಲ ಈಗ ಸ್ಟಾರ್ ಆಗಿ ಹೊರಹೊಮ್ಮುತ್ತಿರುವುದು ಬಸವ ನಾಡಿನ ಜನರಿಗೂ ಸಂತಸ ತಂದಿದೆ.

 

Leave a Reply

ಹೊಸ ಪೋಸ್ಟ್‌