ಡೋಣಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ- ಎಲ್ಲಿ ಗೊತ್ತಾ?

ವಿಜಯಪುರ: ತುಂಬಿ ಹರಿಯುತ್ತಿದ್ದ ಡೋಣಿ ನದಿಯನ್ನು ದಾಟಲು ಯತ್ನಿಸಿದ ಬೈಕ್ ಸವಾರನೊಬ್ಬ ಕೊಚ್ಚಿ ಹೋಗುತ್ತಿದ್ದಾಗ, ಆತನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಡಗಿನಾಳ ಡೋಣಿ ಸೇತುವೆ ಬಳಿ ನಡೆದಿದೆ.

ಈ ಸೇತೇವೆ ಡೋಣಿ ನಧಿಯ ಕೆಳಮಟ್ಟದಲ್ಲಿದ್ದು ತುಂಬಿ ಹರಿಯುತ್ತಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಮೂಕಿಹಾಳ ಗ್ರಾಮದ ಯುವಕ ಇಸ್ಮಾಯಿಲ ಭಾವಿಕಟ್ಟಿ(23) ನೀರಿನ ಆಳವನ್ನು ಗಮನಿಸದೇ ಭಂಡ ಧೈರ್ಯದಿಂದ ಬೈಕಿನಲ್ಲಿ ಸಂಚರಿಸಿದ್ದಾರೆ. ಆಗ ಬೈಕ್ ಸಮೇತವಾಗಿ ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದಾಗ ನಧಿಯ ಪೊದೆಯಲ್ಲಿದ್ದ ಮುಳ್ಳಿನ ಕಂಟಿಯನ್ನು ಹಿಡಿದುಕೊಂಡು ಕೂಗಲಾರಂಬಿಸಿದ್ದಾನೆ. ಈ ಸಮಯದಲ್ಲಿ ನಧಿಯ ಪಕ್ಕದಲ್ಲಿದ್ದ ಜನರು ಆತನ ರಕ್ಷಣೆಗಾಗಿ ಕೂಡಲೇ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ಆಗ ಸ್ಥಳಕ್ಕೆ ತಮ್ಮ ಸಿಬ್ಬಂದಿಯೊಡನೆ ದೌಡಾಯಿಸಿದ ಅಗ್ನಿಶಾಮಕ ಠಾಣೆಯ ಶಂಕರಗೌಡ ನರಸಲಗಿ ಅವರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಹಡಗಿನಾಳ ಗ್ರಾಮಸ್ಥರ ಸಹಾಯದೊಂದಿಗೆ ಹಗ್ಗದದಿಂದ ಆ ಯುವಕನನ್ನು ರಕ್ಷಿಸಿದ್ದಾರೆ. ಅಲ್ಲದೇ, ಬೈಕ್‌ನ್ನು ಕೂಡ ಹೊರ ತೆಗೆದಿದ್ದಾರೆ.
ಜಿಲ್ಲೆಯ ನಾನಾ ಭಾಗಗಳಲ್ಲಿ ಸುರಿದ ಮಳೆಯಿಂದ ಡೋಣಿ ನಧಿಯ ಕೆಳಮಟ್ಟದ ಸೇತುವೆ ಮುಳುಗಡೆಯಾಗಿದೆ. ಅಲ್ಲದೇ, ನಧಿಯ ದಡದಲ್ಲಿ ತಾಲೂಕಾಡಳಿತದ ಅಧಿಕಾರಿಗಳು ಏಚ್ಚರಿಕೆಯ ನಾಮಫಲಕಗಳನ್ನು ಅಳವಡಿಸಿದ್ದರೂ ಕೂಡಾ ಹಡಗಿನಾಳ ಗ್ರಾಮದಿಂದ ಕೂಲಿ ಮತ್ತೀತರ ಕೆಲಸಗಳಿಗೆ ಆಗಮಿಸುವ ಗ್ರಾಮಸ್ಥರು ಜೀವದ ಭಯವಿಲ್ಲದೆ ಈ ಸೇತುವೆಯ ಮೇಲೆ ಸಂಚರಿಸುವುದು ಅವರ ಭಂಡತನಕ್ಕೆ ಸಾಕ್ಷಿಯಾಗಿದೆ.

ನೀರುಪಾಲಾಗುತ್ತಿದ್ದ ಯುವಕನನ್ನು ರಕ್ಷೀಸಿದ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳಿಗೆ ಹಾಗೂ ಸಹಾಯಕರಾದ ಯುವಕ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ರಕ್ಷಣಾ ಸಮಯದಲ್ಲಿ ಅಗ್ನಿ ಶಾಮಕ ಠಾಣೆಯ ಶಂಕರಗೌಡ ನರಸಲಗಿ, ಜ್ಯೋತಿಬಾ ಶೇವಳಂಕರ, ಪ್ರಭು ಸಣ್ಣಕ್ಕಿ, ಸಂತೋಷ ಲಮಾಣೆ, ಹಣಮಂತ ಮಡಿವಾಳರ ಮುಂತಾದವರು ಪಾಲ್ಗೋಂಡಿದ್ದರು.

 

Leave a Reply

ಹೊಸ ಪೋಸ್ಟ್‌