ಭೂಪಂಕ, ಅದರ ವಲಯಗಳು, ತೀವ್ರತೆಯ ಪರಿಣಾಮಗಳು, ಆಗುವ ಹಾನಿಯ ಬಗ್ಗೆ ನಿಮಗೆಷ್ಟು ಗೊತ್ತು?

ವಿಜಯಪುರ: ಶನಿವಾರ ವಿಜಯಪುರ ಜಿಲ್ಲೆಯಲ್ಲಿ ಉಂಟಾದ 3.9 ತೀವ್ರತೆಯ ಭೂಕಂಪನ ಜನರನ್ನು ಆತಂಕಕ್ಕೆ ತಳ್ಳಿದೆ. ಮಧ್ಯ ರಾತ್ರಿ ವೇಳೆಗೆ ಉಂಟಾದ ಈ ಭೂಂಕಪನದಿಂದಾಗಿ ಜನತೆ ರಾತ್ರಿ ಜಿಟಿಜಿಟಿ ಮಳೆಯ ನಡುವೆಯೂ ಬೆವರುವಂತೆ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ವಿಜಯಪುರ ಜಿಲ್ಲಾಡಳಿತ ಮಹಾರಾಷ್ಟ್ರದ ಕೊಲ್ಹಾಪುರ ಈ ಭೂಕಂಪದ ಕೇಂದ್ರ ಬಿಂದುವಾಗಿದ್ದು, ರಿಟ್ಚರ್ ಮಾಪಕದಲ್ಲಿ 3.9 ರಷ್ಟು ತೀವ್ರತೆ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಭೂಕಂಪ, ಅದರ ವಲಯಗಳು, ತೀವ್ರತೆಯ ಪರಿಣಾಮಗಳು, ಆಗುವ ಹಾನಿಯ ಮಾಹಿತಿ ಇಲ್ಲಿದೆ 

ಚಿತ್ರ ಕೃಪೆ- ಅಲಾಮಿ ಫೋಟೋ ಸ್ಟಾಕ್.

 

ತೀವ್ರತೆ- ಸೂಕ್ಷ್ಮ(Micro)- 1.0 ದಿಂದ 1.9
ಅನುಭವ- ಅನುಭವಕ್ಕೆ ಬರುವುದಿಲ್ಲ
ತೀವ್ರತೆ- ಕಡಿಮೆ ಪ್ರಮಾಣ(Minor)- 2.0 ದಿಂದ 2.9
ಅನುಭವ- ಗ್ಲಾಸಿನಲ್ಲಿರುವ ನೀರು ಅಲುಗಾಡುತ್ತದೆ
ತೀವ್ರತೆ ಪ್ರಮಾಣ- ಲಘು(Minor)- 3.9 ದಿಂದ 3.9
ಅನುಭವ- ಜನರಿಗೆ ಇದು ಅನುಭವಕ್ಕೆ ಬರುತ್ತದೆ. ವಿದ್ಯುತ್ ದೀಪ ಅಲುಗಾಡಿದಂತೆ ಗೋಚರಿಸುತ್ತದೆ.
ತೀವ್ರತೆ- ಸಾಧಾರಣ ಅಥವಾ ಮಧ್ಯಮ(Light)- 4.0 ದಿಂದ 4.9
ಅನುಭವ- ವಿದ್ಯುತ್ ದೀಪ ಅಲುಗಾಡುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ವಸ್ತುಗಳು ಅಲುಗಾಡಿದಂತೆ ಕಾಣುತ್ತವೆ.
ತೀವ್ರತೆ- ಬಲವಾದ ಅಥವಾ ಗಡುಸಾದ(Moderate)- 5.0 ದಿಂದ 5.9
ಅನುಭವ- ಮನೆ ಅಥವಾ ಕಟ್ಟಡಗಳ ಕಿಟಕಿಗಳು ಅಲುಗಾಡುತ್ತವೆ. ಬಿರುಕು ಕೂಡ ಬಿಡುತ್ತವೆ.
ತೀವ್ರತೆ- ಪ್ರಮುಖ ಅಥವಾ ಭಾರಿ(Strong)- 6.0 ದಿಂದ 6.9
ಅನುಭವ- ಕಟ್ಟಡಗಳಿಗೆ ಸ್ವಲ್ಪ ಪ್ರಮಾಮದಲ್ಲಿ ಹಾನಿಯಾಗುತ್ತವೆ.
ತೀವ್ರತೆ- ಭಾರಿ(Major)- 7.0 ದಿಂದ 7.9
ಅನುಭವ- ಕಟ್ಟಡಗಳಿಗೆ ಭಾರಿ ಹಾನಿಯಾಗುತ್ತವೆ.
ತೀವ್ರತೆ- ತೀವ್ರತರವಾದ(Great)- 8.0 ದಿಂದ 8.9
ಅನುಭವ- ಕಟ್ಟಡಗಳಿಗೆ ಅತೀ ಭಾರಿ ಹಾನಿಯಾಗುತ್ತವೆ.
ತೀವ್ರತೆ- ಭಯಂಕರ(Great)- 9.0 ಮತ್ತು ಅದಕ್ಕಿಂತಲೂ ಹೆಚ್ಚು
ಅನುಭವ- ಕಟ್ಟಡಗಳಿಗೆ ಊಹಿಸಲಾಗದ ಮತ್ತು ಸಂಪೂರ್ಣವಾಗಿ ನೆಲಕ್ಕುರುಳುತ್ತವೆ.

Leave a Reply

ಹೊಸ ಪೋಸ್ಟ್‌