ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ಜೊಲ್ಲೆ ದಂಪತಿ-ಮಠಾಧೀಶರ ಮಾರ್ಗದರ್ಶನದಲ್ಲಿ ನಡೆಯುವೆ- ಶಶಿಕಲಾ ಜೊಲ್ಲೆ

ಬೆಂಗಳೂರು: ಮುಜರಾಯಿ, ಹಜ್ ಮತ್ತು ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಬಿಜೆಪಿ ಲೋಕಸಭೆ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ದಂಪತಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಗುರುವಂದನೆ ಸಲ್ಲಿಸಿ ಬಳಿಕ ನಡೆದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು.

ಮುಜರಾಯಿ ಇಲಾಖೆ ನಾಡಿನ ಕೋಟ್ಯಂತರ ಶ್ರದ್ಧೆ ಸದಾಚಾರಗಳಿಗೆ ಸಂಬಂಧಿಸಿರುವ ಇಲಾಖೆಯಾಗಿರುವುದರಿಂದ ಶತಶತಮಾನಗಳಿಂದ ಈ ನೆಲದಲ್ಲಿ ಆ ಸಂಸ್ಕಾರ ಸಂಸ್ಕೃತಿಯ ಕೇಂದ್ರಗಳೆನಿಸಿದ ನಾಡಿನ ನೂರಾರು ಮಠಾಧೀಶರುಗಳ ಮಾರ್ಗದರ್ಶನ ಪಡೆದು ಕರ್ತವ್ಯ ನಡೆಸುವೆ ಎಂದು ತಿಳಿಸಿದರು.

ಮುಜರಾಯಿ ಇಲಾಖೆ ಮೂಲಕ ಶ್ರೀಗಳು ನಡೆಸುತ್ತಿರುವ ಜ್ಞಾನ ಕಾರ್ಯ ಮತ್ತು ಗೋ ಸೇವಾ ಚಟುವಟಿಕೆಗಳಿಗೆ ಸಹಕಾರ ನೀಡಲಾಗುವುದು ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

ಜೊಲ್ಲೆ ದಂಪತಿಯವರನ್ನು ಸನ್ಮಾನಿಸಿದ ಶ್ರೀಗಳು, ಜೊಲ್ಲೆ ದಂಪತಿಯಿಂದ ನಾಡಿಗೆ ಯಶಸ್ವಿಯಾದ ಸೇವೆ ಸಿಗಲಿ. ಶ್ರೀ ಕೃಷ್ಣನು ಅವರನ್ನು ವಿಶೇಷವಾಗಿ ಅನುಗ್ರಹಿಸಲಿ ಎಂದು ಆಶೀರ್ವದಿಸಿದರು.

ಇದಕ್ಕೂ ಮುಬ್ನ ವಿದ್ಯಾಪೀಠಕ್ಕೆ ಆಗಮಿಸಿದ ಜೊಲ್ಲೆ ದಂಪತಿಯವರನ್ನು ವಿದ್ಯಾಪೀಠದ ಪರವಾಗಿ ಪೂರ್ಣಕುಂಭ ಸ್ವಾಗತ ನೀಡಲಾಯಿತು.

Leave a Reply

ಹೊಸ ಪೋಸ್ಟ್‌